ಕಾವೇರಿ: ಸುಪ್ರಿಂ ಕೋರ್ಟ್ ತೀರ್ಪಿಗೆ ಕ್ಯಾ. ಕಾರ್ಣಿಕ್ ಸ್ವಾಗತ
ಮಂಗಳೂರು : 1924ರನೀರಿನ ಹಂಚಿಕೆಯ ಒಪ್ಪಂದವನ್ನು ಸಾಂವಿಧಾನಿಕ ಎಂದು ಉಲ್ಲೇಖಿಸಿ ಅಚ್ಚುಕಟ್ಟು ಪ್ರದೇಶದ ವಿಸ್ತರಣೆಗೆ ಅವಕಾಶ ನೀಡಿ ಕರ್ನಾಟಕಕ್ಕೆ 14.57 ಟಿಎಂಸಿ ಹೆಚ್ಚುವರಿ ನೀರಿಗೆ ಆದೇಶಿಸಿದ ಸುಪ್ರಿಂ ಕೋರ್ಟ್ ತೀರ್ಪನ್ನು ಕರ್ನಾಟಕ ವಿಧಾನಪರಿಷತ್ ವಿರೋಧ ಪಕ್ಷದ ಮುಖ್ಯಸಚೇತಕ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಸ್ವಾಗತಿಸಿದ್ದಾರೆ.
ಇಷ್ಟು ದಿನಗಳ ಕಾಲ ನ್ಯಾಯಾಲಯದ ಹಾದಿ ತಪ್ಪಿಸುತ್ತಿದ್ದ ತಮಿಳುನಾಡಿಗೆ ತನ್ನಲ್ಲಿಯೇ ಲಭ್ಯವಿರುವ 20 ಟಿಎಂಸಿ ಅಂತರ್ ಜಲ ಸಂಪನ್ಮೂಲವನ್ನು ಬಳಸಿಕೊಳ್ಳಬೇಕು ಎನ್ನುವ ಸುಪ್ರಿಂ ಕೋರ್ಟ್ ನಿರ್ದೇಶನ ಕರ್ನಾಟಕದ ಪಾಲಿಗೆ ಹರ್ಷವನ್ನು ನೀಡಿದೆ. ಸುಪ್ರಿಂ ಕೋರ್ಟ್ ತೀರ್ಪನ್ನು ಸ್ವಾಗತಿಸುತ್ತಾ “ಸತ್ಯ ಮೇವ ಜಯತೆ” ಎನ್ನುವ ಸಾಂವಿಧಾನಿಕ ಮೌಲ್ಯವನ್ನು ಅರ್ಥೈಸಿಕೊಂಡು ನೆರೆ ರಾಜ್ಯದ ಜನತೆ ಯಾವುದೇ ಗಲಭೆಗಳಿಗೆ ಆಸ್ಪದ ಕೊಡದೆ ನ್ಯಾಯಾಲಯದ ತೀರ್ಪನ್ನು ಗೌರವಿಸಿ ರಾಜ್ಯಗಳ ನಡುವೆ ಸೌಹಾರ್ದ ಕಾಪಾಡುವಂತೆ ವಿನಂತಿಸಿದ್ದಾರೆ.