Home Mangalorean News Kannada News ಕುಂದಾಪುರ: ಕರ್ಫ್ಯೂ ಉಲ್ಲಂಘಿಸಿ ಪೊಲೀಸರೊಂದಿಗೆ ಉಡಾಫೆ ಮಾತನಾಡಿದ ಯುವಕನ ವಿರುದ್ದ ಪ್ರಕರಣ ದಾಖಲು

ಕುಂದಾಪುರ: ಕರ್ಫ್ಯೂ ಉಲ್ಲಂಘಿಸಿ ಪೊಲೀಸರೊಂದಿಗೆ ಉಡಾಫೆ ಮಾತನಾಡಿದ ಯುವಕನ ವಿರುದ್ದ ಪ್ರಕರಣ ದಾಖಲು

Spread the love

ಕುಂದಾಪುರ: ಕರ್ಫ್ಯೂ ಉಲ್ಲಂಘಿಸಿ ಪೊಲೀಸರೊಂದಿಗೆ ಉಡಾಫೆ ಮಾತನಾಡಿದ ಯುವಕನ ವಿರುದ್ದ ಪ್ರಕರಣ ದಾಖಲು

ಕುಂದಾಪುರ: ಕೊರೋನಾ ಮಹಾಮಾರಿ ನಿಯಂತ್ರಕ್ಕಾಗಿ ವಿಧಿಸಿರುವ ಕರ್ಫ್ಯೂವನ್ನು ಉಲ್ಲಂಘಿಸಿದ್ದಲ್ಲದೆ ಪೊಲೀಸರ ಮಾತಿಗೆ ನಿರ್ಲಕ್ಷ್ಯ ತೋರಿದ ಆರೋಪದ ಮೇಲೆ ಕುಂದಾಪುರದ ಎಂಜಿನಿಯರಿಂಗ್ ಪಧವೀಧರ ಯುವಕನ ಮೇಲೆ ಕುಂದಾಪುರ ಠಾಣೆಯಲ್ಲಿ ಕೇಸು ದಾಖಲಾಗಿದೆ.

ಕುಂದಾಪುರ ಉಪವಿಭಾಗಾಧಿಕಾರಿ ರಾಜು ಹಾಗೂ ಕುಂದಾಪುರ ಠಾಣಾಧಿಕಾರಿ ಹರೀಶ್ ನಾಯ್ಕ್ ನೇತೃತ್ವದ ತಂಡ ಕುಂದಾಪುರದ ಚೆಕ್ ಪೋಸ್ಟಿನಲ್ಲಿ ವಾಹನ ತಪಾಸಣೆ ನಡೆಸುತ್ತಿರುವ ವೇಳೆ ಬೈಕಿನಲ್ಲಿ ಬಂದ ಉಪ್ಪಿನಕುದ್ರು ನಿವಾಸಿ ವಿಶ್ವನಾಥ್ (23) ಪೊಲೀಸರು ಕೊಟ್ಟ ಎಚ್ಚರಿಕೆಗೆ ಕ್ಯಾರೆ ಅನ್ನದೆ ಅವರೊಂದಿಗೆ ವಾಗ್ವದ ನಡೆಸಿದ್ದಾನೆ.

ಕುಂದಾಪುರ ನಗರ ಠಾಣಾಧಿಕಾರಿ ಹರೀಶ್ ಆರ್ ಅವರು ಪೊಲೀಸ್ ಠಾಣೆ ಸಿಬ್ಬಂದಿಯವರೊಂದಿಗೆ ಕೋವಿಡ್ -19 ಕೊರೋನಾ ವೈರಸ್ ಸಾಕ್ರಾಮಿಕ ರೋಗ ಹರಡುವ ಬೀತಿಯ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಸಾರ್ವಜನಿಕರ ಅನಗತ್ಯ ಸಂಚಾರವನ್ನು ನಿರ್ಭಂದಿಸುವ ನಿಟ್ಟಿನಲ್ಲಿ ಬೆಳಿಗ್ಗಿನಿಂದಲೇ ರೌಂಡ್ಸ್ ಕರ್ತವ್ಯ ನಡೆಸುತ್ತಿದ್ದರು.

ಬೆಳಿಗ್ಗೆ 11:00 ಗಂಟೆ ಸಮಯಕ್ಕೆ ಕುಂದಾಪುರ ಶಾಸ್ತ್ರಿ ವೃತ್ತದ ಬಳಿ ಇರುವಾಗ ಅಲ್ಲಿ ಕುಂದಾಪುರ ಸಂಚಾರ ಪೊಲೀಸ್ ಠಾಣೆಯ ಸಿಬ್ಬಂದಿಯವರು ರಸ್ತೆಗೆ ಬ್ಯಾರಿಕೇಡ್ಗಳನ್ನು ಇಟ್ಟು ಕರ್ತವ್ಯದಲ್ಲಿದ್ದು ಆ ಸಮಯ ಪಾರಿಜಾತ ವೃತ್ತದ ಕಡೆಯಿಂದ ಶಾಸ್ತ್ರಿ ವೃತ್ತದ ಕಡೆಗೆ ಉಪ್ಪಿನಕುದ್ರು ನಿವಾಸಿ ವಿಶ್ವನಾಥ (23) ಎಂಬ ಯುವಕ KA-20-ER-9270 ನೇ ಮೋಟಾರು ಸೈಕಲ್ನಲ್ಲಿ ಬಂದಿದ್ದು ಆತನನ್ನು ವಿಚಾರಿಸಿದ್ದು, ಆತನು ಮೆಡಿಕಲ್ ಗೆ ಬಂದಿದ್ದಾಗಿ ತಿಳಿಸಿದ್ದು, ಆತನಲ್ಲಿ ಮಾಸ್ಕ್ ಹಾಕುವಂತೆ ತಿಳಿಸಿದ್ದು, ಆತನು ತನ್ನಲ್ಲಿ ಮಾಸ್ಕ್ ಇಲ್ಲ ಎಂದು ಹೇಳಿದ್ದು, ಆತನಿಗೆ ಮುಖಕ್ಕೆ ಕರವಸ್ತ್ರವನ್ನಾದರೂ ಕಟ್ಟಿಕೊಳ್ಳುವಂತೆ ತಿಳಿಸಿದ್ದು, ಅದಕ್ಕೆ ಆತನು ಕರವಸ್ತ್ರ ಕಟ್ಡಿಕೊಳ್ಳುವುದಿಲ್ಲ. ನನಗೆ ರಜೆ ಕೊಟ್ಟಿದ್ದಾರೆ, ನಾನು ಎಲ್ಲಿ ಬೇಕಾದರೂ ತಿರುಗುತ್ತೇನೆ ನೀವು ನನ್ನನ್ನು ಕೇಳುವವರು ಯಾರು ಎಂದು ಉಡಾಫೆ ಉತ್ತರ ನೀಡಿರುತ್ತಾನೆ.

ಅಲ್ಲದೆ ಆತನಿಗೆ ಕೊರೊನಾ ಸಾಂಕ್ರಾಮಿಕ ರೋಗದ ಬಗ್ಗೆ ಮನವರಿಕೆ ಮಾಡಿದರೂ ಆತನು ಕೇಳದೇ ರೇಗಾಡಿ ಬಲಪ್ರಯೋಗಮಾಡಿ ಸಿಬ್ಬಂದಿಯವರನ್ನು ದೂಡಿ ಸರಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿರುತ್ತಾನೆ. ವ್ಯಕ್ತಿಯು ಕೋವಿಡ್ -19 ಕೊರೋನಾ ವೈರಸ್ ಎಂಬ ಸಾಂಕ್ರಾಮಿಕ ರೋಗಾಣು ಪ್ರಾಣಕ್ಕೆ ಅಪಾಯಕಾರಿಯಾದ ರೋಗದ ಸೋಂಕನ್ನು ಹರಡುವ ಸಂಭವವಿದ್ದು, ಅದನ್ನು ತಿಳಿದೂ ಆತನು ಯಾವುದೇ ಮುಂಜಾಗೃತಾ ಕ್ರಮವಾಗಿ ಯಾವುದೇ ಸುರಕ್ಷತೆಯನ್ನು ವಹಿಸದೇ ನಿರ್ಲಕ್ಷ್ಯ ವಹಿಸಿರುತ್ತಾನೆ. ಹಾಗೂ ಸಿಬ್ಬಂದಿಯವರಿಗೆ ಬಲಪ್ರಯೋಗಮಾಡಿ ದೂಡಿ ಸರಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿರುತ್ತಾನೆ ಎಂದು ದೂರಿನಲ್ಲಿ ದಾಖಲಿಸಲಾಗಿದೆ.

ಯುವಕನ ಮೇಲೆ ಕುಂದಾಪುರ ನಗರ ಠಾಣೆಯಲ್ಲಿ ಐಪಿಸಿ ಸೆಕ್ಷನ್ 269, 353 ಮೇಲೆ ಪ್ರಕರಣ ದಾಖಲು ಮಾಡಲಾಗಿದೆ.


Spread the love

Exit mobile version