ಕಾಪು ಪೊಲೀಸರಿಂದ ಅಕ್ರಮ ಕಸಾಯಿ ಖಾನೆಗೆ ದಾಳಿ – ಇಬ್ಬರ ಬಂಧನ
ಕಾಪು: ಯಾವುದೇ ಪರವಾನಿಗೆ ಇಲ್ಲದೇ ಅಕ್ರಮವಾಗಿ ದನ ಕರುಗಳನ್ನು ತಂದು ಮಾಂಸ ಮಾಡುತ್ತಿದ್ದ ಅಡ್ಡೆಗೆ ಕಾಪು ಪೊಲೀಸರು ದಾಳಿ ನಡೆಸಿ ಇಬ್ಬರನ್ನು ಬಂಧಿಸಿ ರೂ 52,250/- ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಬಂಧಿತ ಆರೋಪಿಗಳನ್ನು ಮಣಿಪುರ ಗ್ರಾಮದ ಅಶ್ರಫ್ (31) ಮತ್ತು ಸಿನಾನ್ (19) ಎಂದು ಗುರುತಿಸಲಾಗಿದೆ.
ಏಪ್ರಿಲ್ 19 ರಂದು ಬೆಳಿಗ್ಗೆ 08:00 ಗಂಟೆಗೆ ಕಾಪು ಪೊಲೀಸ್ ಠಾಣೆಯ ಪೊಲೀಸ್ ಉಪನೀರಿಕ್ಷಕ ರಾಜಶೇಖರ್ ಬಿ ಸಾಗನೂರು ಅವರು ಹೆಜಮಾಡಿ ಚೆಕ್ ಪೋಸ್ಟ್ ಕರ್ತವ್ಯದಲ್ಲಿರುವಾಗ ಮಣಿಪುರ ಗ್ರಾಮದ ಮಣಿಪುರ ವೆಸ್ಟ್ ನ ಮಸೀದಿ ರಸ್ತೆಯ ಪಾಪನಾಶಿನಿ ನದಿಯ ಸಮೀಪದಲ್ಲಿರುವ ರಜಾಬ್ ರವರ ಕಟ್ಟಡದಲ್ಲಿ ದನಗಳನ್ನು ಮಾಂಸ ಮಾಡಿ ಮಾರಾಟ ಮಾಡಲು ತಯಾರಿ ಮಾಡುತ್ತಿರುವುದಾಗಿ ಬಂದ ಮಾಹಿತಿಯಂತೆ ದಾಳಿ ನಡೆಸಿದ್ದು ಆರೋಪಿಗಳಾದ ಅಶ್ರಫ್ ಮತ್ತು ಸಿನಾನ್ ಅವರು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳಿಂದ ಒಡಿ ಹೋದ ಆರೋಪಿಗಳ ಮಾಹಿತಿ ಪಡೆದಿದ್ದು, ತಪ್ಪಿಸಿಕೊಂಡ ಆರೋಪಿಗಳು ಅಶ್ರಫ್ ಮಣಿಪುರ, ರಶೀದ್ ಮಣಿಪುರ, ರಜಾಬ್ ಮಣಿಪುರ ಮತ್ತು ಮೊಯಿದ್ದಿನ್ ಮಣಿಪುರ ಎಂದು ತಿಳಿದುಬಂದಿದ್ದು ಆರೋಪಿಗಳು ಯಾವುದೇ ಪರವಾನಿಗೆ ಇಲ್ಲದೇ ಎಲ್ಲಿಂದಲೋ ದನ ಕರುಗಳನ್ನು ಕದ್ದು ತಂದು ಕಾರಿನಲ್ಲಿ ದನದ ಮಾಂಸವನ್ನು ಕೊಂಡೊಯ್ಯದು ಮಾರಾಟ ಮಾಡುತ್ತಿರುವುದು ತಿಳಿದು ಬಂದಿರುವುದರಿಂದ ಸ್ಥಳದಲ್ಲಿದ್ದ ಸೊತ್ತುಗಳನ್ನು ಸ್ವಾಧೀನ ಪಡಿಸಿಕೊಂಡಿದ್ದಾರೆ. ವಶಪಡಿಸಿಕೊಂಡ ಸೊತ್ತುಗಳ ಒಟ್ಟು ಮೌಲ್ಯ ರೂ 52,250/- ಆಗಿರುತ್ತದೆ.
ಆರೋಪಿಗಳ ವಿರುದ್ದ ಕಾಪು ಪೊಲೀಸ್ ಠಾಣೆಯಲ್ಲಿ ಕಲಂ:4,5,9,11 ಕರ್ನಾಟಕ ಗೋಹತ್ಯಾ ನಿಷೇಧ ಕಾಯ್ದೆ ಮತ್ತು ಕಲಂ 11(1) (ಡಿ) ಪ್ರಾಣಿ ಹಿಂಸಾ ಪ್ರತಿಬಂಧಕ ತಡೆ ಕಾಯ್ದೆ 1966 ಹಾಗೂ ಕಲಂ: 379 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.