ಕಾಪು ಮಾರಿಗುಡಿ ಮಾರಿ ಪೂಜಾ ಮಹೋತ್ಸವ

Spread the love

ಕಾಪು ಮಾರಿಗುಡಿ ಮಾರಿ ಪೂಜಾ ಮಹೋತ್ಸವ

ಕಾಪು: ಇತಿಹಾಸ ಪ್ರಸಿದ್ಧ ಕಾಪುವಿನ ಮೂರು ಮಾರಿಗುಡಿಗಳಾದ ಹಳೆ ಮರಿಯಮ್ಮ ದೇವಸ್ಥಾನ, ಹೊಸ ಮಾರಿಯ್ಮಮ ದೇವಸ್ಥಾನ ಹಾಗೂ ಕಲ್ಯ ಮಾರಿಯಮ್ಮ ದೇವಸ್ಥಾನಗಳ್ಲಲಿ ಏಕಕಾಲದಲ್ಲಿ ತುಳುವರ ಜಾರ್ದೆ ತಿಂಗಳ ಮಾರಿ ಪೂಜಾ ಮಹೋತ್ಸವ ಮಂಗಳವಾರ ರಾತ್ರಿ ಹಾಗೂ ಬುಧವಾರ ವಿಜೃಂಭಣೆಯಿಂದ ಜರಗಿತು.

desktop2

ಸಿಡುಬು, ಸಂತಾನ ಫಲ, ಮುತೈದೆ ಭಾಗ್ಯಗಳಿಗಾಗಿ ಅತ್ಯಂತ ಪ್ರಸಿದ್ಧಿ ಪಡೆದ ಕಾಪುವಿನ ಮೂರೂ ಮಾರಿಗುಡಿಗಳಲ್ಲಿ ಮಾರ್ಚ್ ತಿಂಗಳ ಅಂತ್ಯಕ್ಕೆ ಸುಗ್ಗಿ ಮಾರಿ ಪೂಜೆ, ಜುಲೈ ತಿಂಗಳ ಅಂತ್ಯಕ್ಕೆ ಆಷಾಡ ಮಾರಿಪೂಜೆ ಹಾಗೂ ನವಂಬರ್ ತಿಂಗಳಾಂತ್ಯದಲ್ಲಿ ಜಾರ್ದೆ ತಿಂಗಳ ಮಾರಿ ಪೂಜೆ ನಡೆಯುತ್ತದೆ.

ಆಷಾಡ ಹಾಗೂ ಸುಗ್ಗಿ ತಿಂಗಳ ಮಾರಿಪೂಜೆಯಲ್ಲಿ ಅತೀ ಹೆಚ್ಚಿನ ಭಕ್ತಾಧಿಗಳು ಕಾಪುವಿನ ಮಾರಿಗುಡಿಗಳಿಗೆ ಆಗಮಿಸುತ್ತಿದ್ದು, ಜಾರ್ದೆ ಮಾರಿಪೂಜೆಯಲ್ಲಿ ಭಕ್ತಾಧಿಗಳ ಸಂಖ್ಯೆ ಇಳಿಮುಖವಾಗುತ್ತದೆ. ಆದರೂ ಭಕ್ತಾಧಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಾ ಸಾಗುತ್ತದೆ. ಈ ಬಾರಿ ಚಿಲ್ಲರೆ ಅಭಾವದಿಂದ ಕೋಳಿ ವ್ಯಾಪಾರಿಗಳ ಸಹಿತ ಹೂವು ಹಣ್ಣು ವ್ಯಾಪಾರಿಗಳಿಗೂ ವ್ಯಾಪಾರ ಕುಂಠಿತವಾಗಿದೆ.

ಕಾಪು ಮಾರಿಪೂಜೆಯಲ್ಲಿ ಕುರಿ ಹಾಗೂ ಕೋಳಿಗಳ ಬಲಿ ನಡೆಯುತ್ತದೆ. ಸರಕಾರ ಬಲಿ ನೀಡದಂತೆ ತಡೆ ನೀಡಿದ್ದರೂ, ಭಕ್ತಾಧಿಗಳು ಸ್ವಯಂ ಪ್ರೇರಿತರಾಗಿ ಕೋಳಿಗಳನ್ನು ತಂದು ಕಡಿದು ತಮ್ಮ ಮನೆಗಳಿಗೆ ಕೊಂಡೊಯ್ಯತ್ತಾರೆ. ಪ್ರತಿ ಮಾರಿಪೂಜೆಗಳಲ್ಲಿ ಲಕ್ಷಾಂತರ ಕೋಳಿಗಳ ಬಲಿ ನಡೆಯುವುದೂ ಇಲ್ಲಿಯ ವಿಶೇಷಗಳಲ್ಲೊಂದು.


Spread the love