Home Mangalorean News Kannada News ಕುಂದಾಪುರ ಪತ್ರಕರ್ತರ ಹೆಸರಿನಲ್ಲಿ ಉದ್ಯಮಿಗೆ ಹಣಕ್ಕಾಗಿ ಬೆದರಿಕೆ; ಮೂವರ ಬಂಧನ

ಕುಂದಾಪುರ ಪತ್ರಕರ್ತರ ಹೆಸರಿನಲ್ಲಿ ಉದ್ಯಮಿಗೆ ಹಣಕ್ಕಾಗಿ ಬೆದರಿಕೆ; ಮೂವರ ಬಂಧನ

Spread the love

ಕುಂದಾಪುರ ಪತ್ರಕರ್ತರ ಹೆಸರಿನಲ್ಲಿ ಉದ್ಯಮಿಗೆ ಹಣಕ್ಕಾಗಿ ಬೆದರಿಕೆ; ಮೂವರ ಬಂಧನ

ಕುಂದಾಪುರ: ಕೋಟೇಶ್ವರದ ಬೀಚ್ ರಸ್ತೆಯಲ್ಲಿ ಎಫ್ ಎಮ್ ಪ್ಲಾಸ್ಟಿಕ್ ಎಂಬ ವೇಸ್ಟ್ ಪ್ಲಾಸ್ಟಿಕ್ ಕಟ್ಟಿಂಗ್ ಮತ್ತು ಹೈಡ್ರೋಲಿಕ್ ಪ್ರೆಸ್ಸಿಂಗ್ ಯುನಿಟ್ ಫ್ಯಾಕ್ಟರಿಯಲ್ಲಿ ಅವ್ಯವಹಾರ ನಡೆಯುತ್ತಿದ್ದು ನಮಗೆ ಒಂದು ಲಕ್ಷ ನೀಡದಿದ್ದರೆ ಪತ್ರಿಕೆಯಲ್ಲಿ ಬರೆದು ಮಾನ ಹರಾಜು ಹಾಕುವುದಾಗಿ ಬೆದರಿಕೆ ಹಾಕಿರುವ ನಾಲ್ವರು ನಕಲಿ ಪತ್ರಕರ್ತರ ವಿರುದ್ದ ಕುಂದಾಪುರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಈ ಸಂಬಂಧ ಕುಂದಾಪುರ ಪೋಲಿಸರು ಮೂವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಬಂಧಿತರನ್ನು ಕುಂದಾಪುರದ ಲೋಕೇಶ್, ಧರ್ಮೇಂದ್ರ, ಮಂಜುನಾಥ್ ಎಂದು ಗುರುತಿಸಲಾಗಿದೆ.
ಎಫ್ ಎಮ್ ಪ್ಲಾಸ್ಟಿಕ್ ಎಂಬ ವೇಸ್ಟ್ ಪ್ಲಾಸ್ಟಿಕ್ ಕಟ್ಟಿಂಗ್ ಮತ್ತು ಹೈಡ್ರೋಲಿಕ್ ಪ್ರೆಸ್ಸಿಂಗ್ ಯುನಿಟ್ ಮ್ಹಾಲಕ ಫಾರೂಕ್ (42) ಎಂಬವರು ಎಪ್ರಿಲ್ 9 ಫ್ಯಾಕ್ಟರಿಯಲ್ಲಿರುವಾಗ ಕಾರಿನಲ್ಲಿಲ ಬಂದ ಕುಂದಾಪುರದ ಲೋಕೇಶ್, ಧರ್ಮೇಂದ್ರ, ಮಂಜುನಾಥ, ವಿಕ್ಕಿ ಯಾನೆ ವಿಕ್ರಮ ಎಂಬವರು ನಾವು ಮಾಧ್ಯಮದವರು, ನಾವು ರೈಡ್ ಮಾಡುವವರು, ನೀವು ಗ್ಲುಕೋಸ್ ಬಾಟಲಿಗಳನ್ನು ತೆಗೆದುಕೊಳ್ಳಬಾರದು ಎಂದು ಬೆದರಿಸಿ ನಮಗೆ ಒಂದು ಲಕ್ಷ ಕೊಡದಿದ್ದರೆ ನಿಮ್ಮ ವಿರುದ್ದ ಪತ್ರಿಕೆಯಲ್ಲಿ ಬರೆಯುತ್ತೇವೆ ಎಂದು ಬೆದರಿಸಿದರು. ಈ ವೇಳೆ ಫಾರೂಕ್ ಅವರಿಂದ 5000 ಹಣವನ್ನು ತೆಗೆದುಕೊಂಡು ಹೋಗಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಎಪ್ರಿಲ್ 12 ರಂದ ಮತ್ತೆ ಪುನಃ ಫ್ಯಾಕ್ಟರಿಗೆ ಬಂದ ಲೋಕೇಶ, ಧರ್ಮೇಂದ್ರ, ಮಂಜುನಾಥ ಅವರು ಫಾರೂಕ್ ಅವರಲ್ಲಿ 5000 ಹಣವನ್ನು ಕಸಿದುಕೊಂಡು ಹೋಗಿದ್ದಲ್ಲದೆ ಫ್ಯಾಕ್ಟರಿಯಲ್ಲಿ ಅವ್ಯವಹಾರ ನಡೆಯುತ್ತಿದೆ ಎಂದು ಪತ್ರಿಕೆಯಲ್ಲಿ ಹಾಕಿ ಮಾನ ಹರಾಜು ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಫಾರೂಕ್ ಅವರು ಕುಂದಾಪುರ ಠಾಣೆಗೆ ತಿಳಿಸಿದ್ದರು.

ಫಾರೂಕ್ ದೂರಿನಂತೆ ಪೋಲಿಸರು ಮೂರು ಮಂದಿಯನ್ನು ಬಂಧಿಸಿದ್ದಾರೆ.


Spread the love

Exit mobile version