ಕಾಪು ಸುಗ್ಗಿಮಾರಿಪೂಜೆಯಲ್ಲಿ ಜಾತ್ರೆಗೆ ಅವಕಾಶ ಇಲ್ಲ – ಶಾಂತಿ ಸಭೆಯಲ್ಲಿ ತಹಶೀಲ್ದಾರ್ ಮಹಮ್ಮದ್ ಇಸಾಕ್
ಕಾಪು: ಕಾಪುವಿನಲ್ಲಿ ಸುಗ್ಗಿ ಮಾರಿಪೂಜೆ ಪೂರ್ವಬಾವಿಯಾಗಿ ಕಾನೂನು ಸುವ್ಯವಸ್ಥೆ ಪಾಲನೆಯ ಉದ್ದೇಶಕ್ಕಾಗಿ ಗುರುವಾರ ಕಾಪು ವೀರಭದ್ರ ಸಭಾಭವನದಲ್ಲಿ ಶಾಂತಿ ಸಭೆ ನಡೆಯಿತು.
ಕಾಪು ಪುರಸಭಾ ಮುಖ್ಯಾಧಿಕಾರಿ ವೆಂಕಟೇಶ್ ನಾವುಡ ಮಾತಾಡಿ ” ಯಾವುದೇ ಕಾರಣಕ್ಕೂ ಕೋಳಿ ಮಾರಾಟಕ್ಕೆ ಅಥವಾ ಜಾತ್ರಾ ಅಂಗಡಿಮುಂಗಟ್ಟು ಹಾಕಲು ಅವಕಾಶ ನೀಡುವುದಿಲ್ಲ ಎಂದು ಖಡಕ್ ಎಚ್ಚರಿಕೆ ನೀಡಿದರು.
ಕಾಪು ಸರ್ಕಲ್ ಇನ್ಸ್ಪೆಕ್ಟರ್ ಮಹೇಶ್ ಪ್ರಸಾದ್ ಮಾತಾಡಿ” ಧಾರ್ಮಿಕ ವಿಧಿ ವಿಧಾನಗಳು ಭಾವನಾತ್ಮಕವಾಗಿ ನಡೆಯುವ ಕಾರ್ಯಕ್ರಮ ಹಾಗಂತ ಜನರ ಆರೋಗ್ಯ ದೃಷ್ಟಿಯಿಂದ ಕೈಗೊಂಡಿರುವ ಕೊರೋನಾ ವಿರುದ್ಧದ ಜಾಗೃತಿಯಲ್ಲಿ ಜನ ಎಚ್ಚೆತ್ತುಕೊಂಡು ಸಹಕರಿಸಬೇಕು.ಒಂದು ವೇಳೆ ಯಾವುದೇ ವ್ಯಕ್ತಿ ನಿಯಮ ಉಲ್ಲಂಘಿಸಿ ದೇವಸ್ಥಾನದ ವಠಾರದಲ್ಲಿ ಕೋಳಿ ಕುರಿ ಕಡಿಯಲು ಮುಂದಾದರೆ ಅವರ ವಿರುದ್ಧ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲು ಮಾಡಲಾಗುವುದು ಎಂದರು.
ಈ ಸಂಧರ್ಭದಲ್ಲಿ ಕಾಪು ವೈದ್ಯಧಿಕಾರಿ ಡಾ.ಸುಭ್ರಾಯ ಕಾಮತ್,ಪಶು ವೈದ್ಯ ಡಾ.ದಯಾನಂದ್ ಪೈ, ಕಾಪು ಠಾಣಾಧಿಕಾರಿ ರಾಜಶೇಖರ ಸಾಗನೂರು ಹಾಗೂ ದೇವಸ್ಥಾನ, ಮಸೀದಿ , ಚರ್ಚ್ ನ ಮುಖಂಡರು ,ರಾಜಕೀಯ ಮುಖಂಡರು ಉಪಸ್ಥಿತರಿದ್ದರು.