Home Mangalorean News Kannada News ಕುಂದಾಪುರ: ವಿವಾಹಿತ ಯುವಕ ನೇಣು ಬಿಗಿದು ಆತ್ಮಹತ್ಯೆ

ಕುಂದಾಪುರ: ವಿವಾಹಿತ ಯುವಕ ನೇಣು ಬಿಗಿದು ಆತ್ಮಹತ್ಯೆ

Spread the love

ಕುಂದಾಪುರ: ವಿವಾಹಿತ ಯುವಕ ನೇಣು ಬಿಗಿದು ಆತ್ಮಹತ್ಯೆ

ಕುಂದಾಪುರ: ನೂತನವಾಗಿ ಪ್ರಾರಂಭಗೊಂಡಿದ್ದ ಸ್ಥಳೀಯ ವ್ಯಕ್ತಿಯೊಬ್ಬರ ಮೀನಿನಂಗಡಿಯ ಮೇಲ್ಮಾಡಿನ ಕಬ್ಬಿಣದ ಪೈಪಿಗೆ ನೇಣು ಬಿಗಿದು ವಿವಾಹಿತ ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಭಾನುವಾರ ಬೆಳಿಗ್ಗೆ ವರದಿಯಾಗಿದೆ.

ಮೂಲತಃ ಸಾಗರದವನಾದ ಸುಬ್ರಹ್ಮಣ್ಯ ಪೂಜಾರಿ(36) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಇವರು ದೇವಲ್ಕುಂದ ತಟ್ಟೆಗೊಡ್ಲು ಎಂಬಲ್ಲಿನ ತನ್ನ ಪತ್ನಿಯ ನಿವಾಸದಲ್ಲಿ ವಾಸವಿದ್ದರು.

ಸುಬ್ರಮಣ್ಯ ಪೂಜಾರಿ ದೇವಲ್ಕುಂದ ಮೂಲದ ಯುವತಿಯನ್ನು ವಿವಾಹವಾದ ಬಳಿಕ ಇಲ್ಲಿಯೇ ಬದುಕನ್ನು ಕಟ್ಟಿಕೊಂಡಿದ್ದರು.ಚಾಲಕ ವೃತ್ತಿ, ಇಲೆಕ್ಟ್ರೀಶಿಯನ್ ಸೇರಿ ಕೂಲಿ ಕಾರ್ಯಗಳನ್ನು ಮಾಡಿಕೊಂಡಿದ್ದು ವಿಪರೀತ ಕುಡಿತದ ಚಟ ಮೈಗೂಡಿಸಿಕೊಂಡಿದ್ದರು. ಕುಡಿದು ಮನೆಯಲ್ಲಿ ಆಗ್ಗಾಗ್ಗೆ ತಗಾದೆ ತೆಗೆಯುತ್ತಿದ್ದ ಎನ್ನಲಾಗಿದೆ. ಶನಿವಾರ ರಾತ್ರಿ ಹಟ್ಟಿಯಂಗಡಿ ಸಮೀಪದ ಮೀನಿನಂಗಡಿಗೆ ಆಗಮಿಸಿದ ಆತ ಯಾವುದೋ ಕಾರಣಕ್ಕೆ ಜಿಗುಪ್ಸೆಗೊಂಡು ನೇಣಿಗೆ ಕೊರಳೊಡ್ಡಿದ್ದಾರೆ ಎಂದು ಶಂಕಿಸಲಾಗಿದೆ. ಭಾನುವಾರ ಬೆಳಿಗ್ಗೆ ಆತ್ಮಹತ್ಯೆ ವಿಚಾರ ಬೆಳಕಿಗೆ ಬಂದಿದ್ದು ಇವರಿಗೆ ಪತ್ನಿ ಹಾಗೂ ಎಂಟು ವರ್ಷದ ಗಂಡು ಮಗನಿದ್ದ.

ಘಟನ ಸ್ಥಳಕ್ಕೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆ ಪ್ರಭಾರ ಪಿಎಸ್ಐ ಸುಬ್ಬಣ್ಣ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.


Spread the love

Exit mobile version