ಕಾರ್ಕಳ ಪರಶುರಾಮ ಮೂರ್ತಿ ಸಾಕ್ಷಿ ನಾಶ ಯತ್ನ: ಉದಯ ಕುಮಾರ್ ಶೆಟ್ಟಿ
ಕಾರ್ಕಳ : ಕಾರ್ಕಳದಲ್ಲಿ ಕಳೆದ ವರ್ಷದಿಂದ ವಿವಾದದ ಕೇಂದ್ರ ಬಿಂದುವಾಗಿದ್ದ ಪರಶುರಾಮ ಮೂರ್ತಿ ಮತ್ತೆ ಹಲವಾರು ಊಹಾಪೋಹಗಳಿಗೆ ಕಾರಣವಾಗುತ್ತಿದೆ. ನಿನ್ನೆಯಿಂದ ಮೂರ್ತಿಯ ಉಳಿದ ಭಾಗವನ್ನು ತೆರವುಗೊಳಿಸುವ ಕಾರ್ಯ ತೆರೆಮರೆಯಲ್ಲಿ ನಡೆಯುತ್ತಿದೆ ರಾತ್ರೋ ರಾತ್ರಿ ತೆರವು ಗೊಳಿಸುವ ಕಾರ್ಯ ನಡೆಯುತ್ತಿದೆ ಎಂದು ಕಾಂಗ್ರೆಸ್ ಮುಖಂಡ ಉದಯ್ ಕುಮಾರ್ ಶೆಟ್ಟಿ ತಿಳಿಸಿದರು. ಅವರು ಕಾರ್ಕಳದ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದರು
ಕಂಚಿನ ನಕಲಿ ಮೂರ್ತಿಯ ಅರ್ಧ ಭಾಗವನ್ನು ಈ ಹಿಂದೆ ತೆರವುಗೊಳಿಸಿ ಪ್ಲಾಸ್ಟಿಕ್ ಹೊದಿಕೆಯಿಂದ ಮುಚ್ಚಲಾಗಿತ್ತು ಮೂರ್ತಿಯ ಬಗೆಗಿನ ವಿವಾದದಿಂದಾಗಿ ರಾಜ್ಯ ಸರ್ಕಾರ ಸಿ ಓ ಡಿ ತನಿಖೆಗೆ ಆದೇಶಿಸಿತ್ತು. ತನಿಖೆಯ ಸಂದರ್ಭದಲ್ಲಿ ಮೂರ್ತಿಯನ್ನು ತೆರವುಗೊಳಿಸುವ ಮೂಲಕ ಉಳಿದ ಸಾಕ್ಷಿಯನ್ನು ಕೂಡ ನಾಶಪಡಿಸುವ ಹುನ್ನಾರವಾಗಿದೆ ನಿರ್ಮಿತಿ ಕೇಂದ್ರದ ಮೂಲಕ ನ್ಯಾಯಾಲಯದ ನಿರ್ದೇಶನ ಇದೆ ಎಂಬ ಸುಳ್ಳು ಮಾಹಿತಿ ನೀಡಿ ಮೂರ್ತಿಯ ತೆರವು ಕಾರ್ಯಾಚರಣೆ ನಡೆಯುತ್ತಿದೆ ಎಂದರು
ಜನವರಿ 9 ರಂದು ಕ್ರಿಶ್ ವರ್ಲ್ಡ್ ನ ಕಷ್ಣ ನಾಯಕ್ ರವರು ನಿರ್ಮಿತಿ ಕೇಂದ್ರದ ಅಧಿಕಾರಿಗಳಿಗೆ ಪರಶುರಾಮ ಮೂರ್ತಿಯನ್ನು ತೆಗೆದುಕೊಂಡು ಹೋಗಲು ಪತ್ರವನ್ನು ಬರೆದಿರುತ್ತಾರೆ. ನಿರ್ಮಿತಿ ಕೇಂದ್ರದ ಅಧಿಕಾರಿಗಳು ಪರಶುರಾಮ ಮೂರ್ತಿಯನ್ನು ತೆಗೆದುಕೊಂಡು ಹೋಗಲು ನಮ್ಮ ಆಕ್ಷೆಪಣೆ ಇಲ್ಲ ವೆಂದು ಹೇಳಿರುತ್ತಾರೆ ಮತ್ತು ನಾಲ್ಕು ತಿಂಗಳ ಒಳಗಡೆ ಮೂರ್ತಿಯನ್ನು ಸ್ಥಾಪನೆ ಮಾಡದಿದ್ದರೆ ಕೃಷ್ಣ ನಾಯಕ್ ರವರು ಹಣವನ್ನು ನಿರ್ಮಿತಿ ಕೇಂದ್ರಕ್ಕೆ ವಾಪಸ್ಸು ನೀಡಬೇಕೆಂದು ಹೇಳಿರುತ್ತಾರೆ
ಉಚ್ಛ ನ್ಯಾಯಾಲಯಕ್ಕೆ ಏಪ್ರಿಲ್ 10 ರಂದು ರಿಟ್ ಪಿಟಿಷನ್ ಹಾಕಿ ಮೂರ್ತಿಯನ್ನು ತೆಗೆದುಕೊಂಡು ಹೋಗಲು ನಿರ್ಮಿತಿ ಕೇಂದ್ರದ ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕೆಂದು ದಾವೆ ಹಾಕಿರುತ್ತಾರೆ. ಈ ಹಿಂದೆ ಉಡುಪಿ ಜಿಲ್ಲಾಧಿಕಾರಿಯವರ ನಿರ್ದೇಶನದ ಮೇರೆಗೆ 2022 ಅಕ್ಟೋಬರ್ 9 ರಂದು ಪರಶುರಾಮ ಮೂರ್ತಿಯ ಅರ್ಧ ಭಾಗವನ್ನು ತೆಗೆದುಕೊಂಡು ಹೋಗಿದ್ದು ಈ ಬಾರಿ ಜಿಲ್ಲಾದಿಕಾರಿಯವರನ್ನು ಹೊರತು ಪಡಿಸಿ ನೇರವಾಗಿ ಉಚ್ಛ ನ್ಯಾಯಾಲಯಕ್ಕೆ ಮನವಿ ಮಾಡಿ ಯಾವುದೋ ದುರುದ್ದೇಶದಿಂದ ಹೋಗಿರುತ್ತಾರೆ.
ಉಚ್ಛ ನ್ಯಾಯಾಲಯವು ನಿರ್ಮಿತಿ ಕೇಂದ್ರಕ್ಕೆ ಕೃಷ್ಣ ನಾಯಕ ರವರ ಅರ್ಜಿಯ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಹೇಳಿತ್ತಾರೆಯೇ ಹೊರತು ಪರಶುರಾಮ ಮೂರ್ತಿಯನ್ನು ತೆಗೆದುಕೊಂಡು ಹೋಗಲು ನಿರ್ದೇಶನ ನೀಡಿರುವುದಿಲ್ಲ.
ಕೃಷ್ಣ ನಾಯಕ್ ರವರ ರಿಟ್ ಪಿಟಿಷನ್ ಗೆ ಮೆಮೊ 24-APr-24 ರಂದು ಹಾಕಿ ನಿರ್ಮಿತಿ ಕೇಂದ್ರದ ಅಧಿಕಾರಿಗಳು ನನ್ನ ಅರ್ಜಿಯನ್ನು ಪರಿಗಣಿಸಿದ ಕಾರಣ ನನ್ನ ದಾವೆಯನ್ನು ವಿಲೇ ಮಾಡಬೇಕೆಂದು ಹೇಳಿರುತ್ತಾರೆ ಎಂದು ಅವರು ತಿಳಿಸಿದರು
ಉಡುಪಿ ಜಿಲ್ಲಾಧಿಕಾರಿ ಸರಕಾರದ ಕಂದಾಯ ಇಲಾಖೆಯ ಅಧೀನ ಕಾರ್ಯದರ್ಶಿಯವರು ಈ ಪ್ರಸ್ತಾವವನ್ನು ತಿರಸ್ಕರಿಸಿದ್ದರೂ ಪರಶುರಾಮ ಥೀಮ್ ಪಾರ್ಕ್ ನಿರ್ಮಾಣಕ್ಕೆ ಅನುಮತಿ ನೀಡಿದ್ದು ಮಾತ್ರವಲ್ಲದೆ ನಿರ್ಮಿತಿ ಕೇಂದ್ರಕ್ಕೆ ವಹಿಸಿಕೊಟ್ಟಿತು. ಈಗ ಮತ್ತೆ ಜಿಲ್ಲಾಧಿಕಾರಿಯವರು ಸಿ ಓ ಡಿ ತನಿಖೆ ನಡೆಯುತ್ತಿರುವ ಸಂದರ್ಭ ಮೂರ್ತಿ ತೆರವು ಕಾರ್ಯಾಚರಣೆ ಮಾಡುತ್ತಿರುವುದು ಮತ್ತೆ ಸಾರ್ವಜನಿಕರಲ್ಲಿ ಸಂಶಯ ಮೂಡಿಸಿದೆ ಎಂದರು
ಪರಶುರಾಮ ನಕಲಿ ಮೂರ್ತಿಯ ಸತ್ಯಾಸತ್ಯತೆ ಪತ್ತೆಹಚ್ಚಿ ಪರಶುರಾಮ ಮೂರ್ತಿಯ ಹೆಸರಿನಲ್ಲಿ ಜನರನ್ನು ವಂಚಿಸಿದ ತಪ್ಪಿಗಷ್ಟರಿಗೆ ಮೇಲೆ ಕ್ರಮ ಕೈಗೊಳ್ಳುವಲ್ಲಿ ರಾಜ್ಯ ಸರ್ಕಾರ ಹಾಗೂ ಉಸ್ತುವಾರಿ ಸಚಿವರು ಪೂರ್ಣ ಸಹಕಾರ ನೀಡಲಿದ್ದಾರೆ ಮಾತ್ರವಲ್ಲದೆ ಅಸಲಿ ಮೂರ್ತಿ ಪ್ರತಿಸ್ಟಾಪನೆಗೆ ಜವಾಬ್ದಾರಿಯುತವಾಗಿ ಕ್ರಮಕೈಗೊಳ್ಳಲಿದೆಯೆಂದ ಅವರು ಜನರ ಮುಂದೆ ಭಿಕ್ಷೆ ಬೇಡಿಯಾದರು ಕಂಚಿನ ಮೂರ್ತಿಯನ್ನು ಪ್ರತಿಸ್ಥಾಪಿಸುತೇನೆ ಎನ್ನುವ ಶಾಸಕರು ಆ ಕಾರ್ಯವನ್ನು ನಡೆಸಲಿ ಅದಕ್ಕೂ ನಮ್ಮ ಪೂರ್ಣ ಸಹಕಾರ ನೀಡುತ್ತೇವೆ ಎಂದರು
ಈ ಸಂದರ್ಭದಲ್ಲಿ ಕಾರ್ಕಳ ಬ್ಲಾಕ್ ಅಧ್ಯಕ್ಷ ಸದಾಶಿವ ದೇವಾಡಿಗ, ಜಾರ್ಜ್ ಕ್ಯಾಸ್ಟೆಲಿನೊ ಉಪಸ್ಥಿತರಿದ್ದರು