ಕುಂದಾಪುರದ ಶಾಸಕರು ಕೇವಲ ಪತ್ರ ಹಾಗೂ ಹೇಳಿಕೆಗಳಿಗೆ ಸೀಮಿತ – ವಿಕಾಸ್ ಹೆಗ್ಡೆ

Spread the love

ಕುಂದಾಪುರದ ಶಾಸಕರು ಕೇವಲ ಪತ್ರ ಹಾಗೂ ಹೇಳಿಕೆಗಳಿಗೆ ಸೀಮಿತ – ವಿಕಾಸ್ ಹೆಗ್ಡೆ

ಕುಂದಾಪುರ: ಕುಂದಾಪುರ ವಿಧಾನ ಸಭಾ ಕ್ಷೇತ್ರದ ಶಾಸಕರು ಕ್ಷೇತ್ರದ ಜ್ವಲಂತ ಸಮಸ್ಯೆಗಳ ಪರಿಹಾರ ಮಾಡುವುದನ್ನು ಬಿಟ್ಟು ಕೇವಲ ಸಚಿವರುಗಳಿಗೆ, ಇಲಾಖಾ ಅಧಿಕಾರಿಗಳಿಗೆ ಪತ್ರಗಳನ್ನು ನೀಡುವುದು ಅದನ್ನು ಪತ್ರಿಕೆಗಳಲ್ಲಿ ಪ್ರಚಾರ ಪಡಿಸುವ ಕೆಲಸ ಮಾಡುತ್ತಿದ್ದಾರೆ ಬಿಟ್ಟರೆ ಕ್ಷೇತ್ರದ ಸಮಸ್ಯೆಗಳ ಪರಿಹಾರಕ್ಕೆ ಪ್ರಯತ್ನ ಮಾಡುವುದಿಲ್ಲ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ವಕ್ತಾರ ಕೆ. ವಿಕಾಸ್ ಹೆಗ್ಡೆ ಹೇಳಿದ್ದಾರೆ.

ಇವತ್ತು ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇದ್ದು ಕ್ಷೇತ್ರದ ಶಾಸಕರು ವಿರೋಧ ಪಕ್ಷದವರಿರ ಬಹುದು ಆದರೆ ಕ್ಷೇತ್ರದ ಕೆಲವೊಂದು ಸಮಸ್ಯೆ ಇಂದು ನಿನ್ನೆಯದಲ್ಲಾ, ಅದೆಷ್ಟೋ ವರ್ಷಗಳಿಂದ ಕುಂದಾಪುರದ ಶಾಸಕರು, ಸಂಸದರು, ಪುರಸಭೆ, ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯತ್ ಎಲ್ಲಾ ಬಿಜೆಪಿ ಆಡಳಿತದಲ್ಲೇ ಇದೆ ಆದರೆ ಎಲ್ಲಾ ಸಮಸ್ಯೆಗಳು, ಜನರ ಬೇಡಿಕೆಗಳು ಮಾತ್ರ ಹಾಗೆಯೇ ಉಳಿದುಕೊಂಡಿದೆ. ಒಕ್ಕೂಟ ವ್ಯವಸ್ಥೆಯಲ್ಲಿ ಎಲ್ಲಾ ಸಮಸ್ಯೆಗಳು ರಾಜ್ಯ ಸರಕಾರದಿಂದಲೇ ಪರಿಹಾರವಾಗಬೇಕು ಎಂದಿಲ್ಲಾ, ಕೇಂದ್ರ ಸರ್ಕಾರ ಕೂಡ ಜನರ ಸಮಸ್ಯೆಗಳನ್ನು ಪರಿಹರಿಸಬಹುದು, ಆದರೆ ಶಾಸಕರು ಮತ್ತು ಸಂಸದರು ಕೇಂದ್ರ ಸರ್ಕಾರದ ಪ್ರಯೋಜಿತ ಸಮಸ್ಯೆಗಳನ್ನು ಪರಿಹರಿಸಲು ಯಾವುದೇ ಪ್ರಯತ್ನ ಪಡದೇ ಕೇವಲ ಪತ್ರ ನೀಡುವುದು ಅದನ್ನು ಪ್ರಚಾರ ಮಾಡುವುದು ಜವಾಬ್ದಾರಿಯುತ ಜನಪ್ರತಿನಿದಿನಗಳ ಕೆಲಸವಲ್ಲಾ ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಕೆ. ವಿಕಾಸ್ ಹೆಗ್ಡೆ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿರುತ್ತಾರೆ.


Spread the love
Subscribe
Notify of

0 Comments
Inline Feedbacks
View all comments