Home Mangalorean News Kannada News ಕಾಶ್ಮೀರದಲ್ಲಿ ಸಿ.ಆರ್.ಪಿ.ಎಫ್ ಯೋಧರ ಹತ್ಯೆ; ಯಶ್ ಪಾಲ್ ಸುವರ್ಣ ಖಂಡನೆ

ಕಾಶ್ಮೀರದಲ್ಲಿ ಸಿ.ಆರ್.ಪಿ.ಎಫ್ ಯೋಧರ ಹತ್ಯೆ; ಯಶ್ ಪಾಲ್ ಸುವರ್ಣ ಖಂಡನೆ

Spread the love
RedditLinkedinYoutubeEmailFacebook MessengerTelegramWhatsapp

ಕಾಶ್ಮೀರದಲ್ಲಿ ಸಿ.ಆರ್.ಪಿ.ಎಫ್ ಯೋಧರ ಹತ್ಯೆ; ಯಶ್ ಪಾಲ್ ಸುವರ್ಣ ಖಂಡನೆ

ಉಡುಪಿ: ಕಾಶ್ಮೀರದಲ್ಲಿ ಸಿ ಆರ್ ಪಿ ಎಫ್ ಯೋಧರ ಮೇಲೆ ಪಾಕ್ ಪ್ರೇರಿತ ಉಗ್ರರ ಧಾಳಿಯನ್ನು ಉಡುಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯಶ್ ಪಾಲ್ ಸುವರ್ಣ ತೀವ್ರವಾಗಿ ಖಂಡಿಸಿದ್ದಾರೆ.

 ಭಾರತೀಯ ಸೇನೆಯ ಹುತಾತ್ಮ ಯೋಧರ ಬಲಿದಾನ ಎಂದಿಗೂ ವ್ಯರ್ಥವಾಗದಂತೆ ಉಗ್ರರ  ಸದೆಬಡಿಯಲು ಪ್ರಧಾನಿ ನರೇಂದ್ರ ಮೋದಿಯವರು ಈಗಾಗಲೇ ಪಣತೊಟ್ಟಿದ್ದು ಇವರೊಂದಿಗೆ ದೇಶದ ಯುವಜನತೆ ಕೂಡ ಬೆಂಬಲ ವ್ಯಕ್ತಪಡಿಸಿದ್ದಾರೆ.

  ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿಯೂ ಕೆಲವು ಬುದ್ದಿಜೀವಿಗಳು ಉಗ್ರರನ್ನು ಬೆಂಬಲಿಸಿ ಹೇಳಿಕೆ ನೀಡಿ ದೇಶದ್ರೋಹಿಗಳಂತೆ  ವರ್ತಿಸುತ್ತಿರುವುದು ಖಂಡನೀಯ. ದೇಶದಲ್ಲಿಯೇ ಹುಟ್ಟಿ, ಸಕಲ ಸೌಲಭ್ಯಗಳನ್ನು ಬಳಸಿ ಇದೀಗ ದೇಶದ ಸೈನಿಕರ ನೈತಿಕ ಸ್ಥೈರ್ಯ ಕುಗ್ಗಿಸಲು ಯತ್ನಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

 ಈ ಸಂದರ್ಭದಲ್ಲಿ ದೇಶದ ನಾಗರಿಕರೆಲ್ಲರೂ ನರೇಂದ್ರ ಮೋದಿಯವರು ಉಗ್ರರ ಸದೆಬಡಿಯಲು ಕೈಗೊಳ್ಳುವ ನಿರ್ಧಾರಕ್ಕೆ ಸಹಕರಿಸುವಂತೆ ಮನವಿ ಮಾಡಿದ್ದಾರೆ.


Spread the love
RedditLinkedinYoutubeEmailFacebook MessengerTelegramWhatsapp

Exit mobile version