ಕಾಮಗಾರಿಯಲ್ಲಿ ಗುಣಮಟ್ಟಕ್ಕೆ ಆದ್ಯತೆ- ಪ್ರಮೋದ್ ಮಧ್ವರಾಜ್
ಉಡುಪಿ: ನಗರೋತ್ಥಾನ ಯೋಜನೆಯಡಿ ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ ನಿರ್ಮಿಸುತ್ತಿರುವ ಎಲ್ಲಾ ಕಾಮಗಾರಿಗಳು ಉತ್ತಮ ಗುಣಮಟ್ಟದಲ್ಲಿರಬೇಕೆಂದು ರಾಜ್ಯದ ಮೀನುಗಾರಿಕೆ, ಯುವ ಸಬಲೀಕರಣ, ಕ್ರೀಡೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ತಿಳಿಸಿದ್ದಾರೆ.
ಅವರು ಗುರುವಾರ, ಕುಂಜಿಬೆಟ್ಟು ವಾರ್ಡ್‍ನಲ್ಲಿ 75 ಲಕ್ಷ ರೂ ವೆಚ್ಚದಲ್ಲಿ ಕಲ್ಸಂಕ ಸೇತುವೆ ಅಗಲೀಕರಣ ನಿರ್ಮಾಣ ಕಾಮಗಾರಿಯ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು.
ಉಡುಪಿ ಶ್ರೀಕೃಷ್ಣ ಮಠಕ್ಕೆ ಆಗಮಿಸುವ ಭಕ್ತಾದಿಗಳಿಗೆ ಹಾಗೂ ವಾಹನಗಳಿಗೆ ಪ್ರಸ್ತುತ ಇರುವ ಕಿರಿದಾದ ಸೇತುವೆಯಿಂದ ಸಂಚಾರಕ್ಕೆ ತೊಂದರೆಯಾಗಿದ್ದು, ಅಲ್ಲದೆ ಮಳೆಗಾಲದಲ್ಲಿ ಸಹ ತೊಂದರೆಯಿರುವುದರಿಂದ ಸೇತುವೆ ಅಗಲೀಕರಣ ಕಾರ್ಯವನ್ನು ಆದಷ್ಟು ಶೀಘ್ರದಲ್ಲಿ ಮುಗಿಸುವಂತೆ ತಿಳಿಸಿದ ಸಚಿವರು, ಕಾಮಗಾರಿಗಳ ನಿರ್ಮಾಣದಲ್ಲಿ ಗುಣಮಟ್ಟಕ್ಕೆ ಆದ್ಯತೆ ನೀಡಿ, ಕಾಮಗಾರಿಗಳಲ್ಲಿ ಕಳಪೆ ಗುಣಮಟ್ಟ ಅಥವಾ ಲೋಪ ಕಂಡುಬಂದಲ್ಲಿ ಸಂಬಂದಪಟ್ಟವರ ವಿರುದ್ದ ಸೂಕ್ತ ಕ್ರಮ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಮೂಡುಪೆರಂಪಳ್ಳಿ ವಾರ್ಡಿನ ಶೀಂಬ್ರ ಬಿ.ವಿ.ಟಿ ರಸ್ತೆ ಅಭಿವೃದ್ಧಿ 10 ಲಕ್ಷ ರೂ, ಮೂಡುಪೆರಂಪಳ್ಳಿ ವಾರ್ಡಿನ ಅಂಬಡೆಬೆಟ್ಟು ರಸ್ತೆ ಅಭಿವೃದ್ಧಿ 10 ಲಕ್ಷ ರೂ, ಮೂಡುಪೆರಂಪಳ್ಳಿ ವಾರ್ಡಿನ ಮದಗ ರಸ್ತೆ ಅಭಿವೃದ್ಧಿ 10 ಲಕ್ಷ ರೂ, ಮೂಡುಪೆರಂಪಳ್ಳಿ ವಾರ್ಡಿನ ಬಂಡಸಾಲೆ ರಸ್ತೆ ಅಭಿವೃದ್ಧಿ 10 ಲಕ್ಷ ರೂ, ಮೂಡುಪೆರಂಪಳ್ಳಿ ವಾರ್ಡಿನ ಬಬ್ಬುಸ್ಥಾನ ಹಿಂಬದಿ ರಸ್ತೆ ಮುಂದುವರಿಸಿದ ಭಾಗ ಕಾಂಕ್ರೀಟೀಕರಣ ಹಾಗೂ ಚರಂಡಿ ರಚನೆ 10 ಲಕ್ಷ ರೂ, ಕರಂಬಳ್ಳಿ ವಾರ್ಡಿನ ವಿ.ಎಂ ನಗರ 4 ನೇ ಮುಖ್ಯ ರಸ್ತೆಗೆ ಫೇವರ್ ಫಿನಿಶ್ ಡಾಮರೀಕರಣ 8 ಲಕ್ಷ ರೂ, ಕರಂಬಳ್ಳಿ ವಾರ್ಡಿನ ಜನತಾ ಕಾಲನಿ ಮುಖ್ಯ ರಸ್ತೆಗೆ ಪೇವರ್ ಫಿನಿಶ್ ಡಾಮರೀಕರಣ 10 ಲಕ್ಷ ರೂ, ಕರಂಬಳ್ಳಿ ವಾರ್ಡಿನ ರಾಜಾಚಾರ್ಯರ ಮಾರ್ಗಕ್ಕೆ ಫೇವರ್ ಫಿನಿಶ್ ಡಾಮರೀಕರಣ 10 ಲಕ್ಷ ರೂ, ಕರಂಬಳ್ಳಿ ವಾರ್ಡಿನ ಮಹಾಲಕ್ಷ್ಮೀ ಲೇ ಔಟ್ ಅಂಬಾಗಿಲು 2 ಮುಖ್ಯ ರಸ್ತೆಗಳಿಗೆ ಡಾಮರೀಕರಣ 5 ಲಕ್ಷ ರೂ, ನಗರಸಭಾ ವ್ಯಾಪ್ತಿಯ ಅಂಬಾಗಿಲು-ಕಲ್ಸಂಕ ಮುಖ್ಯ ರಸ್ತೆಯಲ್ಲಿ ತಾಂಗದಗಡಿವರೆಗೆ ಆಯ್ಧ ಭಾಗ ಕಾಂಕ್ರೀಟೀಕರಣ ಹಾಗೂ ಡಾಮರೀಕರಣ 20 ಲಕ್ಷ ರೂ, ಗುಂಡಿಬೈಲು ವಾರ್ಡಿನ ಕಲ್ಸಂಕ ಅಂಬಾಗಿಲು ರಸ್ತೆಯಿಂದ 7 ನೇ ಅಡ್ಡರಸ್ತೆಗೆ ಮರು ಡಾಮರೀಕರಣ 8 ಲಕ್ಷ ರೂ, ಗುಂಡಿಬೈಲು ವಾರ್ಡಿನ ಕಲ್ಸಂಕ ಅಂಬಾಗಿಲು ರಸ್ತೆಯಿಂದ 8 ನೇ ಅಡ್ಡರಸ್ತೆಗೆ ದೇಜು ಶೇರಿಗಾರ್ ಮನೆಯವರೆಗೆ ಕಾಂಕ್ರೀಟಿಕರಣ ಮತ್ತು ಚರಂಡಿ ನಿರ್ಮಾಣ 12.70 ಲಕ್ಷ ರೂ, ಗುಂಡಿಬೈಲು ವಾರ್ಡಿನ ದುಗ್ಗಣ್ಣ ಬೆಟ್ಟು ರಸ್ತೆ ಕಾಂಕ್ರೀಟಿಕರಣ 8 ಲಕ್ಷ ರೂ, ಕಡಿಯಾಳಿ ವಾರ್ಡಿನ ಪಾಡಿಗಾರ ಮುಖ್ಯ ರಸ್ತೆಯಿಂದ ಬೇಬಿ ಪೂಜಾರ್ತಿ ಮನೆ ತನಕ ರಸ್ತೆ ಕಾಂಕ್ರೀಟೀಕರಣ 5 ಲಕ್ಷ ರೂ, ಕುಂಜಿಬೆಟ್ಟು ವಾರ್ಡಿನ ಪುರುಷೋತ್ತಮ ದಾಸ್ ರವರ ಮನೆಗೆ ಹೋಗುವ ರಸ್ತೆ ಅಭಿವೃದ್ಧಿ 12 ಲಕ್ಷ ರೂ, ಕಡಿಯಾಳಿ ವಾರ್ಡಿನ ಕಡಿಯಾಳಿ ದೇವಸ್ಥಾನದ ಮೈನ್ ರೋಡ್ ಕಾಂಕ್ರೀಟಿಕರಣ 8 ಲಕ್ಷ ರೂ, ಕಡಿಯಾಳಿ ವಾರ್ಡಿನ ಕಾತ್ಯಾಯಿನಿ ನಗರ ಆಯ್ದ ಸ್ಥಳದಲ್ಲಿ ಚರಂಡಿ ನಿರ್ಮಾಣ 4 ಲಕ್ಷ ರೂ, ಸಗ್ರಿ ವಾರ್ಡಿನ ಗಾಯತ್ರಿ ಕಲ್ಯಾಣ ಮಂಟಪದ ಬಳಿ ರಸ್ತೆ ಬದಿ ಇಂಟರ್‍ಲಾಕ್ ಅಳವಡಿಸುವುದು 5 ಲಕ್ಷ ರೂ, ಸಗ್ರಿ ವಾರ್ಡಿನ ಹಯಗ್ರೀವ ನಗರದ ಆಯ್ಧ ರಸ್ತೆಗಳಿಗೆ ಮರು ಡಾಮರೀಕರಣ 20 ಲಕ್ಷ ರೂ, ಇಂದ್ರಾಳಿ ವಾರ್ಡಿನ ಗುಳ್ಮೆ ಪರಿಶಿಷ್ಷ ಪಂಗಡ ರಸ್ತೆ ಕಾಂಕ್ರೀಟೀಕರಣ ಹಾಗೂ ಅಭಿವೃದ್ಧಿ 25 ಲಕ್ಷ ರೂ, ಸಗ್ರಿ ವಾರ್ಡಿನ ಲಕ್ಷ್ಮೀಂದ್ರ ನಗರ 6 ನೇ ಮತ್ತು 7 ನೇ ಅಡ್ಡರಸ್ತೆಯಲ್ಲಿ ಕಾಂಕ್ರೀಟ್ ಚರಂಡಿ ನಿರ್ಮಾಣ 10 ಲಕ್ಷ ರೂ, ಸಗ್ರಿ ವಾರ್ಡಿನ 7ನೇ ಅಡ್ಡರಸ್ತೆ ಮತ್ತು ಮುಖ್ಯ ರಸ್ತೆ ಮರು ಡಾಮರೀಕರಣ 5 ಲಕ್ಷ ರೂ, ಮಣಿಪಾಲ ವಾರ್ಡಿನ ಎ.ಎಲ್.ಎನ್ ಲೇ ಔಟ್ ಮುಖ್ಯ ರಸ್ತೆಗೆ ಚರಂಡಿ ಮತ್ತು ಮರು ಡಾಮರೀಕರಣ 5 ಲಕ್ಷ ರೂ, ಈಶ್ವರ ನಗರ ವಾರ್ಡಿನ ಈಶ್ವರ ನಗರ 1 ನೇ ಮತ್ತು 2 ನೇ ಮುಖ್ಯ ರಸ್ತೆಗಳು ಮತ್ತು ಅಡ್ಡರಸ್ತೆಗಳಿಗೆ ಚರಂಡಿ ನಿರ್ಮಾಣ 5 ಲಕ್ಷ ರೂ, ಪರ್ಕಳ ವಾರ್ಡಿನ ಪರ್ಕಳ ಗಾಂಧಿ ಮೈದಾನದಿಂದ ಮಹಾಲಿಂಗೇಶ್ವರ ದೇವಸ್ಥಾನ ಕೂಡು ರಸ್ತೆ ಅಭಿವೃದ್ಧಿ 10 ಲಕ್ಷ ರೂ, ಪರ್ಕಳ ವಾರ್ಡಿನ ಪರ್ಕಳ ಸಣ್ಣಕ್ಕಿಬೆಟ್ಟು 0.05 ಸೆಂಟ್ಸ್ ಕಾಲನಿ ಪ್ರೇಮ ನಾಯ್ಕ್ ರವರ ಮನೆ ಬಳಿ ತಡೆಗೋಡೆ ನಿರ್ಮಾಣ ಹಾಗೂ ಬೊಬ್ಬರ್ಯ ದೇವಸ್ಥಾನದ ಬಳಿ ಕಾಲುಸಂಕ ರಚನೆ 8 ಲಕ್ಷ ರೂ, ಶೆಟ್ಟಿಬೆಟ್ಟು ವಾರ್ಡಿನ ಹೆರ್ಗ ದೇವಸ್ಥಾನದ ರಸ್ತೆಯಿಂದ ಕೊಡಂಗೆ ಬಯಲು ಪ್ರದೇಶದಲ್ಲಿ ವಿಷ್ಣುಮೂರ್ತಿ ದೇವಸ್ಥಾನಕ್ಕೆ ಸಂಪಕಿಸುವ ಹೊಸ ರಸ್ತೆ ನಿರ್ಮಾಣ 5 ಲಕ್ಷ ರೂ, ಶೆಟ್ಟಿಬೆಟ್ಟು ವಾರ್ಡಿನ ಶೆಟ್ಟಿಬೆಟ್ಟು ಬೊಬ್ಬರ್ಯ ಸ್ಥಾನದ ಬಳಿ ಶಂಭು ಶೆಟ್ಟಿ ಮನೆಯಿಂದ ಸುರೇಶ್ ರವರ ಮನೆ ತನಕ ಡಾಮರೀಕರಣ 5 ಲಕ್ಷ ರೂ, ಶೆಟ್ಟಿಬೆಟ್ಟು ವಾರ್ಡಿನ ಮಾರುತಿ ನಗರದ ದೇವಿ ಪ್ರಸಾದ್ ಶೆಟ್ಟಿಯವರ ಮನೆ ಹತ್ತಿರ ರಸ್ತೆಯಲ್ಲಿ ಮಳೆ ನೀರು ಹರಿದು ಹೋಗಲು ಚರಂಡಿ ನಿರ್ಮಾಣ 5 ಲಕ್ಷ ರೂ, sಸರಳೇಬೆಟ್ಟು ವಾರ್ಡಿನ ಸುವರ್ಣನಧಿ ಬಬ್ಬುಸ್ವಾಮಿ ದೈವಸ್ಥಾನ ಎದುರು ರಸ್ತೆ ಅಭಿವೃದ್ಧಿ 10 ಲಕ್ಷ ರೂ, ಸರಳೇಬೆಟ್ಟು ವಾರ್ಡಿನ ಮಧುಕರರವರ ಮನೆಯ ಎದುರಿನ ರಸ್ತೆ ಅಭಿವೃದ್ಧಿ 5 ಲಕ್ಷ ರೂ, ಸರಳೇಬೆಟ್ಟು ವಾರ್ಡಿನ ನೆಹರೂನಗರ ಮಡಿವಾಳರ ಮನೆಯ ಎದುರಿನ ರಸ್ತೆ ಅಭಿವೃದ್ಧಿ 8 ಲಕ್ಷ ರೂ ಸೇರಿದಂತೆ ಒಟ್ಟು 3.76 ಕೋಟಿ ವೆಚ್ಚದ 35 ಕಾಮಗಾರಿಗಳಿಗೆ ಸಚಿವರು ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಉಡುಪಿ ನಗರಸಭೆಯ ಅಧ್ಯಕ್ಷೆ ಮೀನಾಕ್ಷಿ ಮಾಧವ ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಹಾರ್ಮಿಸ್ ನರೋನ್ಹಾ , ಕರಂಬಳ್ಳಿ ವಾರ್ಡ್ ಸದಸ್ಯೆ ಸೆಲಿನ್ ಕರ್ಕಡ, ಗುಂಡಿಬೈಲು ವಾರ್ಡ್ ಸದಸ್ಯ ರಮೇಶ್ ಪೂಜಾರಿ, ಕುಂಜಿಬೆಟ್ಟು ವಾರ್ಡ್ ಸದಸ್ಯ ಶಶಿಕಾಂತ್ ಕುಂದರ್ , ಸಗ್ರಿ ವಾಡ್ ್ ಸದಸ್ಯೆ ಲತಾ ಆನಂದ ಶೇರಿಗಾರ್, ಇಂದ್ರಾಳಿವಾರ್ಡ್ ಸದಸ್ಯ ವಿಜಯ ಜತ್ತನ್ನ, ಪೌರಾಯುಕ್ತ ಮಂಜುನಾಥಯ್ಯ ಮತ್ತಿತರರು ಉಪಸ್ಥಿತರಿದ್ದರು.