Home Mangalorean News Kannada News ಕಾಪು: ಯುವ ಕಾಂಗ್ರೆಸ್ ಅಧ್ಯಕ್ಷರ ಅಭಿನಂದನಾ ಬ್ಯಾನರಿಗೆ ಕಿಡಿಗೇಡಿಗಳಿಂದ ಹಾನಿ – ದೂರು ದಾಖಲು

ಕಾಪು: ಯುವ ಕಾಂಗ್ರೆಸ್ ಅಧ್ಯಕ್ಷರ ಅಭಿನಂದನಾ ಬ್ಯಾನರಿಗೆ ಕಿಡಿಗೇಡಿಗಳಿಂದ ಹಾನಿ – ದೂರು ದಾಖಲು

Spread the love

ಕಾಪು: ಯುವ ಕಾಂಗ್ರೆಸ್ ಅಧ್ಯಕ್ಷರ ಅಭಿನಂದನಾ ಬ್ಯಾನರಿಗೆ ಕಿಡಿಗೇಡಿಗಳಿಂದ ಹಾನಿ – ದೂರು ದಾಖಲು

ಕಾಪು: ಇತ್ತೀಚೆಗೆ ನಡೆದ ಯುವಕಾಂಗ್ರೆಸ್ ಅಂತರಿಕ ಚುನಾವಣೆಯಲ್ಲಿ ಕಾಪು ವಿಧಾನ ಸಭಾ ಕ್ಷೇತ್ರದ ಯುವ ಕಾಂಗ್ರೆಸ್ ನೂತನವಾಗಿ ಅಧ್ಯಕ್ಷರಾಗಿ ಆಯ್ಕೆಯಾದ ಮಹಮ್ಮದ್ ನಿಯಾಝ್ ಪಡುಬಿದ್ರಿ ಅವರಿಗೆ ಅಭಿನಂದಿಸಲು ಅಳವಡಿಸಿದ ಬ್ಯಾನರ್ ಗಳಿಗೆ ಕಿಡಿಗೇಡಿಗಳು ಹಾನಿಯುಂಟು ಮಾಡಿದ್ದು  ಇದಕ್ಕೆ ಸಂಬಂಧಿಸಿ ಗ್ರಾಮ ಪಂಚಾಯತ್, ಕಾಪು ಪುರಸಭೆ, ಹಾಗೂ ಪೋಲಿಸ್ ಇಲಾಖೆಗೆ ಮಾಹಿತಿ ನೀಡಿ ಅನುಮತಿ ಪಡೆದುಕೊಂಡರೂ ಕೂಡ ಕಿಡಿಗೇಡಿಗಳ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಿಡಿಗೇಡಿಗಳ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹಿಸಿ ಪಡುಬಿದ್ರಿ ಮತ್ತು ಕಾಪು ಪೋಲಿಸ್ ಠಾಣೆ, ಹಾಗೂ ಕಾಪು ವೃತ್ತ ನಿರೀಕ್ಷಕರಿಗೆ ಕಾಪು ಬ್ಲಾಕ್ ನ ವತಿಯಿಂದ ದೂರು ನೀಡಲಾಯಿತು.

ಈ ಸಂದರ್ಭದಲ್ಲಿ ಕಾಪು ಬ್ಲಾಕ್ ನ ಕಾರ್ಯದರ್ಶಿಯಾದ ಸುನೀಲ್ ಡಿ ಬಂಗೇರ,ಕಾಪು ಬ್ಲಾಕ್ ಯುವಕಾಂಗ್ರೆಸ್ ನ ಮಾಜಿ ಅಧ್ಯಕ್ಷರಾದ ರಮೀಜ್ ಹುಸೇನ್,ಮಲ್ವಿನ್ ಡಿಸೋಜ, ಕಟಪಾಡಿ ಗ್ರಾಮ ಪಂಚಾಯತ್ ಸದಸ್ಯರಾದ ಪ್ರಭಾಕರ ಆಚಾರ್ಯ, ಪಡುಬಿದ್ರಿ ಗ್ರಾಮ ಪಂಚಾಯತ್ ಸದಸ್ಯರಾದ ಶೇಖರ್ ಪಡುಬಿದ್ರಿ , ಜ್ಯೋತಿ ಮೆನನ್,ಶಾಫಿ ಎಂ ಎಸ್ , ಕಾಂಗ್ರೆಸ್ ಮುಖಂಡರಾದ ಕೇಶವ ಸಾಲಿಯಾನ್, ಯುವ ಕಾಂಗ್ರೆಸ್ ವಿಧಾನಸಭಾ ಕ್ಷೇತ್ರದ ಉಪಾಧ್ಯಕ್ಷರು ಲತೀಫ್ ಶಿರ್ವ, ಕಾಪು ಬ್ಲಾಕ್ ದಕ್ಷಿಣ ಯುವಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿರುವಂತಹ ಲಿತೀಶ್ ಪೂಜಾರಿ, ಯುವ ಕಾಂಗ್ರೆಸ್ ಸದಸ್ಯರಾದ, ತೌಸೀರ್, ಅಶ್ವತ್ ಆಚಾರ್ಯ, ಅರಾಫ ಎಮ್. ಎಸ್ , ಹಕೀಮ್ , ಮುನಾವರ್, ತನ್ಸಿಫ್ ,ಪಿ ಎಮ್ ತೌಸೀರ್, ತೌಫೀಕ್ ಪಡುಬಿದ್ರಿ, ಉಪಸ್ಥಿತರಿದ್ದರು.


Spread the love

Exit mobile version