Home Mangalorean News Kannada News ಕಾಲೇಜು ವಿದ್ಯಾರ್ಥಿಗಳಿಗೆ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಯ ಬಂಧನ

ಕಾಲೇಜು ವಿದ್ಯಾರ್ಥಿಗಳಿಗೆ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಯ ಬಂಧನ

Spread the love

ಕಾಲೇಜು ವಿದ್ಯಾರ್ಥಿಗಳಿಗೆ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಯ ಬಂಧನ

ಉಡುಪಿ : ನಗರದ ಮಣಿಪಾಲದಲ್ಲಿ ವಿದ್ಯಾರ್ಥಿಗಳಿಗೆ ಗಾಂಜಾ ಮಾರಟ ಮಾಡುತ್ತಿದ್ದ ಆರೋಪಿಯನ್ನು ಉಡುಪಿಯ ಸೈಬರ್ ಕ್ರೈಮ್ ಪೊಲೀಸರು ಬಂಧಿಸಿದ್ದಾರೆ.

ಬಂಧಿತನನ್ನು ಪಶ್ಚಿಮ ಬಂಗಾಳ ನಿವಾಸಿ ಪ್ರಸ್ತುತ ಈಶ್ವರನಗರ ಮಣಿಪಾಲದಲ್ಲಿ ವಾಸವಿರುವ ಪ್ರಖರ್ ಶ್ರೀವಾಸ್ತವ (24) ಎಂದು ಗುರುತಿಸಲಾಗಿದೆ.

ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ನಿಶಾ ಜೇಮ್ಸ್, ಐ.ಪಿ.ಎಸ್. ಇವರ ನಿರ್ದೇಶನದಲ್ಲಿ, ಉಡುಪಿ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಕುಮಾರ ಚಂದ್ರ ಇವರ ಮಾರ್ಗದರ್ಶನದಲ್ಲಿ, ಉಡುಪಿ ಜಿಲ್ಲಾ ಸೆನ್ ಅಪರಾಧ ಪೊಲೀಸ್ ಠಾಣಾ ನಿರೀಕ್ಷಕನಾಗಿರುವ ಸೀತಾರಾಮ ಪಿ. ರವರಿಗೆ ಜೂನ್ 25ರಂದು ಸಿಬ್ಬಂದಿಯವರಿಂದ ದೊರೆತ ಖಚಿತ ಮಾಹಿತಿ ಮೇರೆಗೆ, ಇವರು ದಾಳಿ ಬಗ್ಗೆ ಪೊಲೀಸ್ ಅಧೀಕ್ಷಕರ ಅನುಮತಿ ಪಡೆದು, ಪತ್ರಾಂಕಿತ ಅಧಿಕಾರಿ, ಪಂಚರು ಹಾಗೂ ಸಿಬ್ಬಂದಿಯವರ ಸಹಕಾರದೊಂದಿಗೆ ಉಡುಪಿ ತಾಲೂಕು ಶಿವಳ್ಳಿ ಗ್ರಾಮದ ವಿಧ್ಯಾರತ್ನ ನಗರದ, ವಿದ್ಯಾರತ್ನ ಎನ್ಕ್ಲೀವ್ ಅಪಾಟ್ಮೆಂಟ್ ಬಳಿ, ಸಾರ್ವಜನಿಕ ಸ್ಥಳದಲ್ಲಿ ಆರೋಪಿ ಪ್ರಖರ್ ಶ್ರೀವಾಸ್ತವ ಎಂಬವನನ್ನು ಮಧ್ಯಾಹ್ನ 12:15 ಗಂಟೆಗೆ ದಸ್ತಗಿರಿಗೊಳಿಸಿ, ಈತನು ಯಾವುದೇ ಪರವಾನಿಗೆ ಇಲ್ಲದೇ, ಕಾನೂನು ಬಾಹಿರವಾಗಿ ಮಾರಾಟ ಮಾಡಲು ಹೊಂದಿದ್ದ ಸುಮಾರು 1,30,000/- ಮೌಲ್ಯದ 5 ಕಿಲೋ, 280 ಗ್ರಾಂ ತೂಕದ ಗಾಂಜಾವನ್ನು ಮತ್ತು 5,000/- ಮೌಲ್ಯದ ಮೊಬೈಲ್ ಹ್ಯಾಂಡ್ ಸೆಟ್-1, 250/- ಮೌಲ್ಯದ ತೂಕಸಾಧನ, ಮತ್ತು 1,000/- ಮೌಲ್ಯದ ಟ್ರಾಲ್ ಬ್ಯಾಗ್-1 ನ್ನು ಒಟ್ಟು 1,36,250/- ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಂಡಿರುತ್ತಾರೆ.

ಉಡುಪಿ ಜಿಲ್ಲಾ ಎಸ್ಪಿ ಶ್ರೀಮತಿ ನಿಶಾ ಜೇಮ್ಸ್ ಅವರ ಮತ್ತು ಹೆಚ್ಚುವರಿ ಪೊಲೀಸ್ ಅಧೀಕ್ಷಕಾರದ ಕುಮಾರ ಚಂದ್ರ ಮಾರ್ಗದರ್ಶನದಲ್ಲಿ ಸೆನ್ ಅಪರಾಧದ ಪೊಲೀಸ್ ನೀರಿಕ್ಷಕರಾದ ಸೀತಾರಾಮ.ಪಿ ಮತ್ತು ಎ.ಎಸ್.ಐ ಕೇಶವ್ ಗೌಡ, ಸಿಬ್ಬಂದಿಯವರಾದ ಪ್ರವೀಣ್ ,ಸತೀಶ್ ಬೆಳ್ಳೆ, ರಾಘವೇಂದ್ರ ಉಪ್ಪೂರು, ಕೃಷ್ಣ ಪ್ರಸಾದ್,ಸಂಜಯ್, ನಾಗೇಶ್, ಶ್ರೀಧರ, ರಾಘವೇಂದ್ರ ಬ್ರಹ್ಮಾವರ, ಪ್ರಸನ್ನ ಸಾಲಿಯಾನ್,ಸಂತೋಷ್ ಖಾರ್ವಿ, ಮತ್ತು ಜೀವನ್ ಪಾಲ್ಗೊಂಡಿದ್ದರು.


Spread the love

Exit mobile version