ಕುಂದಾಪುರ: ಪ್ರೊ ಮೆಲ್ವಿನ್ ಡಿ’ಸೋಜಾರಿಗೆ ಡಾಕ್ಟರೇಟ್ ಪದವಿ

Spread the love

ಕುಂದಾಪುರ: ಪ್ರೊ ಮೆಲ್ವಿನ್ ಡಿ’ಸೋಜಾರಿಗೆ ಡಾಕ್ಟರೇಟ್ ಪದವಿ

ಕುಂದಾಪುರ: ಮೂಡ್ಲಕಟ್ಟೆ ತಾಂತ್ರಿಕ ಮಹಾವಿದ್ಯಾಲಯದ ಉಪ ಪ್ರಾಂಶುಪಾಲರಾದ ಪ್ರೊ ಮೆಲ್ವಿನ್ ಡಿ’ಸೋಜ ರವರು ಬರೆದು ಮಂಡಿಸಿದ “ಡೀಪ್ ಲರ್ನಿಂಗ್ ಆಧಾರಿತ ವಿಧಾನದಿಂದ, ಥರ್ಮಲ್ ಚಿತ್ರಗಳನ್ನು ಬಳಸಿ ಆರಂಭಿಕ ಸ್ತನ ಕ್ಯಾನ್ಸರ್ ಪತ್ತೆ ಹಚ್ಚುವಿಕೆ” ಎಂಬ ಶೀರ್ಷಿಕೆಯ ಮಹಾ ಪ್ರಭಂದಕ್ಕೆ ಬೆಳಗಾವಿ ವಿಶ್ವೇಶ್ವರಯ್ಯತಾಂತ್ರಿಕ ವಿಶ್ವವಿದ್ಯಾಲಯ ವು ಡಾಕ್ಟರೇಟ್ ಪದವಿ ನೀಡಿದೆ.

ಡಾ ಮೆಲ್ವಿನ್ ರ ಸಂಶೋಧನೆಯು ಆಧುನಿಕ ಕೃತಕ ಬುದ್ದಿಮತ್ತೆ ತಂತ್ರಜ್ಞಾನದಿಂದ ಆರಂಭಿಕ ಹಂತದಲ್ಲೇ ಸ್ಥನ ಕ್ಯಾನ್ಸರ್ ಪತ್ತೆ ಹಚ್ಚುವ ಸಂಶೋಧನ ವರದಿಯಾಗಿದ್ದು, ಈ ಸಂಶೋಧನೆಯ ಫಲಿತಾಂಶ ಗಳನ್ನು ಬರೆದು ಸಿದ್ದಪಡಿಸಿದ ವರದಿಗಳು ಅಂತಾರಾಷ್ಟ್ರೀಯ ಪ್ರತಿಷ್ಟಿತ ಸಂಶೋಧನ ಪತ್ರಿಕೆಗಳಲ್ಲಿ ಪ್ರಕಟವಾಗಿರುತ್ತದೆ.
ಇವರು ಖ್ಯಾತ ಸೈಬರ್ ಭದ್ರತಾ ತಜ್ಞ ಮತ್ತು ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜಿನ ಕಂಪ್ಯೂಟರ್ ಸೈನ್ಸ್ ವಿಭಾಗದ ಪ್ರೊಫೆಸರ್ ಡಾ ಅನಂತ್ ಪ್ರಭು ಜಿ ಅವರ ಮಾರ್ಗದರ್ಶನದಲ್ಲಿ ಸಂಶೋಧನ ಕಾರ್ಯಗಳನ್ನ ಮಾಡಿರುತ್ತಾರೆ.

ಡಾ ಮೆಲ್ವಿನ್ ಡಿ ಸೋಜ ರವರು ಕುಂದಾಪುರದ ಬಸ್ರೂರು ಗ್ರಾಮದ ಮೇರ್ಡಿ ಯವರಗಿದ್ದು, ದಿವಂಗತ ಪೀಟರ್ ಡಿ ಸೋಜಾ ಮತ್ತು ಸ್ಟೆಲ್ಲಾ ಡಿಸೋಜಾ ಇವರ ಕಿರಿಯ ಪುತ್ರರಾಗಿರುತ್ತಾರೆ. ಇವರ ಈ ಸಾಧನೆಗೆ ಐ ಎಂ ಜೆ ವಿದ್ಯಾ ಸಂಸ್ಥೆಗಳ ಅಧ್ಯಕ್ಷ ಸಿದ್ದಾರ್ಥ್ ಜೆ ಶೆಟ್ಟಿ ಮತ್ತು ಮೂಡ್ಲಕಟ್ಟೆ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ ಅಬ್ದುಲ್ ಕರೀಮ್ ರವರು ಅಭಿನಂದನೆ ಸಲ್ಲಿಸಿ ಶುಭ ಹಾರೈಸಿದ್ದಾರೆ.


Spread the love
Subscribe
Notify of

0 Comments
Inline Feedbacks
View all comments