ಕಾಶ್ಮೀರದಲ್ಲಿ 370 ವಿಧಿ ರದ್ದು ಎತ್ತಿ ಹಿಡಿದ ಸುಪ್ರೀಂ ಕೋರ್ಟ್ ಕ್ರಮ ಸ್ವಾಗತಾರ್ಹ – ನಯನಾ ಗಣೇಶ್
ಉಡುಪಿ: ದೇಶದ ಮುಕುಟ ಮಣಿ ಕಾಶ್ಮೀರದಲ್ಲಿ 370 ವಿಧಿ ರದ್ದುಗೊಳಿಸಿದ ಕೇಂದ್ರ ಸರ್ಕಾರದ ಕ್ರಮವನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿರುವುದನ್ನು ಬಿಜೆಪಿ ರಾಜ್ಯ ಉಪಾಧ್ಯಕ್ಷೆ ನಯನ ಗಣೇಶ್ ಸ್ವಾಗತಿಸಿದ್ದಾರೆ.
ಜನಸಂಘದ ದಿವಂಗತ ಶ್ಯಾಮ್ ಪ್ರಸಾದ್ ಮುಖರ್ಜಿ ಸ್ವಾತಂತ್ರ್ಯ ಬಂದ ಹೊಸದರಲ್ಲಿ ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿರುವುದನ್ನು ವಿರೋಧಿಸಿ ಒಂದು ದೇಶದಲ್ಲಿ ಎರಡು ಕಾನೂನು ಸಲ್ಲದು ಪ್ರಬಲವಾಗಿ ಪ್ರತಿಪಾದಿಸಿದವರು,ಆ ನಿಟ್ಟಿನಲ್ಲಿ ಹೋರಾಟ ನಡೆಸಿ ಹುತಾತ್ಮರಾದರು,ಬಿಜೆಪಿ ನೇತೃತ್ವದ ಕೇಂದ್ರ ದಲ್ಲಿ ಸರ್ಕಾರ ಬಂದ ನಂತರ ಕಾಶ್ಮೀರ ಕ್ಕೆ ವಿಶೇಷ ಸ್ಥಾನಮಾನ ವನ್ನು ರದ್ದುಪಡಿಸಿ ತೀರ್ಮಾನ ಕೈಗೊಂಡಿತ್ತು, ಈ ನಿರ್ಧಾರವನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿಯುವ ಮೂಲಕ ದೇಶದ ಕೋಟ್ಯಂತರ ಭಾವನೆಗೆ ಸ್ಪಂದಿಸುವ ಕೆಲಸ ಮಾಡಿದೆ,ಉಗ್ರವಾದ ಕೂಡ ಹತೋಟಿಗೆ ಬಂದಿದ್ದು,ಅಲ್ಲಿನ ವಾತಾವರಣ ಸಂಪೂರ್ಣ ಬದಲಾಗಿದೆ,ನರೇಂದ್ರ ಮೋದಿ ನೇತೃತ್ವದ ದಿಟ್ಟ ನಿರ್ಧಾರದಿಂದ ಲಕ್ಷಾಂತರ ಕಾಶ್ಮೀರಿಗಳ ಹಕ್ಕು ರಕ್ಷಣೆಯಾಗಿದ್ದು,ಸುಪ್ರೀಂ ಕೋರ್ಟ್ ನ ಈ ಐತಿಹಾಸಿಕ ತೀರ್ಪನ್ನು ಬಿಜೆಪಿ ರಾಜ್ಯ ಉಪಾಧ್ಯಕ್ಷೆ ಶ್ರೀಮತಿ ನಯನ ಗಣೇಶ್ ಹೇಳಿಕೆಯಲ್ಲಿ ಸ್ವಾಗತಿಸಿದ್ದಾರೆ