Home Mangalorean News Kannada News ಕಾವ್ಯ ಸಂಶಯಾಸ್ಪದ ಸಾವು ಸಿಬಿಐ ತನಿಖೆಗೆ ಆಗ್ರಹಿಸಿ ಕರವೇ ಉಡುಪಿ ಪ್ರತಿಭಟನೆ

ಕಾವ್ಯ ಸಂಶಯಾಸ್ಪದ ಸಾವು ಸಿಬಿಐ ತನಿಖೆಗೆ ಆಗ್ರಹಿಸಿ ಕರವೇ ಉಡುಪಿ ಪ್ರತಿಭಟನೆ

Spread the love

ಕಾವ್ಯ ಸಂಶಯಾಸ್ಪದ ಸಾವು ಸಿಬಿಐ ತನಿಖೆಗೆ ಆಗ್ರಹಿಸಿ ಕರವೇ ಉಡುಪಿ ಪ್ರತಿಭಟನೆ

ಉಡುಪಿ: 15 ದಿನಗಳ ಒಳಗೆ ಆಳ್ವಾಸ್ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿನಿ ಕಾವ್ಯಾಳ ನಿಗೂಢ ಸಾವಿನ ಸತ್ಯಾಸತ್ಯತೆಯನ್ನು ಬಯಲಿಗೆಳೆಯದೇ ಹೋದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣದ ವತಿಯಿಂದ ಕಾಲೇಜಿಗೆ ಮುತ್ತಿಗೆ ಹಾಕಲಾಗುವುದು ಎಂದು ವೇದಿಕೆ ರಾಜ್ಯ ಸಂಚಾಲಕ ಪ್ರಸನ್ನ ಕುಮಾರ್ ಶೆಟ್ಟಿ ಎಚ್ಚರಿಸಿದ್ದಾರೆ.

ಮೂಡಬಿದ್ರೆಯ  ಶಿಕ್ಷಣ ಸಂಸ್ಥೆಯಲ್ಲಿ ಸಾವನಪ್ಪಿದ ಕಾವ್ಯಳ ಕುಟುಂಬಕ್ಕೆ ನ್ಯಾಯ ದೊರಕಿಸುವಂತೆ ಕೋರಿ ನಗರದ ಕ್ಲಾಕ್ ಟವರ್ ಬಳಿ ಆಯೋಜಿಸಿದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಅವರು ಮಕ್ಕಳಿಗೆ ಉನ್ನತ ವಿದ್ಯಾಭ್ಯಾಸವನ್ನು ನೀಡಿ ಸಮಾಜದ ಉನ್ನತ ಪ್ರಜೆಯನ್ನಾಗಿಸಿ ರೂಪಿಸುವ ಶಿಕ್ಷಣ ಕೇಂದ್ರ ಅಲ್ಲಿನ ವಿದ್ಯಾರ್ಥಿಗಳಿಗೆ ಮರಣ ಕೇಂದ್ರವಾಗಿ ಮಾರ್ಪಾಡಾಗಿರುವುದು ಖಂಡನೀಯ. ಹಲವಾರು ವರ್ಷಗಳಿಂದ ಹತ್ತಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಅನುಮಾನಸ್ಪದವಾಗಿ ಅಸಹಜ ಸಾವನ್ನಪ್ಪಿದ್ದು, ಆ ಎಲ್ಲಾ ಪ್ರಕರಣಗಳು ಬಯಲಿಗೆ ಬಾರದೆ ಮುಚ್ಚಿಹೋಗಿರುವುದು ಕಾಲೇಜಿನ ಪ್ರಭಾವ ಎನು ಎನ್ನುವುದು ತಿಳಿಯುತ್ತದೆ. ಕಾವ್ಯ ಪೂಜಾರಿಯವರ ಪ್ರಕರಣ ಸೇರಿದಂತೆ ಹಿಂದಿನ ಎಲ್ಲಾ ಪ್ರಕರಣಗಳನ್ನೂ ಕೂಡ ಸರಕಾರ ಸಿಬಿಐ ತನಿಕೆಗೆ ಒಳಪಡಿಸಬೇಕಾಗಿದೆ ಎನ್ನುವುದು ನಮ್ಮ ಆಗ್ರಹವಾಗಿದೆ. ಕಾವ್ಯಾಳ ಸಾವಿಗೆ ಕಾರಣರಾದವರಿಗೆ ಸೂಕ್ತ ಶಿಕ್ಷೆ ನೀಡಬೇಕು ಎಂದು ಆಗ್ರಹಿಸಿದರು.

ಕಾವ್ಯಾರ ತಾಯಿ ಬೇಬಿ ಮಾತನಾಡಿ ತನ್ನ ಮಗಳ ಸಾವಿಗೆ ಆ ಸಂಸ್ಥೆಯ ದೈಹಿಕ ಶಿಕ್ಷಣ ಶಿಕ್ಷಕ ಪ್ರವೀಣ್ ಎನ್ನುವವರು ನೇರವಾಗಿ ಜವಾಬ್ದಾರರಾಗಿದ್ದು ಅವರನ್ನು ಕೂಡಲೇ ಪೋಲಿಸರು ಬಂಧಿಸಬೇಕು. ಅವರನ್ನು ಸಂಸ್ಥೆ ಅಡಗಿಸಿಟ್ಟಿದ್ದು ಅವರನ್ನು ಮಾಧ್ಯಮದ ಮುಂದೆ ತರಲಿ ಆಗ ಸತ್ಯ ಹೊರಬರುತ್ತದೆ.  ಶಿಕ್ಷಣ ಸಂಸ್ಥೆಯಲ್ಲಿ ಸಾವಿರಾರು ವಿದ್ಯಾರ್ಥಿಗಳು ಕಲಿಯುತ್ತಿದ್ದು, ನನ್ನ ಮಗಳಿಗಾದ ಪರಿಸ್ಥಿತಿ ಇತರರಿಗೆ ಆಗಬಾರದು ಎಂದು ಆಕ್ರೋಶ ವ್ಯಕ್ತಪಡಿಸಿದರು.

ವೇದಿಕೆಯ ಅಧ್ಯಕ್ಷ ಅನ್ಸಾರ್ ಅಹಮ್ಮದ್ ಮಾತನಾಡಿದ ಶಿಕ್ಷಣ ಸಂಸ್ಥೆಯಲ್ಲಿ ಕೇವಲ ಇದು ಮೊದಲ ಸಾವಲ್ಲ ಹಿಂದೆಯೂ ಕೂಡ ಹಲವಾರು ಸಾವುಗಳು ನಡೆದಿದ್ದು, ಪ್ರಕರಣಗಳು ಹೊರ ಜಗತ್ತಿಗೆ ಬರಲಿಲ್ಲ. ವೇದಿಕೆ ಆಳ್ವಾರ ವಿರುದ್ದ ಪ್ರತಿಭಟನೆ ಮಾಡುತ್ತಿಲ್ಲ ಬದಲಾಗಿ ಬಡ ಹೆಣ್ಣು ಮಗಳ ಕುಟುಂಬಕ್ಕೆ ಆದ ಆನ್ಯಾಯದ ವಿರುದ್ದ ದನಿ ಎತ್ತುವುದು ನಮ್ಮ ಕರ್ತವ್ಯ ಅದರಂತೆ ಎಲ್ಲಾ ಪ್ರಕರಣಗಳನ್ನು ಸರಕಾರ ಕೂಡಲೇ ಸಿಬಿಐ ತನಿಖೆಗೆ ವಹಿಸಬೇಕು ಎಂದು ಆಗ್ರಹಿಸಿದರು.

ಸಾಮಾಜಿಕ ಕಾರ್ಯಕರ್ತ ರಾಬರ್ಟ್ ರುಜಾರಿಯೋ ಮಾತನಾಡಿ ಕಾವ್ಯಳದ್ದು ಕೊಲೆಯಲ್ಲ ಬದಲಾಗಿ ಆತ್ಮಹತ್ಯೆ ಎಂದು ತನಿಖೆಯ ಮೊದಲೇ ತೀರ್ಪು ನೀಡಿರುವ ಪೋಲಿಸರು ಇದರಲ್ಲಿ ಸಂಪೂರ್ಣ ಶಾಮೀಲಾಗಿದ್ದು, ಮೂಡಬಿದರೆಯ ಪೋಲಿಸ್ ನೇರವಾಗಿ ಇದಕ್ಕೆ ಜವಾಬ್ದಾರರಾಗಿದ್ದಾರೆ. ಇದೊಂದು ವ್ಯವಸ್ಥಿತ ಕೊಲೆ ಪ್ರಕರಣವಾಗಿದ್ದು, ಸಂಪೂರ್ಣ ಸಾಕ್ಷಿಗಳನ್ನು ನಾಶ ಮಾಡಿದ್ದಾರೆ. ಕಾವ್ಯ ಕಾಲೇಜಿಗೆ ಬರುವ ಸಿಸಿಟಿವಿ ದೃಶ್ಯಾವಳಿಗಳು ಮಾಧ್ಯಮಕ್ಕೆ ನೀಡಿದವರು ಆಕೆಯನ್ನು ಆಸ್ಪತ್ರೆಗೆ ಕೊಂಡೊಯ್ಯುವ ದೃಶ್ಯಾವಳಿಗಳನ್ನು ಕೂಡ ಮಾಧ್ಯಮಗಳಿಗೆ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.


Spread the love

Exit mobile version