ಕುಂದಾಪುರ: ಹೋಮ್ ಕ್ವಾರಂಟೈನ್ ನಿಯಮ ಉಲ್ಲಂಘನೆ ಆರೋಪ- ವ್ಯಕ್ತಿಯ ವಿರುದ್ದ ಪ್ರಕರಣ ದಾಖಲು
ಕುಂದಾಪುರ: ಜಿಲ್ಲಾಡಳಿತ ಕೊರೋನಾ ಹರಡುವಿಕೆಯ ಬಗ್ಗೆ ಪ್ರತಿನಿತ್ಯ ಎಚ್ಚರಿಕೆ ನೀಡಿದ್ದರೂ ಕೂಡ ಕೆಲವೊಂದು ವ್ಯಕ್ತಿಗಳು ನಿರ್ಲಕ್ಷ್ಯತನ ತೋರುತ್ತಿರುವುದು ಮುಂದುವರೆದಿದ್ದು, ಕುಂದಾಪುರ ನಗರ ಠಾಣೆಯ ವ್ಯಾಪ್ತಿಯಲ್ಲಿ ವ್ಯಕ್ತಿಯೋರ್ವರು ಹೋಮ್ ಕ್ವಾರಂಟೈನ್ ನಿಯಮ ಉಲ್ಲಂಘಿಸಿ ಹೊರಗಡೆ ತಿರುಗಾಡುತ್ತಿರುವುದರ ಕುರಿತು ಪ್ರಕರಣ ದಾಖಲಾಗಿದೆ.
ಹೋಮ್ ಕ್ವಾರಂಟೈನ್ ನಿಯಮ ಉಲ್ಘಂಘಿಸಿದ ವ್ಯಕ್ತಿಯನ್ನು ಮುಂಬೈನಿಂದ ಕುಂದಾಪುರಕ್ಕೆ ಆಗಮಿಸಿದ ಸಹಬ್ ಸಿಂಗ್ ಎಂದು ಗುರುತಿಸಲಾಗಿದೆ.
ಮಾಹಿತಿಗಳ ಪ್ರಕಾರ ಸಹಬ್ ಸಿಂಗ್ ಎಂಬವರು ಮುಂಬೈ ನಿಂದ ಜೂನ್ 29ರಂದು ಬಂದು ಕುಂದಾಪುರ ತಾಲೂಕಿನ ಕೋಟೇಶ್ವರದ ಬೈಪಾಸ್ ಹತ್ತಿರದ ಚಂದ್ರ ಶೇಖರ ಶೆಟ್ಟಿಯವರ ಮಾಲಿಕತ್ವದ ಬಾಡಿಗೆ ಮನೆಯಲ್ಲಿ ವಾಸವಾಗಿರುತ್ತಾರೆ. ಅವರಿಗೆ ಜುಲೈ 13 ರ ವರೆಗೆ ಹೋಂ ಕ್ವಾರಂಟೈನ್ ಅವಧಿ ಇದ್ದು ಈ ಕ್ವಾರಂಟೈನ್ ಅವಧಿಯಲ್ಲಿ ನಿಯಮ ಉಲ್ಲಂಘನೆ ಮಾಡಿ ಉಡುಪಿಯ ಹೋಟೆಲುಗಳಿಗೆ ತಿರುಗಾಡುತ್ತಿರುವುದು ಪರಿಶೀಲನೆಯ ವೇಳೆ ಸಾಬೀತಾಗಿದೆ.
ಈ ಬಗ್ಗೆ ಫ್ಲೈಯಿಂಗ್ ಸ್ವ್ಕಾಡ್ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಎನ್ ಜಿ ಭಟ್ ಅವರು ಕುಂದಾಪುರ ಠಾಣೆಯಲ್ಲಿ ದೂರು ನೀಡಿದ್ದು ಅವರ ದೂರಿನಂತೆ ಸಹಬ್ ಸಿಂಗ್ ವಿರುದ್ದ ಪ್ರಕರಣ ದಾಖಲಾಗಿದೆ.