ಕಾಪು ಇಂದಿರ ಗಾಂಧಿಯವರ ಜನ್ಮ ಶತಾಭ್ದಿ: ಇಂದಿರಮ್ಮ ನೂರು ದೀಪಗಳ ನಮನ – ಜ್ಯೋತಿ ನಡಿಗೆ
ಕಾಪು :ಸಾಮಾಜಿಕ ಕ್ಷೇತ್ರದಲ್ಲಿ ಮಾಜಿ ಪ್ರಧಾನಿ ದಿ. ಇಂದಿರಾ ಗಾಂಧಿಯವರ ಸೇವೆ ಸುವರ್ಣಾಕ್ಷರದಲ್ಲಿ ಬರೆದಿಡುವಂಹದ್ದು ಎಂದು ಕಾಪು ಶಾಸಕ, ಮಾಜಿ ಸಚಿವ ವಿನಯಕುಮಾರ್ ಸೊರಕೆ ಹೇಳಿದ್ದಾರೆ.
ಅವರು ಭಾನುವಾರ ಕಾಪು ಕಾಂಗ್ರೆಸ್ ಕಾಪು ರಾಜೀವ ಭವನದಲ್ಲಿ ಆಯೋಜಿಸಿದ ಇಂದಿರಾ ಗಾಂಧಿಯವರ ಜನ್ಮ ಶತಾಬ್ಧಿ ವರ್ಷದ ಇಂದಿರಮ್ಮ ನೂರು ದೀಪಗಳ ನಮನ ಕಾರ್ಯಕ್ರಮದಲ್ಲಿ ದೀಪ ಪ್ರಜ್ವಲಿಸಿದ ನಂತರ ಮಾತನಾಡಿದರು.
ದಿವಂಗತ ಇಂದಿರಾ ಗಾಂಧಿಯವರು ಬಡವರ ಪರವಾಗಿದ್ದು, ಅವರು ಧೀರತೆಯಲ್ಲಿ ಕೈಗೊಂಡ ಉಳುವವನೇ ಹೊಲದೊಡೆಯ ಕಾರ್ಯಕ್ರಮದಿಂದಾಗಿ ಭಾರತದಾದ್ಯಂತ ಸಾವಿರಾರು ರೈತರು ನಿಮಿಷಾರ್ಧದಲ್ಲಿ ಜಮೀನಿನ ಮಾಲೀಕರಾಗಿದ್ದಾರೆ. ಅವರು ಕೈಗೊಂಡ ಅತ್ಯಂತ ಉತ್ತಮ ಕೆಲಸಗಳಲ್ಲಿ ಬ್ಯಾಂಕುಗಳ ರಾಷ್ಟ್ರೀಕರಣವೂ ಕೂಡಿದೆ. ಜಾತ್ಯಾತೀಯತೆಯಲ್ಲಿ ಅತ್ಯಂತ ವಿಶ್ವಾಸ ಇದ್ದ ಅವರಿಗೆ ಅತೀ ವಿಶ್ವಾಸವೇ ಮುಳುವಾದುದು ಇತಿಹಾಸ ಎಂದೂ ಸೊರಕೆ ಹೇಳಿದ್ದಾರೆ.
ಮೊದಲಿಗೆ ನೆರೆದ ಮಹಿಳೆಯರೆಲ್ಲರೂ ಇಂದಿರಾ ಗಾಂಧಿಯವರ ಶತಾಬ್ಧಿ ಕಾರ್ಯಕ್ರಮದಲ್ಲಿ ನೂರು ಹಣತೆಗಳ್ಲಲಿ ದೀಪ ಪ್ರಜ್ವಲಿಸಿ ಪುಷ್ಪ ನಮನ ಸಲ್ಲಿಸಿದರು.
ಈ ಸಂದರ್ಭ ಕಾಪು ಕಾಂಗ್ರೆಸ್ ಅಧ್ಯಕ್ಷ ನವೀನ್ಚಂದ್ರ ಜೆ ಶೆಟ್ಟಿ, ಡಾ. ದೇವಿಪ್ರಸಾದ್ ಶೆಟ್ಟಿ, ಸರಸು ಬಂಗೇರಾ, ಹರೀಶ್ ನಾಯಕ್, ಉಸ್ತುವಾರಿ ಅಶೋಕ್ ಕುಮಾರ್ ಕೊಡವೂರು, ಕಾಪು ಪುರಸಭಾ ಅಧ್ಯಕ್ಷೆ ಸೌಮ್ಯ ಸಂಜೀವ, ಯುವ ಕಾಂಗ್ರೆಸ್ ರಾಜ್ಯ ಕಾರ್ಯದರ್ಶಿ ಅಬ್ದುಲ್ ಅಜೀಜ್, ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಗೀತಾ ವಾಗ್ಲೆ, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ವಿಶ್ವಾಸ್ ಅಮೀನ್, ಪಕ್ಷದ ಮುಖಂಡರಾದ ಅಮೃತ್ ಶೆಣೈ, ವಿನಯ ಬಲ್ಲಾಳ್, ವೈ ಸುಕುಮಾರ್, ಹರೀಶ್ ಶೆಟ್ಟಿ ಪಾಂಗಾಳ, ಗೋಪಾಲ್ ಪೂಜಾರಿ ಪಲಿಮಾರು, ದೀಪಕ್ ಕುಮಾರ್ ಎರ್ಮಾಳು, ಮೆಲ್ವಿನ್ ಡಿ ಸೋಜ, ನವೀನ್ ಎನ್. ಶೆಟ್ಟಿ, ಸುನೀಲ್ ಬಂಗೇರ, ರಾಜೇಶ್ ರಾವ್ ಪಾಂಗಾಳ, ಜಿ.ಪಂ., ತಾ.ಪಂ., ಪುರಸಭೆ ಮತ್ತು ಗ್ರಾ.ಪಂ. ಚುನಾಯಿತ ಪ್ರತಿನಿಧಿಗಳು ಉಪಸ್ಥಿತರಿದ್ದರು.
ಕಾಪು ವಿಧಾನಸಭಾ ಕ್ಷೇತ್ರ ಯುವ ಕಾಂಗ್ರೇಸ್ – ಇಂದಿರಾ ಜ್ಯೋತಿ ನಡಿಗೆ
ಕಾಪು ವಿಧಾನಸಭಾ ಕ್ಷೇತ್ರ ಯುವ ಕಾಂಗ್ರೇಸ್ ವತಿಯಿಂದ ಕಾಪು ಪೇಟೆಯಿಂದ ರಾಜೀವ್ ಭವನವರೆಗೆ ಮಾಜಿ ಪ್ರಧಾನಿ ದಿವಂಗತ ಇಂದಿರ ಗಾಂಧಿಯವರ ಜನ್ಮ ಶತಾಭ್ದಿ ಪ್ರಯುಕ್ತ ಇಂದಿರಾ ಜ್ಯೋತಿ ನಡಿಗೆ ಕಾರ್ಯಕ್ರಮ ನಡೆಯಿತು.
ಕಾಪು ವಿಧಾನ ಸಭಾ ಯುವಕಾಂಗ್ರೇಸ್ ಅಧ್ಯಕ್ಷರಾದ ಮೆಲ್ವಿನ್ ಡಿ’ಸೋಜ ರವರು ಮಾಜಿ ಪ್ರಧಾನಿ ದಿವಂಗತ ಇಂದಿರಾ ಗಾಂಧಿ ಅವರು ದೇಶಕ್ಕೆ ನೀಡಿದ ಮಹತ್ತರವಾದ ಸೇವೆಯನ್ನು ಸ್ಮರಿಸಿ ಮಾತನಾಡಿದರು.
ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾಯ೯ದಶಿ೯ ಅಬ್ದುಲ್ ಅಜೀಜ್ ರವರು ಇಂದಿರಾ ಜ್ಯೋತಿ ಬೆಳಗಿಸಿ ನಡಿಗೆಗೆ ಚಾಲನೆ ನೀಡಿದರು.ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರಾದ ವಿಶ್ವಾಸ್ ಅಮೀನ್, ಯುವ ಕಾಂಗ್ರೆಸ್ ಪ್ರಧಾನ ಕಾಯ೯ದಶಿ೯ಗಳಾದ ನಿಯಾಜ್, ಅರುಣ್ ಪೂಜಾರಿ, ರಶೀದ್, ತನುಜ್ ಕಕೇ೯ರ, ದೀಪಕ್ ಕುಮಾರ್ ಎಮಾ೯ಳ್, ಸದಾನಂದ ಶೆಟ್ಟಿ, ಮೈಕಲ್ ರಮೇಶ್ ಡಿಸೋಜ, ಮುನಾಜ್, ಹುಸೇನ್, ಫಜಲ್ ಶೇಕ್, ಸಿರಾಜ್,ಅಕ್ಬರ್, ಲಿಯಾಕತ್ ಹುಸೇನ್, ರಾಯನ್, ಜೀವನ್,ಜೋಯಲ್ ಮತಾಯಸ್, ಕ್ರಿಸ್ಟನ್ ಅಲ್ಮೇಡ, ಹಷಿ೯ತ್ ಅಚಾಯ೯ ಹಾಜರಿದ್ದರು.