ಕುಂದಾಪುರ: ಗಾಂಜಾ ಸೇವನೆ ಆರೋಪ – ಇಬ್ಬರು ವಶಕ್ಕೆ
ಕುಂದಾಪುರ: ಗಾಂಜಾ ಸೇವನೆ ಆರೋಪದ ಮೇಲೆ ಕುಂದಾಪುರ ಪೊಲೀಸರು ಇಬ್ಬರು ವ್ಯಕ್ತಿಗಳನ್ನು ಕೊಟೇಶ್ವರ ಪೇಟೆ ಬಳಿ ಬಂಧಿಸಿದ್ದಾರೆ.
ಬಂಧಿತರನ್ನು ಕೊಟೇಶ್ವರ ಅಂಕದಕಟ್ಟೆ ನಿವಾಸಿ ಶರತ್ ಕುಮಾರ್ (24) ಮತ್ತು ಖಾರ್ವಿಕೆರಿ ನಿವಾಸಿ ಆದಿತ್ಯ (28) ಎಂದು ಗುರುತಿಸಲಾಗಿದೆ.
ಕುಂದಾಪುರ ಠಾಣಾಧಿಕಾರಿ ಹರೀಶ್ ಆರ್ ಅವರಿಗೆ ಕೊಟೇಶ್ವರ ಪೇಟೆ ಬಳಿ ಇಬ್ಬರು ವ್ಯಕ್ತಿಗಳು ಗಾಂಜಾ ಸೇವಿಸುತ್ತಿರುವುದಾಗಿ ದೊರೆತ ಮಾಹಿತಿಯಂತೆ ಸ್ಥಳಕ್ಕೆ ತೆರಳಿದ್ದು ಇಬ್ಬರನ್ನು ವಶಕ್ಕೆ ಪಡೆದಿದ್ದು, ವೈದ್ಯರ ಮುಂದೆ ಹಾಜರುಪಡಿಸಿದಾಗ ಅವರು ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿದೆ.
ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ NDPS Act ರಂತೆ ಪ್ರಕರಣ ದಾಖಲಾಗಿರುತ್ತದೆ.