ಕಾಪು ಪುರಸಭಾ ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗೆ ಸೊರಕೆ ಚಾಲನೆ
ಕಾಪು: ಕಾಪು ಪುರಸಭಾ ವ್ಯಾಪ್ತಿಯ ಕಾಂತಾನಾಧಿಕಾರಿ ಧೂಮಾವತಿ ದೇವಸ್ಥಾನದ ವಿವಿಧ ಕಾಮಗಾರಿಗಳ ಉದ್ಘಾಟನಾ ಸಮಾರಂಭ ಪೈಯ್ಯಾರು ದೇವಸ್ಥಾನದ ಆವರಣದಲ್ಲಿ ನಡೆಯಿತು. ಕಾಪು ಶಾಸಕ ವಿನಯ್ ಕುಮಾರ್ ಸೊರಕೆ ವಿವಿಧ ಕಾಮಗಾರಿಯನ್ನು ಉದ್ಘಾಟಿಸಿದರು.
ಸುಮಾರು ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾದ ದೇವಸ್ಥಾನಕ್ಕೆ ಸಂಪರ್ಕ ಕಲ್ಪಿಸುವ ಕಾಂಕ್ರೀಟಿಕರಣ ಮತ್ತು 6 ಲಕ್ಷ ರೂ ವೆಚ್ಚದಲ್ಲಿ ದೇವಸ್ಥಾನಕ್ಕೆ ಇಂಟರ್ ಲಾಕ್ ಹಾಕಿ ಅಭಿವೃದ್ಧಿ ಗೊಳಿಸಿದ ಕಾಮಗಾರಿಯನ್ನು ಶಾಸಕರು ಉದ್ಘಾಟಿಸಿದರು.
ದೇವಸ್ಥಾನದ ಆಡಳಿತ ಮೊಕ್ತೇಸರ ಶಿವ ನಾಯಕ್, ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ದಿವಾಕರ ಡಿ. ಶೆಟ್ಟಿ, ಕುತ್ಯಾರು ಪಂಚಾಯತ್ ಅಧ್ಯಕ್ಷ ರಾಜೇಶ್ ಮೂಲ್ಯ, ಜಿಲ್ಲಾ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಗಣೇಶ್ ನಾಯಕ್, ಗೋಪಾಲ ನಾಯಕ್, ದಿವಾಕರ ಬಿ. ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ಕಲ್ಯಾ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನ ಹಿಂಬದಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಿಲಾನ್ಯಾಸ
ಕಾಪು ಪುರಸಭಾ ವ್ಯಾಪ್ತಿಯ ಕಲ್ಯಾ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನ ಹಿಂಬದಿ ರಸ್ತೆ ಅಭಿವೃದ್ಧಿ ಕಾಂಕ್ರೀಟಿಕರಣಕ್ಕೆ ಶಿಲಾನ್ಯಾಸ ಸಮಾರಂಭ ಕಾಪುವಿನ ಕಲ್ಯದಲ್ಲಿ ನೆರವೇರಿತು.
ಕಾಪು ಶಾಸಕ ವಿನಯ್ ಕುಮಾರ್ ಸೊರಕೆ 25 ಲಕ್ಷ ರೂ ವೆಚ್ಚದ ನಗರೋತ್ಫಾನ ಯೋಜನೆಯಡಿಯಲ್ಲಿ ನಿರ್ಮಾಣವಾಗುವ ರಸ್ತೆ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಿದರು.
ವಿದ್ವಾನ್ ಪಂಜ ಬಾಸ್ಕರ ಭಟ್,ಪುರಸಭಾ ಸದಸ್ಯ ಲಕ್ಷ್ಮೀಶ ತಂತ್ರಿ ಸುರೇಶ್ ದೇವಾಡಿಗ, ಕಾಪು ವಲಯ ಬ್ರಾಹ್ಮಣ ಪದಾಧೀಕಾರಿಗಳಾದ ವಿದ್ಯಾದರ ಪುರಾಣಿಕ್, ಲಕ್ಷ್ಮೀನಾರಾಯಣ ತಂತ್ರಿ, ರವಿ ಕುಮಾರ್, ಪುರಸಭಾ ಅಧ್ಯಕ್ಷೆ ಮಾಲಿನಿ, ಉಪಾಧ್ಯಕ್ಷ ಉಸ್ಮಾನ್ ಉಪಸ್ಥಿತರಿದ್ದರು.