ಕುಂಟ್ರಕಳ ವೆಲಂಕಣಿ ಗುಡಿ ಧ್ವಂಸ ಪ್ರಕರಣ: ಮತ್ತಿಬ್ಬರು ಆರೋಪಿಗಳ ಸೆರೆ

Spread the love

ಕುಂಟ್ರಕಳ ವೆಲಂಕಣಿ ಗುಡಿ ಧ್ವಂಸ ಪ್ರಕರಣ: ಮತ್ತಿಬ್ಬರು ಆರೋಪಿಗಳ ಸೆರೆ

ಬಂಟ್ವಾಳ: ಕೊಳ್ನಾಡು ಗ್ರಾಮದ ಕುಂಟ್ರಕಳ ಎಂಬಲ್ಲಿ ವೆಲಂಕಣಿ ಮಾತೆಯ ಗುಡಿ ಧ್ವಂಸ ಮಾಡಿ, ಕೇಸರಿ ಧ್ವಜ ಹಾರಿಸಿದ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ವಿಟ್ಲ ಪೊಲೀಸರು ಬಂಧಿಸಿದ್ದಾರೆ.

ಇಲ್ಲಿನ ನಿವಾಸಿಗಳಾದ ವಸಂತ ನಾಯ್ಕ(37), ಯೋಗೇಶ ನಾಯ್ಕ(32) ಬಂಧಿತ ಆರೋಪಿಗಳು.

ಆರೋಪಿಗಳಿಬ್ಬರನ್ನು ಸಾಲೆತ್ತೂರು ಎಂಬಲ್ಲಿ ವಶಕ್ಕೆ ಪಡೆದು ದಸ್ತಗಿರಿ ಮಾಡಲಾಗಿದೆ. ಮುಂದಿನ ಕ್ರಮಕ್ಕೆ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಗಳ ವಿರುದ್ಧ ಅ.ಕ್ರ. 257/18 ಕಲಂ 143, 147, 153(ಎ), 295(ಎ), 427 ಆರ್/ಡಬ್ಲ್ಯು 149 ರಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲಿಸರು ಮಾಹಿತಿ ನೀಡಿದ್ದಾರೆ.

ಸೆ. 27ರಂದು ರಾತ್ರಿ ದುಷ್ಕರ್ಮಿಗಳ ತಂಡವೊಂದು ತಾಲೂಕಿನ ವಿಟ್ಲ-ಕೊಳ್ನಾಡು ಗ್ರಾಮದ ಕುಲಾಳು ಎಂಬಲ್ಲಿ ವೆಲಂಕಣಿ ಮಾತೆಯ ಗುಡಿಯನ್ನು ಧ್ವಂಸ ಮಾಡಿ, ಆ ಜಾಗದಲ್ಲಿ ಕೇಸರಿ ಧ್ವಜ ಇಡಲಾಗಿತ್ತು ಎಂಬ ಆರೋಪದಡಿ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿ ಇಲ್ಲಿನ ನಿವಾಸಿಗಳಾದ ಜಯರಾಮ ನಾಯ್ಕ, ಮೋನಪ್ಪ ನಾಯ್ಕ ಎಂಬವರನ್ನು ಪೊಲೀಸರು ಬಂಧಿಸಿದ್ದರು.


Spread the love