ಕುಂದಾಪುರ: ಅನಧಿಕೃತ ಕ್ಲಬ್ ಮೇಲೆ ಎಎಸ್ಪಿ ಕೃಷ್ಣಕಾಂತ್ ದಾಳಿ: 20 ಜನ ವಶಕ್ಕೆ, ಲಕ್ಷಾಂತರ ನಗದು ವಶ
ಕುಂದಾಪುರ: ಉಡುಪಿ ತಾಲೂಕಿನ ಹಿಲಿಯಾಣ ಗ್ರಾಮದ ಹೈಕಾಡಿ ಎಂಬಲ್ಲಿ ಹೈಕಾಡಿ ಪ್ರೆಂಡ್ಸ ರಿಕ್ರೇಷಿಯನ್ ಕ್ಲಬ್ಬಿಗೆ ಶುಕ್ರವಾರ ಸಂಜೆ ದಾಳಿ ನಡೆಸಿದ ಕಾರ್ಕಳ ಎ ಎಸ್ಪಿ ಪಿ. ಕೃಷ್ಣಕಾಂತ್ ನೇತೃತ್ವದಲ್ಲಿ ದಾಳಿ ನಡೆಸಿ ಜೂಜಾಟದಲ್ಲಿ ತೊಡಗಿಸಿಕೊಂಡಿದ್ದ 20 ಮಂದಿ ಆರೋಪಿಗಳನ್ನು ದಸ್ತಗಿರಿ ಮಾಡಿದ್ದಲ್ಲದೆ ಅಪಾರ ಪ್ರಮಾಣದ ಹಣ ಹಾಗೂ ಲಕ್ಷಾಂತರ ರೂಪಾಯಿ ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಬಂಧಿತರನ್ನು ಸುರೇಶ್ ಜೆ. ಶೆಟ್ಟಿ (510 ಹಿಲಿಯಾಣ, ಸುಭಾಷ ಶೆಟ್ಟಿ (45) ಅಂಕದಕಟ್ಟೆ, ಕೋಟೇಶ್ವರ, ವಿಕ್ಟರ್ ಪಿಂಟೊ (72) ಬೊಂದೆಲ್ ಮಂಗಳೂರು, ಸುಧಾಕರ ಅಮೀನ್ (49) ಪಡುಕೆರೆ, ಮಲ್ಪೆ, ಕಮಲಾಕ್ಷ ಮೂಲ್ಯ (45) ತೆಂಕಬೈಲ್ಲೂರು ಬಂಟ್ವಾಳ ತಾಲೂಕು, ಶಿವರಾಮ (48) ಪಂಪವೆಲ್ ಮಂಗಳೂರು , ಸುಧಾಕರ ಶೆಟ್ಟಿ (41) ಹುಯ್ಯಾರು ಹೈಕಾಡಿ , ವಿಜಯ ಶೆಟ್ಟಿ (53) ಆವರ್ಸೆ ಗ್ರಾಮ, ಮುರುಳೀಧರ (46) ಸಾಲಿಗ್ರಾಮ ಚಿತ್ರಪಾಡಿ , ಬಶೀರ (35) ತುಂಬೆ ಮಂಗಳೂರು, ಬಾಬು ಶೆಟ್ಟಿ (42) ಕೊಡ್ಲಾಡಿ ಗ್ರಾಮ ಕುಂದಾಪುರ, ಸೂಹನ್ (30) ಕದ್ರಿ ಮಂಗಳೂರು, ನವೀನ (33) ಕರ್ಕಿ ನಾಕಾ ಹೊನ್ನಾವರ ಉ,ಕ ಜಿಲ್ಲೆ, ಮೋಹನ ನಾಯ್ಕ (40) ಹೊನ್ನಾವರ, ಸುರೇಶ ಶೆಟ್ಟಿ (47) ಹೆಬ್ರಿ , ಸಂದೀಪ್ (27), ಮಂಜುನಾಥ (28) ಬೆಳೂರು ದೇವಸ್ಥಾನ ಬೆಟ್ಟು, ಪ್ರಶಾಂತ (35) ಪೊಲಿಪು ಕಾಪು, ಪ್ರಕಾಶ ಟಿ ಗೊಂಡ (30) ಭಟ್ಖಳ , ವಿನೋಧ (22) ಕಟೀಲ್ ಎಂದು ಗುರುತಿಸಲಾಗಿದೆ.
ಮಂಗಳೂರು ಇವವರುಗಳು ಯಾವುದೇ ಪರವಾನಿಗೆ ಹೊಂದದೇ ಅಕ್ರಮವಾಗಿ ಉಡುಪಿ ತಾಲೂಕಿನ ಹಿಲಿಯಾಣ ಗ್ರಾಮದ ಹೈಕಾಡಿ ಎಂಬಲ್ಲಿ ಹೈಕಾಡಿ ಪ್ರೆಂಡ್ಸ ರಿಕ್ರೇಷಿಯನ್ ಕ್ಲಬ್ ಎಂಬ ಹೆಸರಿನ ಕಟ್ಟಡದ ಒಳಗೆ ಅಂದರ್- ಬಾಹರ ಎಂಬ ಹೆಸರಿನ ಇಸ್ಪೀಟ್ ಜುಗಾರಿ ಆಟ ಆಡುತ್ತಿದ್ದವರನ್ನು ಪಿ. ಕೃಷ್ಣ ಕಾಂತ ಎ.ಎಸ್.ಪಿ ಕಾರ್ಕಳ ಉಪ ವಿಭಾಗ ಉಡುಪಿ ಜಿಲ್ಲೆ ಇವರು ದಾಳಿ ನೆಡಸಿ ವಶಕ್ಕೆ ಪಡೆದಿರುತ್ತಾರೆ, ಹಾಗೂ ರೂಪಾಯಿ 12,23,070/- ಮತ್ತು 12 ಕಾರುಗಳು, ಮೊಬೈಲ್-1, ಟೇಬಲ್-2, ಹಾಗೂ ಕಾರ್ಡಗಳನ್ನು ವಶಕ್ಕೆ ಪಡೆದುಕೊಂಡಿರುವುದಾಗಿದೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 46/2019 ಕಲಂ:79,80 ಕೆ.ಪಿ.ಆಕ್ಟ್ ರಂತೆ ಪ್ರಕರಣ ದಾಖಲಾಗಿರುತ್ತದೆ.
ಹಿಲಿಯಾಣ ಗ್ರಾಮದ ಹೈಕಾಡಿ ಎಂಬಲ್ಲಿ ಹೈಕಾಡಿ ಪ್ರೆಂಡ್ಸ ರಿಕ್ರೇಷಿಯನ್ ಕ್ಲಬ್ ಎಂಬ ಹೆಸರಿನ ಕಟ್ಟಡದ ಒಳಗೆ ಅಂದರ್- ಬಾಹರ್ ಎಂಬ ಹೆಸರಿನ ಇಸ್ಪೀಟ್ ಜುಗಾರಿ ಆಟ ಆಡುತ್ತಿದ್ದು ಖಚಿತ ಮಾಹಿತಿ ಪಡೆದ ಪಿ. ಕೃಷ್ಣ ಕಾಂತ ಎ.ಎಸ್.ಪಿ ಕಾರ್ಕಳ ಉಪ ವಿಭಾಗ ಉಡುಪಿ ಜಿಲ್ಲೆ ಅವರು ಸರ್ಚ್ ವಾರಂಟ್ನೊಂದಿಗೆ ಶುಕ್ರವಾರ ಸಂಜೆ ದಾಳಿ ನಡೆಸಿ 20 ಮಂದಿಯನ್ನು ವಶಕ್ಕೆ ಪಡೆದಿದ್ದಲ್ಲದೆ ಬಂಧಿತರಿಂದ ರೂಪಾಯಿ 12,23,070/- ಮತ್ತು 12 ಕಾರುಗಳು, ಮೊಬೈಲ್-1, ಟೇಬಲ್-2, ಹಾಗೂ ಕಾರ್ಡಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಶಂಕರನಾರಾಯಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.