ಕುಂದಾಪುರ: ಆಶಾ ಕಾರ್ಯಕರ್ತೆಗೆ ಕರ್ತವ್ಯಕ್ಕೆ ಅಡ್ಡಿ; ಇಬ್ಬರ ಬಂಧನ

Spread the love

ಕುಂದಾಪುರ: ಆಶಾ ಕಾರ್ಯಕರ್ತೆಗೆ ಕರ್ತವ್ಯಕ್ಕೆ ಅಡ್ಡಿ; ಇಬ್ಬರ ಬಂಧನ

ಕುಂದಾಪುರ: ಕೊರೊನಾ ವೈರಸ್ ಸೋಂಕು ನಿಯಂತ್ರಣಕ್ಕೆ ಸಂಬಂಧಿಸಿದಂತೆ ಮನೆ ಮನೆ ಭೇಟಿಯಲ್ಲಿದ್ದ ಆಶಾ ಕಾರ್ಯಕರ್ತೆಯೊಬ್ಬರ ಕರ್ತವ್ಯಕ್ಕೆ ಅಡ್ಡಿಪಡಿಸಿ, ಬೆದರಿಕೆ ಹಾಕಿದ ಆರೋಪದ ಮೇಲೆ ಇಬ್ಬರನ್ನು ಕುಂದಾಪುರ ನಗರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ಮದ್ದುಗುಡ್ಡೆ ವಾಸಿ ಸಂದೀಪ ಮೇಸ್ತ ಯಾನೆ ವಿಕ್ಕಿ ಮೇಸ್ತ ಮತ್ತು ಕುಂದಾಪುರದ ಖಾರ್ವಿಕೇರಿ ನಿವಾಸಿ ಮಹೇಶ್ ಖಾರ್ವಿ ಎಂದು ಗುರುತಿಸಲಾಗಿದೆ.

ಸಂದೀಪ ಮೇಸ್ತ ಕ್ವಾರಂಟೈನ್ ವೇಳೆ ಮನೆಯಲ್ಲಿರದೇ ಊರಿನಲ್ಲಿ ತಿರುಗುತ್ತಿರುವ ಬಗ್ಗೆ ದೂರಿನಂತೆ ಎ.21ರಂದು ಕಾಣಲು ಬಂದಾಗ ಆತ ಮದ್ದುಗುಡ್ಡೆ ಬೋಟ್ ಬಿಲ್ಡಿಂಗ್ ಬಳಿ ಕಾಣಸಿಕ್ಕಿದ್ದ. ಮನೆಯಲ್ಲಿ ಕುಳಿತಿರದೇ ಯಾಕೆ ತಿರುಗಾಡುತ್ತೀಯಾ ಎಂದ ಕೇಳಿದ್ದಕೆ, ನೀನು ಯಾರು ನನಗೆ ಹೇಳಲು. ನಾನು ಎಲ್ಲಿ ಬೇಕಿದ್ದರೂ ತಿರುಗುತ್ತೇನೆ ಎಂದು ಗದರಿಸಿದ್ದ ಎಂದು ಲಕ್ಷ್ಮೀ ದೂರಿನಲ್ಲಿ ತಿಳಿಸಿದ್ದ.

ಎ.24ರಂದು ಬೆಳಗ್ಗೆ 11:30ಕ್ಕೆ ತಾನು ಹೋದಾಗ ಸಂತೋಷ್ ಮಿಲ್ಲಿನ ಬಳಿ ಕಾಣಸಿಕ್ಕಿದ್ದ. ಸಂಜೆ 6ಗಂಟೆಗೆ ತಾನು ಕ್ಷೇತ್ರ ಕೆಲಸಕ್ಕೆ ಹೋಗಿ ದ್ದಾಗ, ಕುಂದಾಪುರದ ಖಾರ್ವಿಕೇರಿ ನಿವಾಸಿ ಮಹೇಶ್ ಖಾರ್ವಿ ಎಂಬವರೊಂದಿಗೆ ಮೋಟಾರು ಸೈಕಲ್‌ನಲ್ಲಿ ಬಂದ ಸಂದೀಪ್ ಮೇಸ್ತ, ತನಗೆ ಜೀವಬೆದರಿಕೆ ಒಡ್ಡಿ, ಕೈಯಲ್ಲಿದ್ದ ಸ್ಟಿಕ್ಕರ್‌ನ್ನು ಎಳೆದುಕೊಂಡು, ಸರಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ. ಈ ಮೂಲಕ ಆಪಾದಿತ ಕೊರೋನ ಬಗ್ಗೆ ಯಾವುದೇ ಮುಂಜಾಗ್ರತೆ ಹಾಗೂ ಸುರಕ್ಷತಾ ಕ್ರಮ ತೆಗೆದುಕೊಳ್ಳದೇ ನಿರ್ಲಕ್ಷ ವಹಿಸಿ ಜಿಲ್ಲಾಧಿಕಾರಿಗಳ ಆದೇಶವನ್ನು ಉಲ್ಲಂಘಿಸಿದ್ದಾರೆಂದು ಲಕ್ಷ್ಮೀ ದೂರಿನಲ್ಲಿ ತಿಳಿಸಿದ್ದಾರೆ.

ಲಕ್ಷ್ಮೀಯವರ ದೂರಿನಂತೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಕಲಂ: 341 353 354 506 269 270 188 ಜೊತೆಗೆ 34 ಐಪಿಸಿ ಕಲಂ 51 The Disaster Management Act ನಂತೆ ಪ್ರಕರಣ ದಾಖಲಾಗಿರುತ್ತದೆ.ಲಕ್ಷ್ಮೀಯವರ ದೂರನ್ನು ಸ್ವೀಕರಿಸಿ ಪ್ರಕರಣ ದಾಖಲಿಸಿದ ಪೊಲೀಸರು ಇಬ್ಬರು ಆರೋಪಿಗಳನ್ನು ಸೋಮವಾರ ಬಂಧಿಸಿದ್ದಾರೆ.


Spread the love
1 Comment
Inline Feedbacks
View all comments
ಗಣೇಶ್ ಕೆ
4 years ago

ಅರ್ಧ ಸುಳ್ಳು ಕಂಪ್ಲೇಂಟ್, ಪೂರ್ವನಿಯೋಜಿತ ಸಂಚಿಗೆ ಅಮಾಯಕ ಮಹೇಶ್ ಬಂಧನ. ತಲೆದಂಡವಾಗಲಿದೆ ನ್ಯಾಯಂಗ ಮೂಲಕ. ಲಕ್ಷ್ಮಿ ಹಿಂದೆ ಇರುವ ಕಾಣದ ಕೈ ಯಾವುದು? ತನುಖೆಯಾಗಲಿ