Home Mangalorean News Kannada News ಕಾಲು ಕಳೆದ ಕುಟುಂಬಕ್ಕೆ ಡಿವೈಎಫ್‍ಐ ಆರ್ಥಿಕ ನೆರವು

ಕಾಲು ಕಳೆದ ಕುಟುಂಬಕ್ಕೆ ಡಿವೈಎಫ್‍ಐ ಆರ್ಥಿಕ ನೆರವು

Spread the love

ಮಂಗಳೂರು: ಬಜಾಲ್ ವಾರ್ಡ್‍ನ ಜೆ.ಎಂ. ರೋಡ್ ಪ್ರದೇಶದಲ್ಲಿ ಕಳೆದ ಹಲವಾರು ಹಲವು ವರ್ಷಗಳಿಂದ ವಾಮನ್ ನಾಯಕ್ ಎಂಬವರು ತನ್ನ ಹೆಂಡತಿ ಮಕ್ಕಳೊಂದಿಗೆ ವಾಸವಾಗಿರುತ್ತಾರೆ. ಇವರು ನಗರದ ಕುಂಟಿಕಾನದಲ್ಲಿ ಸರ್ವಿಸ್ ಸ್ಟೇಷನ್‍ನಲ್ಲಿ ಮೆಕ್ಯಾನಿಕ್ ಆಗಿ ಕೆಲಸ ನಿರ್ವಹಿಸುತ್ತಿದ್ದರು. ಆದರೆ ಈಗ ಇವರ ಮನೆಯಲ್ಲಿ ಕತ್ತಲೆ ಆವರಿಸಿದೆ. ಮೂರು ವರ್ಷದ ಹಿಂದೆ ಕುಂಟಿಕಾನ ಪ್ರದೇಶದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ತನ್ನ ಎರಡೂ ಕಾಲನ್ನು ಕಳೆದು ಕೊಂಡಿರುತ್ತಾರೆ. ಮನೆಗೆ ಆಧಾರವಾಗಿದ್ದ ಇವರ ಈ ಪರಿಸ್ಥಿತಿಯಿಂದಾಗಿ ಜೀವನ ನಡೆಸುವುದು ಕಷ್ಟವಾಗಿದ್ದರಿಂದ ಜೀವನ ನಿರ್ವಹಣೆಗಾಗಿ ಗಂಡ ಹೆಂಡತಿ ಇಬ್ಬರೂ ಬೀಡಿ ಕಟ್ಟುವ ಪರಿಸ್ಥಿತಿ ಉಂಟಾಗಿದೆ. ಒಂದು ಕಡೆ ಕೇಂದ್ರ ಸರಕಾರ ಬೀಡಿ ಉದ್ಯಮವನ್ನು ನಿಲ್ಲಿಸಲು ಹೊರಟಿದ್ದು, ಅದಕ್ಕೆ ಬದಲಾಗಿ ಯಾವುದೇ ಪರ್ಯಾಯ ಉದ್ಯೋಗವನ್ನು ಒದಗಿಸಿಕೊಡುವ ಯಾವುದೇ ಆಲೋಚನೆಗಳನ್ನು ಹೊಂದಿಲ್ಲ. ಇಂತಹ ಕುಟುಂಬಗಳ ಸಮಸ್ಯೆಗಳನ್ನು ಸರಕಾರದ ಗಮನಕ್ಕೆ ತರುವ ಅಥವಾ ಅವರ ಕಷ್ಟವನ್ನು ಆಲಿಸುವ ಗೋಜಿಗೆ ಯಾವೊಬ್ಬ ಸ್ಥಳೀಯ ಜನಪ್ರತಿನಿಧಿಗಳು ಹೋಗಲಿಲ್ಲ.

dyfi-help

ಈ ನಿಟ್ಟಿನಲ್ಲಿ ಡಿವೈಎಫ್‍ಐ ಬಜಾಲ್ ಪಕ್ಕಲಡ್ಕ ಘಟಕ ಇವರ ಸಮಸ್ಯೆಯನ್ನು ಆಲಿಸಿ ದಾನಿಗಳ ಮೂಲಕ ನಿಧಿ ಸಂಗ್ರಹಿಸಿ ನಿನ್ನೆ 30,000/- ಚೆಕ್ಕನ್ನು ನೀಡುವ ಮುಖಾಂತರ ಆರ್ಥಿಕ ಸಹಾಯವನ್ನು ಮಾಡಿರುತ್ತಾರೆ. ಚೆಕ್ಕನ್ನು ಡಿವೈಎಫ್‍ಐ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ವಿತರಿಸಿದರು. ಈ ವೇಳೆ ಸ್ಥಳೀಯ ಮುಖಂಡರಾದ ಕಮಲಾಕ್ಷ ಶೆಟ್ಟಿ, ಸುರೇಶ್ ಬಜಾಲ್, ನಾಗೇಶ್ ಶೆಟ್ಟಿ, ಪ್ರವೀಣ್ ವಿಸ್ಮಯ, ಅಶೋಕ್ ಬಜಾಲ್ ಉಪಸ್ಥಿತರಿದ್ದರು.


Spread the love

Exit mobile version