ಕುಂದಾಪುರ ಶಾಸಕರು ರಾಜಕೀಯ ಓಲೈಕೆ ಬಿಡಲಿ – ಕೆ ವಿಕಾಸ್ ಹೆಗ್ಡೆ

Spread the love

ಕುಂದಾಪುರ ಶಾಸಕರು ರಾಜಕೀಯ ಓಲೈಕೆ ಬಿಡಲಿ – ಕೆ ವಿಕಾಸ್ ಹೆಗ್ಡೆ

ಕುಂದಾಪುರ:  ಶಾಸಕ ಕಿರಣ್ ಕುಮಾರ್ ಕೊಡ್ಗಿಯವರು ಅಂಬೇಡ್ಕರ್ ಕೊಟ್ಟ ಸಂವಿಧಾನದ ಮೇಲೆ ಗೌರವ ಹಾಗೂ ನಂಬಿಕೆ ಇಲ್ಲದ ಕಾರಣ ಸರ್ಕಾರಿ ಗುತ್ತಿಗೆಯಲ್ಲಿ ಅಲ್ಪಸಂಖ್ಯಾತರಿಗೆ ನೀಡಿದ ಮೀಸಲನ್ನು ಟೀಕಿಸುತ್ತಿದ್ದಾರೆ. ಹಾಗೂ ರಾಜ್ಯದ ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಸಂವಿಧಾನ ಬದಲಾವಣೆಯ ಮಾತುಗಳನ್ನು ಆಡಲೇ ಇಲ್ಲಾ ಅವರ ಮಾತನ್ನು ತಿರುಚಿ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಕೆಲಸ ಮಾಡುತ್ತಿದ್ದಾರೆ.

ಶಾಸಕ ಕೊಡ್ಗಿಯವರಿಗೆ ಸಂವಿಧಾನದ ಬಗ್ಗೆ ತಿಳುವಳಿಕೆ ಇಲ್ಲದೆ ಇದ್ದರೆ ತಿಳಿದುಕೊಳ್ಳಬಹುದು ಅಂಬೇಡ್ಕರ್ ಸಂವಿಧಾನ ರಚನೆ ಮಾಡುವಾಗ ಕಾಲ ಕಾಲಕ್ಕೆ ತಕ್ಕಂತೆ ಅವಶ್ಯಕತೆಗೆ ಅನುಗುಣವಾಗಿ ಸಂವಿಧಾನ ತಿದ್ದುಪಡಿಗೆ ಅವಕಾಶವನ್ನು ನೀಡಿದ್ದಾರೆ ಹಾಗೂ ಹಲವು ಭಾರೀ ಸಂವಿಧಾನ ತಿದ್ದುಪಡಿಯಾಗಿದೆ. ಶಾಸಕರು ಭಾಷಣದಲ್ಲಿ ತುರ್ತುಪರಿಸ್ಥಿತಿಯ ಬಗ್ಗೆ ಹೇಳಿದರು ತುರ್ತುಪರಿಸ್ಥಿತಿ ಹೆರಲು ಕಾರಣ ಜನಸಂಘ ಹಾಗೂ ಸಂಘ ಪರಿವಾರದ ಅಂದಿನ ದೇಶ ವಿರೋಧಿ ನಿಲುವುಗಳೇ ಕಾರಣ ಅದಕ್ಕಾಗಿ ಮಾಜಿ ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿ ಸಂವಿಧಾನದ ಪೀಠಿಕೆಗೆ ತಿದ್ದುಪಡಿ ತಂದು ಜಾತ್ಯತೀತ ಪದವನ್ನು ಪೀಠಿಕೆಯಲ್ಲಿ ಸೇರಿಸಿದರು.

ಹಿಂದೆ ಕುಂದಾಪುರದ ಶಾಸಕರು ಅವರ ತಂದೆಯವರು ಕಾಂಗ್ರೆಸ್ ನಾಯಕರಾಗಿದ್ದರು, ಕಾಲಕ್ರಮೇಣ ರಾಜಕೀಯ ಬದಲಾವಣೆಯಲ್ಲಿ ಶಾಸಕರು ಬಿಜೆಪಿ ಸೇರಿ ಇಂದು ಶಾಸಕರಾಗಿದ್ದಾರೆ. ಅಂದು ಜಾತ್ಯತೀತ ನಿಲುವಿನ ಶಾಸಕರು ಇಂದು ತನ್ನ ರಾಜಕೀಯ ಲಾಭಕ್ಕಾಗಿ ಕಾಂಗ್ರೆಸ್ ಪಕ್ಷ ಒಂದು ಕೋಮಿನ ಪರವಾಗಿ ಓಲೈಕೆಯ ರಾಜಕಾರಣ ಮಾಡುತ್ತಿದೆ ಎನ್ನುವುದು ಶಾಸಕರ ರಾಜಕೀಯ ಲಾಭದ ಹೇಳಿಕೆಯಾಗಿದೆ. ಶಾಸಕರಾಗಿ ಈ ದೇಶ ಪ್ರಜೆಗಳಾದ ಅಲ್ಪಸಂಖ್ಯಾತರ ಅವಕಾಶಗಳನ್ನು ಟೀಕಿಸುವುದು ಸಂವಿಧಾನದ ಆಶಯಗಳ ಅಡಿಯಲ್ಲಿ ಗೆದ್ದುಬಂದ ಜನಪ್ರತಿನಿದಿಯ ರಾಜಕೀಯ ಪ್ರೇರಿತ ಹೇಳಿಕೆ ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಕೆ. ವಿಕಾಸ್ ಹೆಗ್ಡೆ ಪತ್ರಿಕಾ ಹೇಳಿಕೆ ಮೂಲಕ ಟೀಕಿಸಿದ್ದಾರೆ.


Spread the love
Subscribe
Notify of

0 Comments
Inline Feedbacks
View all comments