Home Mangalorean News Kannada News ಕುಂದಾಪುರ: ಮೂಡ್ಲಕಟ್ಟೆ ತಾಂತ್ರಿಕ ಮಹಾವಿದ್ಯಾಲಯಕ್ಕೆ ಐಎಸ್ಒ 9001:2008 ಮಾನ್ಯತೆ

ಕುಂದಾಪುರ: ಮೂಡ್ಲಕಟ್ಟೆ ತಾಂತ್ರಿಕ ಮಹಾವಿದ್ಯಾಲಯಕ್ಕೆ ಐಎಸ್ಒ 9001:2008 ಮಾನ್ಯತೆ

Spread the love

ಕುಂದಾಪುರ: ತಾಂತ್ರಿಕ ವಿದ್ಯಾಭ್ಯಾಸದಲ್ಲಿ ಗುಣಮಟ್ಟವನ್ನು ಕಾಯ್ದುಕೊಂಡು ಬಂದಿರುವ ಮೂಡ್ಲಕಟ್ಟೆ ತಾಂತ್ರಿಕ ಮಹಾವಿದ್ಯಾಲಯಕ್ಕೆ ಐಎಸ್ಒ 9001:2008 ಮಾನ್ಯತೆ ಲಭಿಸಿದೆ.

MIT

ತಾಂತ್ರಿಕ ವಿದ್ಯಾಭ್ಯಾಸದ ಗುಣಮಟ್ಟವನ್ನು ಮೂಡ್ಲಕಟ್ಟೆ ತಾಂತ್ರಿಕ ವಿದ್ಯಾಲಯವು ಹತ್ತು ವರ್ಷಗಳಿಂದ ಕಾಯ್ದುಕೊಂಡು ಬಂದಿದ್ದು,  ಬ್ಯೂರೊ ವೆರಿಟಾಸ್ ವಿದ್ಯಾಭ್ಯಾಸದ ಗುಣಮಟ್ಟವನ್ನು ಪರಿಶೋಧನೆ ನಡೆಸಿದ ಬಳಿಕ ಪ್ರಮಾಣೀಕರಿಸಿ, ಮೂಡ್ಲಕಟ್ಟೆ ತಾಂತ್ರಿಕ ವಿದ್ಯಾಲಯಕ್ಕೆ ಐಎಸ್ಒ 9001:2008 ಮಾನ್ಯತೆಯನ್ನು ಕೊಟ್ಟಿರುತ್ತದೆ.

ವಿಶ್ವೇಶ್ವರಯ್ಯ ತಾಂತ್ರಿಕ ಮಹಾವಿದ್ಯಾಲಯದ ಅಡಿಯಲ್ಲಿ ಐಎಸ್ಒ 9001:2008 ಮಾನ್ಯತೆಯನ್ನು ಪಡೆದಿರುವ ಕೆಲವೇ ಕಾಲೇಜುಗಳ ಪೈಕಿ ಈ ಕಾಲೇಜು ಸಹ ಒಂದಾಗಿದೆ.


Spread the love

Exit mobile version