ಕುಖ್ಯಾತ ದನ ಕಳ್ಳನ ಬಂಧನ
ಮಂಗಳೂರು : ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹಿಂಸಾತ್ಮಕ ರೀತಿಯ ದನಗಳನ್ನು ಕದ್ದೊಯ್ಯುತ್ತಿದ್ದ ವ್ಯಕ್ತಿಯನ್ನು ಪೋಲಿಸರು ಬಂಧಿಸಿದ್ದಾರೆ.
ಬಂಧಿತನನ್ನು ಮಂಗಳೂರು ನಿವಾಸಿ ನಿಝಾಮುದ್ದೀನ್ @ ನಿಝಾಮ್ (20) ಎಂದು ಗುರುತಿಸಲಾಗಿದೆ.
2017 ರ ನವೆಂಬರ್ 18 ರಂದು ಬೆಳಗ್ಗಿನ ಜಾವ 04-00 ಮಂಗಳೂರು ತಾಲೂಕು ಮಲ್ಲೂರು ಗ್ರಾಮದ ಪಲ್ಲಿಬೆಟ್ಟು ಮಸೀದಿಯ ಬಳಿ ಹಿಂಸಾತ್ಮಕ ರೀತಿಯಲ್ಲಿ ದನಕರುಗಳ ಕೈಕಾಲುಗಳನ್ನು ಕಟ್ಟಿಹಾಕಿಕೊಂಡು ಮಾರುತಿ ಓಮ್ನಿ ಕಾರಿನಲ್ಲಿ ಅಮ್ಮೆಮಾರ್ ಇಮ್ರಾನ್, ಮಲ್ಲೂರು ಉದ್ದಬೆಟ್ಟು ನಿವಾಸಿಗಳಾದ ನಿಜಾಮುದ್ದೀನ್ ಹಾಗೂ ಮುಸ್ತಾಪ ಹಾಗೂ ಮಲ್ಲೂರಿನ ಫೌಝಾನ ಎಂಬವರುಗಳು ಎಲ್ಲಿಂದಲೋ ದನಗಳನ್ನು ಕಳವು ಮಾಡಿಕೊಂಡು ಬಂದು ಗದ್ದೆಯಲ್ಲಿ ಕಟ್ಟಿ ಹಾಕುತ್ತಿದ್ದಾರೆ ಎಂಬುದಾಗಿ ಬಂದ ಮಾಹಿತಿಯಂತೆ, ಠಾಣೆಗೆ ಬಂದು ಸಿಬ್ಬಂದಿಗಳೊಂದಿಗೆ ಇಲಾಖಾ ವಾಹನದಲ್ಲಿ ಮಲ್ಲೂರು ಗ್ರಾಮದ ಪಲ್ಲಿಬೆಟ್ಟು ಎಂಬಲ್ಲಿಗೆ 05-00 ಗಂಟೆಗೆ ತಲುಪಿದಾಗ ದೂರದಿಂದಲೇ ಕಂಡ ಆರೋಪಿಗಳು ಮಾರುತಿ ಓಮ್ನಿ ಕಾರೊಂದರಲ್ಲಿ ಹತ್ತಿರ ಸ್ಥಳದಿಂದ ಪರಾರಿಯಾಗಿರುತ್ತಾರೆ.
ಆರೋಪಿಗಳಲ್ಲಿ ತಲೆಮರೆಸಿಕೊಂಡಿರುವ ಆರೋಪಿಗಳ ಪೈಕಿ ನಿಝಾಮುದ್ದೀನ್ @ ಎಂಬಾತನನ್ನು ಮಲ್ಲೂರು ಬಸ್ ಸ್ಟಾಂಡ್ ಬಳಿ ದಸ್ತಗಿರಿ ಮಾಡುವಲ್ಲಿ ರೌಡಿ ನಿಗ್ರಹ ದಳದ ಸಿಬ್ಬಂದಿಯವರು ಯಶಸ್ವಿಯಾಗಿದ್ದಾರೆ. ಈತನ ಮೇಲೆ ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ 6 ದನ ಕಳ್ಳತನದ ಪ್ರಕರಣಗಳ ದಾಖಲಾಗಿರುತ್ತದೆ.
ಈ ಕಾರ್ಯಾಚರಣೆಯಲ್ಲಿ ಮಂಗಳೂರು ದಕ್ಷಿಣ ಉಪ ವಿಭಾಗ ಎ.ಸಿ.ಪಿ ಯವರ ಆದೇಶದಂತೆ ರೌಡಿ ನಿಗ್ರಹ ದಳದ ಸಿಬ್ಬಂದಿಯವರು ಮತ್ತು ಗ್ರಾಮಾಂತರ ಠಾಣಾ ಸಿಬ್ಬಂದಿಯವರು ಪತ್ತೆ ಕಾರ್ಯದಲ್ಲಿ ಭಾಗವಹಿಸಿದರು