ಕುಂದಾಪುರ: ಬೊಲೆರೋ ವಾಹನದಲ್ಲಿ ಅಕ್ರಮ ಗೋಸಾಗಾಟ – ಗೋಕಳ್ಳರು ಎಸ್ಕೇಪ್, ದನಗಳ ರಕ್ಷಣೆ
ಕುಂದಾಪುರ: ಬೊಲೆರೋ ವಾಹನದಲ್ಲಿ ಹಿಂಸಾತ್ಮಕವಾಗಿ ಅಕ್ರಮವಾಗಿ ಗೋ ಸಾಗಾಟ ಮಾಡುತ್ತಿದ್ದ ವೇಳೆ ಕುಂದಾಪುರ ಗ್ರಾಮಾಂತ ಪೊಲೀಸರು ತಡೆದಿದ್ದು ಗೋಕಳ್ಳರು ಪರಾರಿಯಾಗಿದ್ದು ವಾಹನವನ್ನು ವಶಕ್ಕೆ ಪಡೆದ ಘಟನೆ ಮಂಗಳವಾರ ನಡೆದಿದೆ.
ಕಾರ್ಯಾಚರಣೆಯ ವೇಳೆ ಬೊಲೋರೊದಲ್ಲಿದ್ದ ಆರೋಪಿಗಳಾದ ಸಮೀರ್ ಕಂಡ್ಲೂರು, ಮುತಾಯಬ್ ಮತ್ತು ರಿದಾನ್ ಪರಾರಿಯಾಗಿದ್ದಾರೆ.
ರವೀಶ ಹೊಳ್ಳ ಸಹಾಯಕ ಪೊಲೀಸ್ ಉಪ –ನಿರೀಕ್ಷಕರು ಕುಂದಾಪುರ ಗ್ರಾಮಾಂತರ ಠಾಣೆ ರಾತ್ರಿ ರೌಂಡ್ಸ್ ಕರ್ತವ್ಯದಲ್ಲಿ ಇರುವಾಗ ಬೆಳಿಗ್ಗೆ 05-30 ಗಂಟೆಗೆ ಧೂಪದಕಟ್ಟೆ ಕಡೆಯಿಂದ ಒಳರಸ್ತೆಯಲ್ಲಿ ಒಂದು ದ್ವಿಚಕ್ರ ವಾಹನ ಹಾಗೂ ಅದರ ಹಿಂಬದಿ ಒಂದು ಕಪ್ಪು ಬೊಲೆರೊ ವಾಹನವನ್ನು ಅದರ ಚಾಲಕನು ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದಿದ್ದು, ವಾಹನಗಳನ್ನು ನಿಲ್ಲಿಸಲು ಸೂಚನೆ ನೀಡಿದ್ದರು
ದ್ವಿಚಕ್ರ ವಾಹನ ಚಾಲಕನು ವಾಹನ ನಿಲ್ಲಿಸದೆ ಮುಂದಕ್ಕೆ ಹೋಗಿದ್ದು, ನೋಡುವಾಗ ಈತನು ಕಂಡ್ಲೂರಿನ ರಿದಾನ್ ಆಗಿದ್ದು . ಅದರ ಹಿಂಬದಿ ಬರುತ್ತಿದ್ದ ಬೊಲೆರೊ ಚಾಲಕ ಕಂಡ್ಲೂರಿನ ಸಮೀರ್ ಇನ್ನೋರ್ವ ಮುತಾಯಿಬ್ ಪರಾರಿಯಾಗಿದ್ದಾರೆ.
ಆರೋಪಿಗಳು ಬೊಲೆರೋದ ಒಳಗೆ ನೋಡುವಾಗ ಇದರ ಹಿಂಬದಿ ಸೀಟ್ ತೆಗೆದು ಅದರಲ್ಲಿ 3 ಗಂಡು ಕರುಕರುಗಳನ್ನು ಹಿಂಸಾತ್ಮಕವಾಗಿ ಕಾಲುಗಳನ್ನು ಕಟ್ಟಿ ತುಂಬಿ ಸಾಗಾಟ ಮಾಡುತ್ತಿರುವುದು ಕಂಡುಬಂದಿದೆ. ಈ ಜಾನುವಾರುಗಳನ್ನು ಆರೋಪಿಗಳು ಎಲ್ಲಿಂದಲೋ ಕಳವು ಮಾಡಿ ಯಾವುದೇ ಪರವಾನಿಗೆ ಇಲ್ಲದೆ ವಧೆ ಮಾಡಿ ಮಾಂಸ ಮಾಡುವ ಉದ್ದೇಶದಿಂದ ಸಾಗಾಟ ಮಾಡುತ್ತಿರುವುದು ಕಂಡು ಬಂದಿದ್ದು, ಆಪಾದಿತರ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಂಡಿರುವುದಾಗಿದೆ.
ಕುಂದಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.