ಕಾಸರಗೋಡು : ದೇವಸ್ಥಾನ ಉತ್ಸವ ವೇಳೆ ಪಟಾಕಿ ಸ್ಪೋಟ, ಮೃತರ ಸಂಖ್ಯೆ ನಾಲ್ಕಕ್ಕೆ ‌ಏರಿಕೆ

Spread the love

ಕಾಸರಗೋಡು : ದೇವಸ್ಥಾನ ಉತ್ಸವ ವೇಳೆ ಪಟಾಕಿ ಸ್ಪೋಟ, ಮೃತರ ಸಂಖ್ಯೆ ನಾಲ್ಕಕ್ಕೆ ‌ಏರಿಕೆ

ಕಾಸರಗೋಡಿನ ನೀಲೇಶ್ವರ ವಿರಾರ್ ಕಾವ್ ದೈವ ಸ್ಥಾನದ ಕಳಿಯಾಟ್ಟಂ ಮಹೋತ್ಸವ ದ ಸಂದರ್ಭದಲ್ಲಿ ನಡೆದ ಸುಡುಮದ್ದು ಸ್ಫೋಟ ದ ಪ್ರಕರಣದಲ್ಲಿ ಮೃತಪಟ್ಟವರ ಸಂಖ್ಯೆ ನಾಲ್ಕಕ್ಕೇರಿದೆ.

ಕಿನಾವೂರಿನ ಯು. ರತೀಶ್ (40), ಕೊಲ್ಲಂಪಾರೆಯ ಆಟೋ ಚಾಲಕ ಕೆ. ಬಿಜು( 37), ಚೆರ್ವತ್ತೂರು ತುರುತ್ತಿಯ ಶೋಬಿನ್ ರಾಜ್ (19) ರವಿವಾರ ಮೃತ ಪಟ್ಟಿ ದ್ದಾರೆ. ಕಿನಾವೂರಿನ ಸಂದೀಪ್ (38) ಶನಿವಾರ ಮೃತ ಪಟ್ಟಿದ್ದರು. ರತೀಶ್, ಬಿಜು, ಶೋಬಿನ್ ರಾಜ್ ಕೋಝಿಕ್ಕೋಡ್ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟರು.

ಶೋಬಿನ್ ರಾಜ್ ಚೆನ್ನೈ ಯಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ಆಗಿದ್ದರು. ಕಳೆದ ಸೋಮವಾರ ರಾತ್ರಿ ಘಟನೆ ನಡೆದಿತ್ತು. ಸ್ಫೋಟದಲ್ಲಿ 154 ಮಂದಿ ಗಾಯ ಗೊಂಡಿದ್ದರು. ಈ ಪೈಕಿ 8 ಮಂದಿಗೆ ಗಂಭೀರ ಸುಟ್ಟ ಗಾಯಗಾಯಗಳಾಗಿತ್ತು. ಗಾಯಗೊಂಡ 90 ಕ್ಕೂ ಅಧಿಕ ಮಂದಿ ಈಗಲೂ ಮಂಗಳೂರು ಸೇರಿದಂತೆ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.


Spread the love