ಕಾಪು ಬೀಚ್ ನಲ್ಲಿ ಬೆಂಗಳೂರಿನ ಇಬ್ಬರು ಪ್ರವಾಸಿಗರ ಸಾವು

Spread the love

ಕಾಪು ಬೀಚ್ ನಲ್ಲಿ ಬೆಂಗಳೂರಿನ ಇಬ್ಬರು ಪ್ರವಾಸಿಗರ ಸಾವು

ಉಡುಪಿ: ಬೆಂಗಳೂರಿನಿಂದ ಆಗಮಿಸಿದ್ದ ಪ್ರವಾಸಿಗರಿಬ್ಬರು ಕಾಪು ಬೀಚಿನಲ್ಲಿ ನೀರಿಗೆ ಇಳಿದ ವೇಳೆ ಸಮುದ್ರದ ಅಲೆಗಳ ರಭಸಕ್ಕೆ ಕೊಚ್ಚಿ ಹೋದ ಘಟನೆ ಭಾನುವಾರ ಸಂಭವಿಸಿದೆ.

ಮೃತ ಯುವಕರನ್ನು ಬೆಂಗಳೂರು ಹೆಸರಘಟ್ಟ ನಿವಾಸಿ ಗಳಾದ ರೂಪೇಶ್ (21) ಮತ್ತು ಕಾರ್ತಿಕ್ (23) ಎಂದು ಗುರುತಿಸಲಾಗಿದೆ.

ಬೆಂಗಳೂರಿನ ಹೇಸರಘಟ್ಟದಿಂದ ಐದು ಮಂದಿ ಸ್ನೇಹಿತರ ತಂಡ ಕಾಪು ಬೀಚ್ ಗೆ ಪ್ರವಾಸ ಬಂದಿದ್ದು ಮಧ್ಯಾಹ್ನದ ವೇಳೆ ಸಮುದ್ರದಲ್ಲಿ ಆಟವಾಡಲು ಇಳಿದಿದ್ದು ಭಾರಿ ಅಲೆಗೆ ರೂಪೇಶ್ ಮತ್ತು ಕಾರ್ತಿಕ್ ಅವರು ಕೊಚ್ಚಿಕೊಂಡು ಹೋಗಿದ್ದು ಬಳಿಕ ಸ್ಥಳೀಯ ಮೀನುಗಾರರ ಸಹಾಯದಿಂದ ಇಬ್ಬರ ಮೃತದೇಹಗಳನ್ನು ಮೇಲಕ್ಕೆತ್ತಲಾಯಿತು.

ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love