ಕುಂದಾಪುರದಲ್ಲಿ ಧಾರಾಕಾರ ಮಳೆ – ಚರಂಡಿಯಾಗಿ ಬದಲಾಯಿತು ರಾ.ಹೆದ್ದಾರಿ, ಜನತೆ ಹೈರಾಣ
ಮಳೆಗಾಲದ ಪೂರ್ವ ತಯಾರಿ ನಡೆಸಿಲ್ಲ, ಮೊಣಕಾಲಿನವರೆಗೂ ನಿಂತ ನೀರು.
ಚರಂಡಿಯಾಗಿ ಬದಲಾಯಿತು ರಾಷ್ಟ್ರೀಯ ಹೆದ್ದಾರಿ, ಪಾದಚಾರಿಗಳು, ವಾಹನ ಸವಾರರು ಹೈರಾಣ.
ಕುಂದಾಪುರ: ನಿಸರ್ಗ ಚಂಡಮಾರುತ ಪರಿಣಾಮ ಕರಾವಳಿಯಲ್ಲಿ ಮಂಗಳವಾರ ರಾತ್ರಿಯಿಂದಲೇ ಧಾರಕಾರವಾಗಿ ಸುರಿದ ಮಳೆಯಿಂದಾಗಿ ಬುಧವಾರ ಬೆಳಿಗ್ಗೆ ಇಲ್ಲಿನ ಬಸ್ರೂರು ಮೂರುಕೈಯಿಂದ ವಿನಾಯಕ ನಿಲ್ದಾಣದವರೆಗಿನ ರಾಷ್ಟ್ರೀಯ ಹೆದ್ದಾರಿ-66 ಸಂಪೂರ್ಣ ಜಲಾವೃತಗೊಂಡಿದೆ.
ಸರಿಪಡಿಸದ ಗುತ್ತಿಗೆ ಕಂಪೆನಿ:
ರಾಷ್ಟ್ರೀಯ ಹೆದ್ದಾರಿಯಲ್ಲಿ ನೀರು ತುಂಬಿ ಕೆರೆಯಂತಾದರೂ ಕಾಮಗಾರಿ ಗುತ್ತಿಗೆ ವಹಿಸಿಕೊಂಡಿರುವ ನವಯುಗ ಕಂಪೆನಿ ಅವ್ಯವಸ್ಥೆಯನ್ನು ಸರಿಪಡಿಸುವ ಗೋಜಿಗೆ ಹೋಗಿಲ್ಲ. ಬುಧವಾರ ಬೆಳಿಗ್ಗೆಯಿಂದಲೂ ನೀರು ತುಂಬಿಕೊಂಡಿದ್ದರಿಂದ ವಾಹನಗಳ ಸಂಚಾರಕ್ಕೆ ಸಾಕಷ್ಟು ತೊಡಕುಂಟಾಗಿತ್ತು. ಇಷ್ಟೆಲ್ಲಾ ಅವ್ಯವಸ್ಥೆಗಳು ಇದ್ದರೂ ಸಂಬಂಧಪಟ್ಟ ಗುತ್ತಿಗೆ ಕಂಪೆನಿ ನೀರು ಸರಾಗವಾಗಿ ಹರಿಯಲು ತುರ್ತು ಕೆಲಸಕ್ಕೆ ಮುಂದಾಗದಿರುವುದು ವಾಹನ ಸವಾರರ ಆಕ್ರೋಶಕ್ಕೆ ಎಡೆಮಾಡಿಕೊಟ್ಟಿದೆ. 11 ಗಂಟೆಯ ಬಳಿಕ ಮೂವರು ಕೆಲಸಗಾರರು ಸ್ಥಳಕ್ಕೆ ಬಂದು ಕೆಲಸ ಆರಂಭಿಸಿದರೂ ಹೆದ್ದಾರಿಯಲ್ಲಿ ನಿಂತಿರುವ ನೀರು ಮಾತ್ರ ಕಡಿಮೆಯಾಗದೆ ಸವಾರರು ದಿನಪೂರ್ತಿ ಸಂಕಷ್ಟಕ್ಕೆ ಸಿಲುಕುವಂತಾಯಿತು.
ಅರೆಬರೆ ಕಾಮಗಾರಿಗೆ ಸಂಚಾರ ಅಸ್ತವ್ಯಸ್ತ:
ದಶಕ ಕಳೆದರೂ ಕುಂದಾಪುರದ ಹೃದಯಭಾಗದಲ್ಲಿ ಅಪೂರ್ಣಗೊಂಡಿರುವ ಫ್ಲೈಓವರ್ ಕಾಮಗಾರಿಯಿಂದ ಪ್ರತೀ ಮಳೆಗಾಲಕ್ಕೂ ಸವಾರರಿಗೆ ಒಂದಿಲ್ಲೊಂದು ಸಮಸ್ಯೆ ಎದುರಾಗುತ್ತಲೇ ಇದೆ. ಫ್ಲೈಓವರ್ ಪಕ್ಕದ ಸರ್ವೀಸ್ ರಸ್ತೆಗಳಲ್ಲಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದು, ಅವೈಜಾÐನಿಕ ಕಾಮಗಾರಿಯಿಂದಾಗಿ ಸರಾಗವಾಗಿ ಹೋಗದೆ ಸರ್ವೀಸ್ ರಸ್ತೆಯಲ್ಲಿ ನೀರು ತುಂಬಿಕೊಳ್ಳುತ್ತಿದೆ