ಕಾಪು ಪೊಲೀಸರ ಕ್ಷಿಪ್ರ ಕಾರ್ಯಾಚರಣೆ – ಉದ್ಯಾವರ ಮನೆಗಳ್ಳತನದ ಆರೋಪಿಯ ಬಂಧನ
ಕಾಪು: ಕ್ಷಿಪ್ರ ಕಾರ್ಯಾಚರಣೆಯಲ್ಲಿ ಉದ್ಯಾವರದಲ್ಲಿ ಮನೆಗಳ್ಳತನ ಮಾಡಿದ ಆರೋಪಿಯನ್ನು ಕಾಪು ಪೊಲೀಸರ ತಂಡ ಬಂಧಿಸಿದೆ.
ಬಂಧಿತ ಆರೋಪಿಯನ್ನು ಉದ್ಯಾವರ ಸಂಪಿಗೆನಗರ ನಿವಾಸಿ ದಿನೇಶ್ ರಾವ್ ಎಂದು ಗುರುತಿಸಲಾಗಿದೆ.
ಅಗಸ್ಟ್ 27 ರಂದು ಉದ್ಯಾವರ ಕಂಪನ ಬೆಟ್ಟು ನಿವಾಸಿ ಉದಯ್ ಶೆಟ್ಟಿ ಎಂಬವರು ತಾನು ಉಸ್ತುವಾರಿ ನೋಡಿಕೊಂಡ ತಮ್ಮ ಮನೆಯ ಸಮೀಪದ ಫ್ಲೋರಿನ ಮೆಂಡೋನ್ಸ ಎಂಬುವರ ಮನೆಯಿಂದ ಟಿವಿ ಅಲ್ಯೂಮಿನಿಯಂ ಪಾತ್ರೆಗಳು ,ಗ್ಯಾಸ್ ಸಿಲಿಂಡರ್, ಸೀಲಿಂಗ್ ಫ್ಯಾನ್ ಹಾಗೂ ಇತರೆ ಸೊತ್ತುಗಳನ್ನು ಕಳ್ಳರು ಕಳ್ಳತನ ಮಾಡಿದ್ದಾರೆ ಎಂದು ದೂರು ನೀಡಿದ್ದರು.
ದೂರಿನ ಆಧಾರದ ಮೇಲೆ ಕಾರ್ಯಾಚರಣೆ ಆರಂಭಿಸಿದ ಕಾಪು ಪೊಲೀಸರು ಅಗಸ್ಟ್ 27ರ ರಾತ್ರಿ ಕಾಪು ಪಿ ಎಸ್ ಐ ಆರ್ ಗಡ್ಡೇಕರ್ ಅವರು ರಾತ್ರಿ ರೌಂಡ್ಸ್ ನಲ್ಲಿರುವ ವೇಳೆ ಉದ್ಯಾವರ ಜೈಹಿಂದ್ ಕಾಂಪ್ಲೆಕ್ಸ ಹತ್ತಿರ ಅನುಮಾನಸ್ಪದವಗಿ ನಿಂತಿದ್ದ ಆರೋಪಿ ದಿನೇಶ್ ರಾವ್ ನನ್ನು ವಶಕ್ಕೆ ಪಡೆದು ಆತನನ್ನು ವಿಚಾರಣೆ ನಡೆಸಿ ಆತನು ಕಳವು ಮಾಡಿ ತನ್ನ ಮನೆಯಲ್ಲಿ ಇಟ್ಟಿದ್ದ ಸುಮಾರು 24000 ರೂ ಮೌಲ್ಯದ ಸೊತ್ತುಗಳಾದ ಟಿವಿ ಅಲ್ಯೂಮಿನಿಯಂ ಪಾತ್ರೆಗಳು ,ಗ್ಯಾಸ್ ಸಿಲಿಂಡರ್, ಸೀಲಿಂಗ್ ಫ್ಯಾನ್ ತಾಮ್ರದ ಪಾತ್ರೆಗಳನ್ನು ಸ್ವಾದಿನಪಡಿಸಿಕೊಂಡಿದ್ದಾರೆ.
ಬಂಧಿತ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು ನ್ಯಾಯಾಲಯ ಆರೋಪಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ
ಸದರಿ ಕಾರ್ಯಾಚರಣೆಯನ್ನು ಎನ್. ವಿಷ್ಣುವರ್ಧನ ಪೊಲೀಸ್ ಅಧೀಕ್ಷಕರು ಉಡುಪಿ ಜಿಲ್ಲೆ, ಹಾಗೂ ಕುಮಾರಚಂದ್ರ ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ಉಡುಪಿ ಜಿಲ್ಲೆ ನಿರ್ದೇಶನದಲ್ಲಿ ಭರತ್ ರೆಡ್ಡಿ ಪೊಲೀಸ್ ಉಪಾಧೀಕ್ಷಕರು, ಕಾರ್ಕಳ ಉಪ ವಿಭಾಗ ಕಾರ್ಕಳ, ಹಾಗೂ ಮಹೇಶ್ ಪ್ರಸಾದ್ ಪೊಲೀಸ್ ವೃತ್ತ ನಿರೀಕ್ಷಕರು ಕಾಪು ವೃತ್ತ ರವರ ಮಾರ್ಗದರ್ಶನದಲ್ಲಿ ಆರೋಪಿಯನ್ನು ಪತ್ತೆ ಕಾರ್ಯಾಚರಣೆ ಮಾಡಿದ್ದು ಸದರಿ ಕಾರ್ಯಾಚರಣೆಯಲ್ಲಿ ರಾಜಶೇಖರ್ ಬಿಎಸ್.ಪೊಲೀಸ್ ಉಪ ನಿರೀಕ್ಷಕರು ,(ಕಾ-ಸೂ) ಅಪರಾಧ ವಿಭಾಗದ ಪಿಎಸೈ ಐ ಆರ್ ಗಡ್ಡೆಕರ್ ಮತ್ತು ಸಿಬ್ಬಂದಿಗಳಾದ ಹೆಚ್ ಸಿ ಮಹಾಬಲ ಶೆಟ್ಟಿಗಾರ್ , ಸುಧಾಕರ್ ಪಿಸಿ ಅರುಣ್ ಕುಮಾರ್ ಆನಂದ್ ರವರು ಭಾಗವಹಿಸಿರುತ್ತಾರೆ