Home Mangalorean News Kannada News ಕುಂದಾಪುರ ವಾರದ ಸಂತೆ ತಾತ್ಕಾಲಿಕವಾಗಿ ಕಾಳಾವರ ವರದರಾಜ ಶೆಟ್ಟಿ ಕಾಲೇಜು ಮೈದಾನಕ್ಕೆ ಸ್ಥಳಾಂತರ

ಕುಂದಾಪುರ ವಾರದ ಸಂತೆ ತಾತ್ಕಾಲಿಕವಾಗಿ ಕಾಳಾವರ ವರದರಾಜ ಶೆಟ್ಟಿ ಕಾಲೇಜು ಮೈದಾನಕ್ಕೆ ಸ್ಥಳಾಂತರ

Spread the love
RedditLinkedinYoutubeEmailFacebook MessengerTelegramWhatsapp

ಕುಂದಾಪುರ ವಾರದ ಸಂತೆ ತಾತ್ಕಾಲಿಕವಾಗಿ ಕಾಳಾವರ ವರದರಾಜ ಶೆಟ್ಟಿ ಕಾಲೇಜು ಮೈದಾನಕ್ಕೆ ಸ್ಥಳಾಂತರ

ಕುಂದಾಪುರ: ನಾಳೆ ಎಪಿಎಂಸಿ ಯಾರ್ಡ್ ಕುಂದಾಪುರದಲ್ಲಿ ನಡೆಯಬೇಕಿದ್ದ ಕುಂದಾಪುರದ ವಾರದ ಸಂತೆಯನ್ನು ತಾತ್ಕಾಲಿಕವಾಗಿ ಕಾಳಾವರ ವರದರಾಜ ಶೆಟ್ಟಿ ಕಾಲೇಜು ಮೈದಾನ ಕೋಟೇಶ್ವರದಲ್ಲಿ ನಡೆಯಲಿದೆ.

ಕಾಳಾವಾರ ವರದರಾಜ ಶೆಟ್ಟಿ ಕಾಲೇಜು ಮೈದಾನದಲ್ಲಿ ಕೇವಲ 10 ಕೆಜಿ ಗಿಂತ ಮೇಲ್ಪಟ್ಟು ತರಕಾರಿಗಳನ್ನು ಖರೀದಿ ಮಾಡುವಂತಹ ಹೋಲ್ಸೇಲ್ ಗ್ರಾಹಕರಿಗೆ ಮಾತ್ರ ಅವಕಾಶ ಮಾಡಿಕೊಡಲಾಗಿದೆ. ಸಂತೆಯ ಅವಧಿಯಲ್ಲಿ ಯಾವುದೇ ಬದಲಾವಣೆಗಳಿಲ್ಲ. ಬೆಳಗ್ಗೆ 5 ಗಂಟೆಯಿಂದ 11 ಗಂಟೆಯವರೆಗೆ ಸಂತೆ ನಡೆಯಲಿದೆ ಹಾಗೂ ಯಾವುದೇ ಚಿಲ್ಲರೆ ವ್ಯಾಪಾರ ಮಾಡುವವರಿಗೆ ಒಳಗೆ ಬಾರದಂತೆ ನಿರ್ಬಂಧಿಸಲಾಗಿದೆ.

ಕಳೆದ ವಾರ ಕುಂದಾಪುರ ಎಪಿಎಂಸಿ ಆವರಣದಲ್ಲಿ ಹೋಲ್ಸೆಲ್ ಖರೀದಿಗೆ ಅವಕಾಶ ಮಾಡಿಕೊಡಲಾಗಿತ್ತು. ಆದರೆ ಅಲ್ಲಿ ಸರಿಯಾದ ಆವರಣಗೋಡೆ ಇಲ್ಲವಾದ್ದರಿಂದ ಎಲ್ಲಾ‌ ಕಡೆಗಳಿಂದಲೂ ಜನರು ನುಗ್ಗಿದ ಪರಿಣಾಮ ಸಾಮಾಜಿಕ‌ ಅಂತರ ಕಾಯ್ದುಕೊಂಡಿರಲಿಲ್ಲ. ಹೀಗಾಗಿ ಕುಂದಾಪುರದ ವಾರದ ಸಂತೆಯನ್ನು ಸ್ಥಳಾಂತರಿಸಲಾಗಿದೆ.


Spread the love
RedditLinkedinYoutubeEmailFacebook MessengerTelegramWhatsapp

Exit mobile version