ಕುಖ್ಯಾತ ವಾಹನ ಕಳವು ಮತ್ತು ವಂಚನೆ ಆರೋಪಿಗಳ ಬಂಧನ
ಮಂಗಳೂರು: ವಾಹನ ಕಳವು ಮಾಡಿ ವಂಚಿಸುತ್ತಿದ್ದ ಜಾಲವನ್ನು ಮೂಲ್ಕಿ ಪೋಲಿಸರು ಪತ್ತೆ ಹಚ್ಚಿ ನಾಲ್ಕು ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತರನ್ನು ಬಳ್ಳಾರಿ ಹೊಸಪೇಟೆ ನಿವಾಸಿ ಫಯಾಜ್ (34), ಉಳ್ಳಾಲ ನಿವಾಸಿ ರೋಹನ್ ಶೈಲೇಶ್ ಡಿಸೋಜ (31), ಬಂಟ್ವಾಳ ನಿವಾಸಿ ಡೇವಿಡ್ ಕ್ಲಿಂಟನ್ (22) ಮತ್ತು ವೆಲೆನ್ಸಿಯಾ ನಿವಾಸಿ ಈಸ ರೋಶನ್ (37) ಎಂದು ಗುರುತಿಸಲಾಗಿದೆ.
ಮಾರ್ಚ್ 22 ರಂದು ಖಚಿತ ವರ್ತಮಾನ ಮೇರೆಗೆ ಮುಲ್ಲಿ ಪೊಲೀಸ್ ಠಾಣಾ ಪೋಲಿಸರು ಸಿಸಿಬಿ ಘಟಕದ ಪೋಲಿಸರೊಂದಿಗೆ ಮುಲ್ಕಿ ಠಾಣಾ ವ್ಯಾಪ್ತಿಯ ಬಪ್ಪನಾಡಿ ಚೆಕ್ ಪಾಯಿಂಟಿನಲ್ಲಿ ವಾಹನ ತಪಾಸಣೆ ಮಾಡುವಾಗ ಉಳ್ಳಾಲ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಇದೇ 2018 ನೇ ಇಸವಿಯ ಮಾರ್ಚ್ ತಿಂಗಳಲ್ಲಿ ಕಳವು ಮಾಡಿದ ಕಾರನ್ನು ಚಲಾಯಿಸಿಕೊಂಡು ಬಂದಿದ್ದ ಆರೋಪಿ ಫಯಾಜ್ ನನ್ನ ದಸ್ತಗಿರಿ ಮಾಡಿ ಆತನಿಂದ ಕಳವು ಮಾಡಿದ ಕಾರನ್ನು ವಶಪಡಿಸಿಕೊಂಡು ಆತನ ಮಾಹಿತಿಯಂತೆ ಸುರತ್ಕಲ್ ಠಾಣಾ ವ್ಯಾಪ್ತಿ ಮುಕ್ಕಾದಲ್ಲಿ ಉಳಿದ ಮೂರು ಜನ ಆರೋಪಿಗಳನ್ನು ಫಯಾಜ್ ಎಂಬಾತನಿಗೆ ಮಾರಾಟಕ್ಕೆಂದು ತಂದಿದ್ದ 4 ಕಾರುಗಳ ಸಮೇತ ವಶಕ್ಕೆ ಪಡೆದಿರುತ್ತಾರೆ.
ಆರೋಪಿಗಳಿಂದ ಕಳವು ಮತ್ತು ವಂಚನೆ ಮಾಡಿದ ಒಟ್ಟು ರೂ 50 ಲಕ್ಷ ಮೌಲ್ಯದ 5 ಕಾರು ವಶಪಡಿಸಿಕೊಂಡಿದ್ದಾರೆ.
ಆರೋಪಿತರಲ್ಲಿ ಫಯಾಜ್, ಎಂಬಾತ ಕುಖ್ಯಾತ ನಕಲಿ ಆರ್ ಸಿ ಜಾಲಾದ ಆರೋಪಿಯಾಗಿದ್ದು, ಕುಕ್ಕಾಜೆ ಅಬೂಬಕ್ಕರ್ ಸಾದಿಕ್ ಎಂಬವನ ಸಹಚರನಾಗಿರುತ್ತಾನೆ. ಉಳಿದ ಆರೋಪಿಗಳಾದ ರೋಹನ್ ಶೈಲೇಶ್ ಡಿಸೋಜಾ, ಈಶ ರೋಶನ್, ಡೇವಿಡ್ ಕ್ಲಿಂಟನ್ ಎಂಬವರ ಮೇಲೆ ಉಳ್ಳಾಲ ಪಣಂಬೂರು ಪೋಲಿಸ್ ಠಾಣೆಯಲ್ಲಿ ವಂಚನೆ ಪ್ರಕರಣ ದಾಕಲಾಗಿ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿರುತ್ತದೆ.