‘ಕಾಸರಗೋಡಿನ ಕನ್ನಡ ಹೋರಾಟ’-ಪೆರ್ಲರ ಕೃತಿ ಸಚಿವೆ ಜಯಮಾಲಾಗೆ ಹಸ್ತಾಂತರ
ಮಂಗಳೂರು : ಕಾಸರಗೋಡಿನ ಕನ್ನಡಿಗರ ಮತ್ತು ಕನ್ನಡದ ಜ್ವಲಂತ ಸಮಸ್ಯೆಯನ್ನು ಬಿಂಬಿಸುವ ಸಂಶೋಧನಾ ಪ್ರಬಂಧ ‘ಕಾಸರಗೋಡಿನ ಕನ್ನಡ ಹೋರಾಟ’ದ ಕೃತಿಕಾರ ಮಂಗಳೂರು ಆಕಾಶವಾಣಿಯ ಕಾರ್ಯಕ್ರಮ ನಿರ್ವಾಹಕರಾದ ಡಾ.ಸದಾನಂದ ಪೆರ್ಲ ಕರ್ನಾಟಕ ಸರಕಾರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕøತಿ ಸಚಿವೆ ಡಾ.ಜಯಮಾಲಾ ಅವರಿಗೆ ಕೃತಿಯನ್ನು ಇತ್ತೀಚಿಗೆ ಮಂಗಳೂರಿನಲ್ಲಿ ನೀಡಿದರು.
ಕಾಸರಗೋಡಿನ ಜ್ವಲಂತ ಸ್ಥಿತಿಗತಿ ಅಧ್ಯಯನ ಮಾಡಲು ಆಸಕ್ತರಾದ ಸಚಿವರಿಗೆ ಅಲ್ಲಿನ ಕನ್ನಡ ಹೋರಾಟ, ಹೋರಾಟಗಾರರು, ಮತ್ತು ಮಹಾಜನ ವರದಿಯಲ್ಲಿ ಉಲ್ಲೇಖಿತ ಅಂಶಗಳ ಬಗ್ಗೆ ಸವಿವರ ಮಾಹಿತಿಯ ಕೃತಿಯಾಗಿರುವುದರಿಂದ ಇದನ್ನು ಖುದ್ದಾಗಿ ಓದಿ ತಿಳಿದುಕೊಳ್ಳುವೆ ಮತ್ತು ಇಂತಹ ಉತ್ತಮ ಅಧ್ಯಯನ ಕಾರ್ಯ ನಡೆಸಿ ದಾಖಲೆ ಮಾಡಿದ ಅಂಶ ಪ್ರಶಂಸನೀಯ ಎಂದು ಸಚಿವರು ನುಡಿದರು.
ಕಾಸರಗೋಡಿನ ಸ್ಥಿತಿಗತಿ ತಿಳಿಯಲು ಇದೊಂದು ಆಕರ ಗ್ರಂಥ ಎಂದು ಸಿನಿಮಾ ಪತ್ರಕರ್ತ ಬಿ.ಎನ್.ಸುಬ್ರಹ್ಮಣ್ಯ ಸಚಿವರಿಗೆ ವಿಶ್ಲೇಷಿಸಿದರು. ಮಾಜಿ ಸಚಿವರಾದ ರಮಾನಾಥ ರೈ, ಶಾಸಕಿ ಶಕುಂತಳಾ ಶೆಟ್ಟಿ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎ.ಸಿ.ಭಂಡಾರಿ ತುಳು ಅಕಾಡೆಮಿ ಸದಸ್ಯ ತಾರಾನಾಥ ಗಟ್ಟಿ ಕಾಪಿಕಾಡ್ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.