Spread the love
ಕುಂದಾಪುರ: 200 ವರ್ಷದ ಅರಳಿಮರ ಧರಶಾಹಿ!
ಕುಂದಾಪುರ: ನಗರದ ಚಿಕ್ಕಮ್ಮನ ಸಾಲು ರಸ್ತೆಯ ಅಮ್ಮರಸನ ಮನೆ ಬಳಿಯಿರುವ ಅಂದಾಜು 200 ರಿಂದ 250 ವರ್ಷದ ಅರಳಿ ಮರ ಗುರುವಾರ ಬೆಳಿಗ್ಗೆ ಸುರಿದ ಭಾರಿ ಮಳೆಗೆ ಧರಶಾಹಿಯಾಗಿದೆ.
ಬೃಹತ್ ಗಾತ್ರದ ಅರಳಿಮರ ಉರುಳಿ ಬಿದ್ದಿದ್ದರಿಂದ ಯಾವುದೇ ರೀತಿಯ ಪ್ರಾಣಾಪಾಯವಾಗಿಲ್ಲ. ಪಕ್ಕದ ಹಳೇಕೋಟೆ ಮನೆಯ ಕಂಪೌಂಡ್ ಒಳಗೆ ಮರ ಬಿದ್ದಿದ್ದು, ರಸ್ತೆ ಬದಿಯ ವಿದ್ಯುತ್ ಟ್ರಾನ್ಸ್ ಫಾರ್ಮರ್ ಸೇರಿದಂತೆ 4-5 ವಿದ್ಯುತ್ ಕಂಬಗಳು ತುಂಡಾಗಿವೆ.
ಸ್ಥಳಕ್ಕೆ ಅರಣ್ಯಾಧಿಕಾರಿಗಳು ಹಾಗೂ ಮೆಸ್ಕಾಂ ಸಿಬ್ಬಂದಿಗಳು ಆಗಮಿಸಿದ್ದು ಬೆಳಿಗ್ಗೆಯಿಂದಲೇ ಅರಳಿಮರವನ್ನು ತೆರವುಗೊಳಿಸುವ ಹಾಗೂ ವಿದ್ಯುತ್ ವ್ಯವಸ್ಥೆ ಸರಿಪಡಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ.
ಬುಡ ಸಹಿತ ಅರಳಿ ಮರದ ಉರುಳಿ ಬಿದ್ದ ಪರಿಣಾಮ, ಅರಳಿ ಕಟ್ಟೆಯ ಬುಡದಲ್ಲಿ ಪ್ರತಿಷ್ಠಾಪಿಸಿದ್ದ ನಾಗ ದೇವರ ಕಲ್ಲುಗಳು ಕೂಡ ಕಿತ್ತು ಬಂದು ಜಖಂಗೊಂಡಿದೆ.
Spread the love