ಕಾಳು ಮೆಣಸು ತೆಗೆಯುತ್ತಿದ್ದ ವೇಳೆ ವಿದ್ಯುತ್ ಅವಘಡಕ್ಕೆ ಮೂವರು ಬಲಿ

Spread the love

ಕಾಳು ಮೆಣಸು ತೆಗೆಯುತ್ತಿದ್ದ ವೇಳೆ ವಿದ್ಯುತ್ ಅವಘಡಕ್ಕೆ ಮೂವರು ಬಲಿ

ಮಂಗಳೂರು: ನಗರದ ಉಜ್ಜೊಡಿಯಲ್ಲಿಯಲ್ಲಿ ವಿದ್ಯುತ್ ಅವಘಡಕ್ಕೆ ತುತ್ತಾಗಿ ಮೂವರು ದಾರುಣವಾಗಿ ಸಾವನಪ್ಪಿದ ಘಟನೆ ರವಿವಾರ ನಡೆದಿದೆ.

ಮೃತರನ್ನು ಉಜ್ಜೊಡಿಯ ವಲೇರಿಯನ್ ಲೋಬೊ(55), ಅವರ ಪತ್ನಿ ಹೆಸ್ಮಿ ಲೋಬೊ (51) ಹಾಗೂ ಮೂಡಬಿದರೆಯ ಸಂದೀಪ್ (28) ಎಂದು ಗುರುತಿಸಲಾಗಿದೆ.

ರವಿವಾರ ಮಧ್ಯಾಹ್ನ ವಲೇರಿಯನ್ ಲೋಬೊರವರ ಮನೆಯ ಅಂಗಳದ ತೆಂಗಿನ ಮರದಲ್ಲಿದ್ದ ಕಾಳು ಮೆಣಸನ್ನು ಏಣಿ ಇಟ್ಟು ತೆಗೆಯುತ್ತಿದ್ದ ವೇಳೆ ಸಂದೀಪ್ ಅವರು ಏಣಿ ಸಮೇತವಾಗಿ ಪಕ್ಕದಲ್ಲೇ ಹಾದು ಹೋಗುತ್ತಿದ್ದ ವಿದ್ಯುತ್ ತಂತಿಯ ಮೇಲೆ ಬಿತ್ತು ಎನ್ನಲಾಗಿದೆ. ಆಗ ವಿದ್ಯುತ್ ಆಘಾತಕ್ಕೊಳಗಾದ ಸಂದೀಪ್ ಅವರನ್ನು ರಕ್ಷಿಸಲು ಧಾವಿಸಿದ ವಲೇರಿಯನ್ ಮತ್ತು ಹೆಸ್ಮಿ ಕೂಡ ವಿದ್ಯುತ್ ಅಘಡಕ್ಕೆ ಒಳಗಾಗಿ ಮೃತಪಟ್ಟರು ಎನ್ನಲಾಗಿದೆ.


Spread the love
1 Comment
Inline Feedbacks
View all comments
7 years ago

Tragedy. It should not have happened to them at this early age. But Gods plans are unimaginable. May their souls rest in peace. Let us be careful with all things because every life is precious