ಕುಂದಾಫುರ: ಕೋಟ ಬಳಿ ರಾಷ್ಟ್ರೀಯ ಹೆದ್ದಾರಿ 17ರಲ್ಲಿ ಸಾಗುತ್ತಿದ್ದ ಬುಲೆಟ್ ಗ್ಯಾಸ್ ಟ್ಯಾಂಕರ್ ಪಲ್ಟಿಯಾದ ಘಟನೆ ಶುಕ್ರವಾರ ತಡರಾತ್ರಿ ಸಂಭವಿಸಿದೆ.
ಮಂಗಳೂರಿನಿಂದ ಮುಂಬೈಗೆ ಇಂಡೆನ್ ಕಂಪೆನಿಯ ಗ್ಯಾಸ್ ಕೊಂಡೊಯ್ಯುತ್ತಿದ್ದ ಬುಲೆಟ್ ಟ್ಯಾಂಕರ್ ಕೋಟ ಕಾರಂತ ಥೀಂ ಪಾರ್ಕ್ ರಸ್ತೆಯ ಬಳಿ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಇನ್ನೋಂದು ವಾಹನಕ್ಕೆ ಸೈಡ್ ನೀಡಲು ಹೋದ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದ್ದು, ಟ್ಯಾಂಕರಿನ ಡಿಸೇಲ್ ಟ್ಯಾಂಕ್ ಒಡೆದು ಡಿಸೇಲ್ ಸೋರಿಕೆಯಾಗಿದೆ. ಪಲ್ಟಿಯಾದ ರಭಸಕ್ಕೆ ಟ್ಯಾಂಕರಿನ ಕೆಲವೊಂದು ಭಾಗ ನಜ್ಜುಗುಜ್ಜಾಗಿದ್ದು ಗ್ಯಾಸ್ ಸೋರಿಕೆ ಉಂಟಾಗಬಹುದು ಎಂಬ ಆತಂಕ ಸೃಷ್ಟಿಯಾಗಿತ್ತು. ಘಟನಾ ಸ್ಥಳಕ್ಕೆ ತಕ್ಷಣ ಅಗ್ನಿಶಾಮಕ ದಳದ ಸಿಬ್ಬಂದಿ ಬಂದು ಸಂಭವಿಸಬಹುದಾದ ಭಾರಿ ನಷ್ಟವನ್ನು ತಪ್ಪಿಸಿದ್ದಾರೆ.
ರಾಷ್ಟ್ರೀಯ ಹೆದ್ದಾರಿಯಲ್ಲಿ ವೇಗವಾಗಿ ವಾಹನಗಳು ಯಾವುದೇ ಸೂಚನೆಗಳನ್ನು ಪಾಲಿಸದೆ ಚಲಾಯಿಸುತ್ತಿದ್ದು, ಅಲ್ಲಲ್ಲಿ ರಾಷ್ಟ್ರೀಯ ಹೆದ್ದಾರಿ ನಿರ್ಮಾಣದ ಕೆಲಸ ನಡೆಯುತ್ತಿದ್ದು ಇದನ್ನು ಗಮನಿಸದೆ ವಾಹನ ಚಾಲಕರು ಚಾಲನೆ ಮಾಡುತ್ತಿರುವುದರಿಂದ ಕಳೆದ ಕೆಲವು ದಿನಗಳಲ್ಲಿ ಈ ಭಾಗದಲ್ಲಿ ಹೆಚ್ಚು ಹೆಚ್ಚು ಅಫಘಾತಗಳು ಸಂಭವಿಸುತ್ತಿವೆ ಎಂದು ಸ್ಥಳಿಯರು ತಿಳಿಸದ್ದಾರೆ.