ಕುಂದಾಪುರ: ರಾಜ್ಯ ಸರಕಾರದ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ
ಕುಂದಾಪುರ: ಭೂ ಸುಧಾರಣಾ ಕಾಯ್ದೆ ತಿದ್ದುಪಡಿ, ಎ.ಪಿ.ಎಂ.ಸಿ .ಕಾಯ್ದೆ ತಿದ್ದುಪಡಿ, ಕಾರ್ಮಿಕ ಕಾಯ್ದೆ ತಿದ್ದುಪಡಿ, ಕೊರೊನಾ ಸಾಮಗ್ರಿಗಳ ಖರೀದಿಯಲ್ಲಿ ಭ್ರಷ್ಟಾಚಾರ, ಅತಿವೃಷ್ಟಿ ನಿರ್ವಹಣೆಯಲ್ಲಿ ಸರಕಾರದ ವೈಫಲ್ಯ ಖಂಡಿಸಿ ಬ್ಲಾಕ್ ಕಾಂಗ್ರೆಸ್ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಸಿ ಸಹಾಯಕ ಆಯುಕ್ತರ ಮೂಲಕ ರಾಜ್ಯಪಾಲರಿಗೆ ಮನವಿ ಅರ್ಪಿಸಲಾಯಿತು.
ಕಾಂಗ್ರೆಸ್ ಮುಖಂಡ ಮಲ್ಯಾಡಿ ಶಿವರಾಮ ಶೆಟ್ಟಿ , ರಾಜ್ಯ ಸರಕಾರ ಪ್ರತಿಯೊಂದು ವಿಚಾರದಲ್ಲೂ ಹಣ ಮಾಡುವ ದಂಧೆ, ಹಗರಣದಲ್ಲಿ ತೊಡಗಿಸಿಕೊಂಡಿದೆ. ಜನರ ಸಮಸ್ಯೆಗೆ ಸ್ಪಂದಿಸುವವರೇ ಇಲ್ಲ. ಕಾಂಗ್ರೆಸ್ ಸರಕಾರ ತಂದ ಜನಪರ ಕಾಯ್ದೆಗಳಿಗೆ ತಿದ್ದುಪಡಿ ಮಾಡಿ ಸಿರಿವಂತರ ಪಾಲಿಗೆ ಲಾಭದಾಯಕವಾಗಿಸುವ ಕೆಲಸಗಳು ರಾಜ್ಯ ಬಿಜೆಪಿ ಸರಕಾರದಿಂದ ನಡೆಯುತ್ತಿದೆ. ಈ ಮೂಲಕ ಬಡವರನ್ನು ಕಡೆಗಣಿಸಿ ಇನ್ನಷ್ಟು ಬಡವರಾಗಿಸಲಾಗುತ್ತಿದೆ ಎಂದು ಹೇಳಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿ ಕಾನ್ಮಕ್ಕಿ, ನಗರಾಭಿವೃದ್ಧಿ ಪ್ರಾಧಿಕಾರ ಮಾಜಿ ಅಧ್ಯಕ್ಷ ವಿಕಾಸ್ ಹೆಗ್ಡೆ ಮಾತನಾಡಿದರು.
ಪ್ರತಿಭಟನೆಯಲ್ಲಿ ಮಹಿಳಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ಜ್ಯೋತಿ ಪುತ್ರನ್, ಕೆಪಿಸಿಸಿ ಐಟಿ ಸೆಲ್ ರಾಜ್ಯ ಕಾರ್ಯದರ್ಶಿ ಚಂದ್ರಶೇಖರ ಶೆಟ್ಟಿ, ನಗರ ಕಾಂಗ್ರೆಸ್ ಅಧ್ಯಕ್ಷ ಗಣೇಶ್ ಶೇರಿಗಾರ್, ಬ್ಲಾಕ್ ಉಪಾಧ್ಯಕ್ಷ ಅಶೋಕ್ ಪೂಜಾರಿ, ಪುರಸಭೆ ಸದಸ್ಯೆ ಪ್ರಭಾವತಿ ಶೆಟ್ಟಿ, ಡಿಜಿಟಲ್ ಯೂತ್ ಅಧ್ಯಕ್ಷ ರೋಶನ್ ಶೆಟ್ಟಿ, ಸೇವಾದಳ ಅಧ್ಯಕ್ಷ ಕುಮಾರ್ ಖಾರ್ವಿ, ಇಂಟಕ್ ಅಧ್ಯಕ್ಷ ಚಂದ್ರ ಅಮೀನ್, ಆರ್ಪಿಜಿಎಸ್ ಸಂಚಾಲಕ ಸತೀಶ್ ಜಪ್ತಿ, ಜಿಲ್ಲಾ ಯುವ ಕಾಂಗ್ರೆಸ್ ಕಾರ್ಯದರ್ಶಿ ರಮೇಶ್ ಶೆಟ್ಟಿ, ಮಾಜಿ ನಾಮನಿರ್ದೇಶಿತ ಸದಸ್ಯ ಶಿವರಾಮ ಪುತ್ರನ್, ಕೇಶವ ಭಟ್, ಶಶಿರಾಜ್, ಶೋಭಾ ಸಚ್ಚಿದಾನಂದ, ಅಣ್ಣಯ್ಯ ಪುತ್ರನ್, ಶಶಿರಾಜ್, ಶಿಶಿರ, ಕೆ. ಸುರೇಶ್, ದಿನೇಶ್, ವಿಠಲ ಕಾಂಚನ್, ಜ್ಯೋತಿ ಟಿ. ನಾಯ್ಕ, ಸ್ಟೀವನ್ ಡಿ’ಕೋಸ್ಟ, ಸದಾನಂದ ರಾವ್, ಅಶೋಕ್ ಸುವರ್ಣ, ಗಣಪತಿ ಶೇಟ್, ಶ್ರೀನಿವಾಸ ಶೆಟ್ಟಿ, ಸದಾನಂದ ಖಾರ್ವಿ, ವಿಜಯಧರ ಕೆ.ವಿ. ಉಪಸ್ಥಿತರಿದ್ದರು.
ಪ್ರಧಾನ ಕಾರ್ಯದರ್ಶಿ ವಿನೋದ್ ಕ್ರಾಸ್ಟೊ ನಿರ್ವಹಿಸಿ, ಕೋಶಾಧಿಕಾರಿ ನಾರಾಯಣ ಆಚಾರ್ ವಂದಿಸಿದರು.