Spread the love
ಕಾರಿನ ಮೇಲೆ ಕುಳಿತು ಹುಚ್ಚಾಟ ಮೆರೆದ ಯುವಕರನ್ನು ವಶಕ್ಕೆ ಪಡೆದ ಸುಳ್ಯ ಪೊಲೀಸರು
ಕಡಬ: ಸುಳ್ಯ– ಸಂಪಾಜೆ ಹೆದ್ದಾರಿಯಲ್ಲಿ ಏ. 5 ರಂದು ಸಂಚರಿಸುತ್ತಿದ್ದ ಕಾರಿನಲ್ಲಿ ಏಳು ಮಂದಿ ಯುವಕರು ಕಾರಿನ ಮೇಲೆ ಕುಳಿತು ಹುಚ್ಚಾಟ ಮೆರೆದ ಘಟನೆ ಸುದ್ದಿಯಾಗಿತ್ತು.
ಗಂಭೀರವಾಗಿ ಪರಿಗಣಿಸಿದ ಪೊಲೀಸರು ಸುಮೊಟೊ ಪ್ರಕರಣ ದಾಖಲಿಸಿಕೊಂಡಿದ್ದರು. ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಹಿನ್ನೆಲೆ ಪ್ರಕರಣ ದಾಖಲಿಸಿಕೊಂಡು ಪೊಲೀಸರು ಯುವಕರ ಪತ್ತೆಗಾಗಿ ಹುಡುಕಾಟವನ್ನು ಆರಂಭಿಸಿದ್ದರು.
ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಭಟ್ಕಳ ಮೂಲದ ಸಾಝಿಲ್, ಆತಿಫ್,ಸಮನ್, ಶೈಬಾಜ್ ಹಸ್ಸನ್ ಎಂಬ 6 ಮಂದಿ ಯುವಕರನ್ನು ಭಟ್ಕಳದಿಂದ ಸುಳ್ಯಕ್ಕೆ ಕರೆತಂದಿದ್ದು ವಿಚಾರಣೆ ನಡೆಸಿ ಕಾನೂನು ರೀತಿಯ ಕ್ರಮ ಕೈಗೊಂಡಿರುವುದಾಗಿ ತಿಳಿದುಬಂದಿದೆ.
ಏಳು ಮಂದಿಯ ಪೈಕಿ ಓರ್ವ ಆರೋಪಿ ಸಾಜೀಬ್ ಎಂಬಾತ ಪೊಲೀಸರ ಕೈಗೆ ಸಿಗದೇ ಬೇರೆ ಊರಿಗೆ ತೆರಳಿರುವ ಬಗ್ಗೆ ಮಾಹಿತಿ ತಿಳಿದು ಬಂದಿದೆ.
Spread the love