ಕಾರ್ಕಳ: ಚಿನ್ನಾಭರಣ ಪ್ಯಾಕ್ ಮಾಡುವ ಬಾಕ್ಸ್ ತಯಾರಿಸುವ ಘಟಕದಲ್ಲಿ ಬೆಂಕಿ ಅವಘಡ

Spread the love

ಕಾರ್ಕಳ: ಚಿನ್ನಾಭರಣ ಪ್ಯಾಕ್ ಮಾಡುವ ಬಾಕ್ಸ್ ತಯಾರಿಸುವ ಘಟಕದಲ್ಲಿ ಬೆಂಕಿ ಅವಘಡ

ಕಾರ್ಕಳ: ಚಿನ್ನಾಭರಣ ಪ್ಯಾಕ್ ಮಾಡು ಬಾಕ್ಸ್ ತಯಾರಿಸುವ ಘಟಕದಲ್ಲಿ ಬೆಂಕ ಅವಘಡ ಸಂಭವಿಸಿ ಲಕ್ಷಾಂತರ ಮೌಲ್ಯದ ಸ್ವತ್ತುಗಳು ಬೆಂಕಿಗಾಹುತಿಯಾದ ಘಟನೆ ಶುಕ್ರವಾರ ಕಾರ್ಕಳ ತಾಲೂಕಿನ ಮುಂಡ್ಕೂರು ಬಳಿಯಲ್ಲಿ ಸಂಭವಿಸಿದೆ.

ಮುಂಡ್ಕೂರು ಗ್ರಾಮ ಪಂಚಾಯತ್ ರಸ್ತೆಯ ಮಾರ್ಕೆಟ್ ಕಟ್ಟಡ ಬಳಿಯ ಮೆ.ಸ್ವಾತಿ ಪ್ರೊಸೆಸರ್ಸ್ ಎಂಬ ಆಭರಣಗಳ ಪೆಟ್ಟಿಗೆಗಳ ಉತ್ಪಾದನಾ ಘಟಕ ಬೆಂಕಿಗಾಹುತಿಯಾಗಿದೆ.

ಮುಂಡ್ಕೂರು ಗ್ರಾಮ ಪಂಚಾಯತ್ ಸದಸ್ಯೆ ಸ್ವಾತಿ ಸುಧೀರ್ ಶೆಣೈ ಮಾಲಕತ್ವದ ಈ ಘಟಕದಲ್ಲಿ ಕೋವಿಡ್-19 ಲಾಕ್ ಡೌನ್ ಕಾರಣದಿಂದ ಮಾರಾಟವಾಗದೇ ಉಳಿದಿದ್ದ ಸಿದ್ದ ವಸ್ತುಗಳು,ಕಚ್ಚಾ ವಸ್ತುಗಳು ಇದ್ದವು. ಬೆಂಕಿಯ ಕೆನ್ನಾಲಿಗೆಗೆ ಸಂಸ್ಥೆಯ ಕಂಪ್ಯೂಟರ್ ಗಳು ಸುಟ್ಟು ಕರಕಲಾಗಿವೆ. ಘಟನೆಯಲ್ಲಿ ಸುಮಾರು 15 ಲಕ್ಷ ರೂ. ಮೌಲ್ಯದ ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ. ಘಟನೆಯ ಬಗ್ಗೆ ಮಾಹಿತಿ ಪಡೆದ ಅಗ್ನಿ ಶಾಮಕ ದಳ ಸಿಬಂದಿ ಸ್ಥಳಕ್ಕೆ ಧಾವಿಸಿದ್ದು ಸ್ಥಳೀಯರ ನೆರವಿನಿಂದ ಬೆಂಕಿ ನಂದಿಸಲು ಯಶಸ್ವಿಯಾಗಿದ್ದಾರೆ.

ಘಟಕದಲ್ಲಿ ಉಂಟಾದ ಶಾರ್ಟ್ ಸರ್ಕ್ಯೂಟ್ ಘಟನೆಗೆ ಕಾರಣವಾಗಿದೆ ಎಂದು ಅಗ್ನಿಶಾಮಕ ದಳ ಸಿಬಂದಿಗಳು ತಿಳಿಸಿದ್ದಾರೆ.

 


Spread the love