Home Mangalorean News Kannada News ಕಾಶ್ಮೀರದಲ್ಲಿ ನಡೆಯುತ್ತಿರುವ ಹಿಂಸಾಚಾರವನ್ನು ತಡೆಗಟ್ಟಲು ಸೇನೆಗೆ ಸರ್ವಾಧಿಕಾರ ನೀಡಿ

ಕಾಶ್ಮೀರದಲ್ಲಿ ನಡೆಯುತ್ತಿರುವ ಹಿಂಸಾಚಾರವನ್ನು ತಡೆಗಟ್ಟಲು ಸೇನೆಗೆ ಸರ್ವಾಧಿಕಾರ ನೀಡಿ

Spread the love

ಕಾಶ್ಮೀರದಲ್ಲಿ ನಡೆಯುತ್ತಿರುವ ಹಿಂಸಾಚಾರವನ್ನು ತಡೆಗಟ್ಟಲು ಸೇನೆಗೆ ಸರ್ವಾಧಿಕಾರ ನೀಡಿ 

ಕಾಶ್ಮೀರದಲ್ಲಿ ದೇಶವಿರೋಧಿ ಕೃತ್ಯಗಳು ದಿನೇ ದಿನೇ ಹೆಚ್ಚಾಗುತ್ತಿದೆ. ಗಡಿ ಕಾವಲು ಕಾಯುವ ಸೈನಿಕರನ್ನು ಸೆರೆಹಿಡಿದು ಹೊಡೆಯುವುದು, ಜಿಹಾದಿ ಉಗ್ರರೊಂದಿಗೆ ಹೋರಾಡುವ ಸೈನಿಕರ ಮೇಲೆ ಕಲ್ಲು ಎಸೆಯುವುದು, ಪಾಕಿಸ್ತಾನ ಮತ್ತು “ಇಸ್ಲಾಮಿಕ್ ಸ್ಟೇಟ’’ ಬಾವುಟವನ್ನು ಹಾರಿಸುವುದು ಮುಂತಾದ ದೇಶದ್ರೋಹಿ ಚಟುವಟಿಕೆಗಳು ಬಹಿರಂಗವಾಗಿ ನಡೆಯುತ್ತಿದೆ. ಕೆಲವು ಸಮಯದ ಮೊದಲು ಪಾಕಿಸ್ತಾನಿ ಸೇನೆಯು ಗಡಿ ಕಾವಲು ಕಾಯುವ ಇಬ್ಬರು ಭಾರತೀಯ ಸೈನಿಕರ ಹತ್ಯೆ ಮಾಡಿ ಅವರ ಶರೀರವನ್ನು ಛಿದ್ರಗೊಳಿಸಿ ವಿಡಂಬನೆ ಮಾಡಿತು. ಸೈನಿಕರಿಗೆ ಇದೆಲ್ಲವನ್ನು ಸಹಿಸಬೇಕಾಗಿದೆ. ಸೈನಿಕರ ಕೈಯಲ್ಲಿ ಬಂದೂಕು ಇ್ತದ್ದರೂ,ಹಿರಿಯ ಅಧಿಕಾರಿಗಳ ಆದೇಶವಿಲ್ಲದ ಕಾರಣ ಅವರು ಈ ಧರ್ಮಾಂಧರಿಗೆ ತಕ್ಕ ಪ್ರತ್ಯುತ್ತರವನ್ನು ನೀಡಲು ಸಾಧ್ಯವಾಗುತ್ತಿಲ್ಲ. ಇದು ದೌರ್ಭಾಗ್ಯವೇ ಆಗಿದೆ. ಹಾಗೂ ಭಾರತೀಯ ಸೇನೆಯ ಮನೋಬಲವನ್ನು ಕಸಿದು ಕೊಳ್ಳುವಂತಹದಾಗಿದೆ. ಸೈನಿಕರ ಮೇಲೆ ಕಲ್ಲು ಎಸೆಯುವ ಈ ದೇಶದ್ರೋಹಿಗಳ ಮೇಲೆ ಅತ್ಯಂತ ಕಠಿಣವಾದ ಕ್ರಮವನ್ನು ಜರುಗಿಸಲು ಸೈನಿಕರಿಗೆ ಸರ್ವಾಧಿಕಾರವನ್ನು ನೀಡುವ ಅವಶ್ಯಕತೆಯಿದೆ. ಸೈನಿಕರ ಮೇಲ ಕಲ್ಲು ಎಸೆಯುವ ದೇಶವಿರೋಧಿ ಘೋಷಣೆಗಳನ್ನು ಕೂಡುವವರನ್ನು “ದೇಶದ್ರೋಹಿ’’ಗಳೆಂದು ಪರಿಗಣಿಸಿ ಅವರ ಮೇಲೆ ಅಪರಾಧವನ್ನು ದಾಖಲಿಸಬೇಕು. ಇತ್ಯಾದಿ ಬೇಡಿಕೆಗಳಿಗಾಗಿ ಸಮಸ್ತ ಹಿಂದುತ್ವನಿಷ್ಠ ಸಂಘಟನೆಗಳ ಪರವಾಗಿ ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿಯ ಎದುರು “ರಾಷ್ಟ್ರೀಯ ಹಿಂದೂ ಚಳುವಳಿ’’ಯನ್ನು ನಡೆಸಲಾಯಿತು.

ಧರ್ಮಪರಿವರ್ತನೆಗೆ ಪ್ರೇರೇಪಿಸುವ “ ತೇಲಂಗಾಣದ ಸ್ಟೇಟ ಕ್ರಿಶ್ಚಿಯನ್ ಫಾಯನಾನ್ಸ ಕಾರ್ಪೊರೇಷನ್’’ ನಿರ್ಣಯವನ್ನು ನಿರಾಕರಿಸಿರಿ|

ಭಾರತದಲ್ಲಿ ಧರ್ಮನಿರಪೇಕ್ಷ ಸರಕಾರವಿದೆಯೆಂದು ಹೇಳುತ್ತಾ, ಹಿಂದೂಗಳಿಗೆ ಸರಕಾರದ ಅನುದಾನವನ್ನು ನೀಡಲು ವಿರೋಧಿಸುತ್ತಾರೆ ಆದರೆ ಅಲ್ಪಂಸಖ್ಯಾತ ಮುಸಲ್ಮಾನರು ಹಾಗೂ ಕ್ರಿಶ್ಚಿಯನ್ನರಿಗೆ ಜನತೆಯ ತೆರಿಗೆಯಿಂದ ಸಂಗ್ರಹಿಸಿರುವ ನಿಧಿಯಿಂದ ಕೈಸಡಿಲ ಬಿಟ್ಟು ಹಂಚಲಾಗುತ್ತಿದೆ. ಇಷ್ಟೇ ಅಲ್ಲ ಸರಕಾರದ ಮಟ್ಟದಲ್ಲಿಯೂ ಧರ್ಮಪರಿವರ್ತನೆಗಾಗಿ ಪ್ರೋತ್ಸಾಹವನ್ನು ನೀಡಲಾಗುತ್ತಿದೆ. “ತೇಲಂಗಾಣ ಸ್ಟೇಟ ಕ್ರಿಶ್ಚಿಯನ್ (ಅಲ್ಪಸಂಖ್ಯಾತ) ಫಾಯನಾನ್ಸ ಕಾರ್ಪೊರೇಷನ್’ಸಂಘದ ಪರವಾಗಿ ಒಂದು ವಿಶೇಷ ಯೋಜನೆಯನ್ನು ಪ್ರಾರಂಭಿಸಲಾಗಿದೆ. ಈ ಯೋಜನೆಯ ಮುಖಾಂತರ ಅಲ್ಪಸಂಖ್ಯಾತರಿಗಾಗಿ ಸುಮಾರು ರೂ. 10.00 ಲಕ್ಷ ಗಳಿಗಿಂತ ಕಡಿಮೆ ಅನುದಾನ ಪಡೆಯಲು ಕೆಲವು ಷರತ್ತುಗಳನ್ನು ಹಾಕಲಾಗಿದೆ. ಇದರಲ್ಲಿ ಮೊದಲನೇಯ ಷರತ್ತಿನನ್ವಯ ವ್ಯಕ್ತಿಯು ಕ್ರಿಶ್ಚಿಯನ್ ಆಗಿರಬೇಕು. ಕ್ರಿಶ್ಚಿಯನ್ ಆಗಿರುವ ಪ್ರಮಾಣ ಪತ್ರ ಹಾಗೂ “ಬ್ಯಾಪ್ಟಿಸ್ಮ’’ ಪ್ರಮಾಣಪತ್ರವನ್ನು ಲಗತ್ತಿಸಬೇಕು. ಆದ್ದರಿಂದ ಬಡವರಾಗಿದ್ದರೂ ಕೇವಲ ಹಿಂದೂಗಳಾಗಿರುವ ಕಾರಣದಿಂದ ಸರಕಾರಿ ಸವಲತ್ತುಗಳು ದೊರಕುವುದಿಲ್ಲ ಎನ್ನುವಂತಹ ಸಂದೇಶ ಜನರಿಗೆ ತಲುಪುವುದು. ಇದರ ಪರಿಣಾಮವಾಗಿ ಹಿಂದೂಗಳಲ್ಲಿ ಅನ್ಯಾಯದ ಭಾವನೆ ಹೆಚ್ಚುವುದು ಹಾಗೂ ಅನುದಾನ ಪಡೆಯಲಿಕ್ಕೋಸ್ಕರ ಧರ್ಮಪರಿವರ್ತನೆಗೊಂಡು ಕ್ರಿಶ್ಚಿಯನ್‍ಯಾಗಿ ಮತಾಂತರಗೊಳ್ಳುವರು. ಆದ್ದರಿಂದ ಧರ್ಮಪರಿವರ್ತನೆಯನ್ನು ಪ್ರೇರೇಪಿಸುವ ಹಾಗೂ ಕೇವಲ ಕ್ರಿಶ್ಚಿಯನ್ನರಿಗೆ ಸ್ವಯಂ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಆರ್ಥಿಕ ಸಹಾಯ ನೀಡುವ “ತೇಲಂಗಾಣ ಸ್ಟೇಟ ಕ್ರಿಶ್ಚಿಯನ್ ಫಾಯನಾನ್ಸ ಕಾರ್ಪೊರೇಶನ’’ಸಂಘದ ನಿರ್ಣಯವನ್ನು ತಿರಸ್ಕರಿಸಬೇಕು.

ಇದರೊಂದಿಗೆ ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿ ಮಶೀದಿಗಳ ಮೇಲೆ ಧ್ವನಿಕ್ಷೇಪಣ ಯಂತ್ರವನ್ನು ಉಪಯೋಗಿಸಿ ಕೂಗುವ ಬೆಳಗ್ಗಿನ ಅಜಾನ ಪೂರ್ಣವಾಗಿ ಸ್ಥಗಿತಗೊಳಿಸಬೇಕು ಹಾಗೂ ದೇಶದ ಎಲ್ಲ ಮಸೀದಿಗಳ ಮೇಲಿರುವ ಧ್ವನಿಕ್ಷೇಪಣ ಯಂತ್ರಗಳ ವಿವರಗಳನ್ನು ಪಡೆದುಕೊಂಡು ತಕ್ಷಣವೇ ಅವುಗಳನ್ನು ತೆಗೆಸಲು ಆದೇಶ ನೀಡಬೇಕು. ಈ ಮುಂತಾದ ಬೇಡಿಕೆಗಳನ್ನು ಕೂಡ ಈ ಸಮಯದಲ್ಲಿ ಕೋರಲಾಯಿತು.

ಈ ಸಂದರ್ಭದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ದ.ಕ ಜಿಲ್ಲಾ ಸಮನ್ವಯಕರಾದ ಶ್ರೀ ಚಂದ್ರ ಮೊಗೇರ,ಸನಾತನ ಸಂಸ್ಥೆಯ ಸೌ.ಸಂಗೀತಾ ಪ್ರಭು, ಹಿಂದೂ ಸಂಘಟಕರಾದ ಶ್ರೀ ಸತೀಶ, ಶ್ರೀ ಲೊಕೇಶ ಕುತ್ತಾರ ಇನ್ನಿತರರು ಉಪಸ್ಥಿತರಿದ್ದರು.


Spread the love

Exit mobile version