ಕುಡುಪು ಬ್ರಹ್ಮಕಲಶ ಧಾರ್ಮಿಕ ಸಮಾರಂಭಕ್ಕೆ ಸುಬ್ರಹ್ಮಣ್ಯ ಸ್ವಾಮೀಜಿ ಚಾಲನೆ
ಮಂಗಳೂರು: ಕುಡುಪು ಶ್ರೀಅನಂತ ಪದ್ಮನಾಭ ದೇವಸ್ಥಾನ ನಾಗರಾಧನೆಯ ಪ್ರಸಿದ್ಧ ಕ್ಷೇತ್ರವಾಗಿದ್ದು, ಬಹಳ ವರ್ಷಗಳ ಬಳಿಕ ಜೀರ್ಣೋದ್ಧಾರ ಕಾಣುತ್ತಿದೆ. ಸಮಗ್ರ ಭೂಮಿಯಲ್ಲಿ ನಾಗ ದೇವರ ಸ್ಥಾನ ಇದೆ. ಪ್ರಸಕ್ತ ನಾಗನಿಗೆ ನಿರ್ದಿಷ್ಟ ಸ್ಥಾನ ಕಲ್ಪಿಸಲಾಗಿದೆ. ನಾಗದೇವರ ಸಾನಿಧ್ಯವಿರುವ ದೇವಸ್ಥಾನಗಳಲ್ಲಿ ಕುಡುಪು ಶ್ರೀ ಅನಂತ ಪದ್ಮನಾಭ ದೇವಸ್ಥಾನ ಕೂಡಾ ಒಂದು ಎಂದು ಸುಬ್ರಹ್ಮಣ್ಯ ಮಠದ ವಿದ್ಯಾಪ್ರಸನ್ನ ತೀರ್ಥ ಶ್ರೀಪಾದರು ಹೇಳಿದರು.
ಅವರು ಕುಡುಪು ಅನಂತ ಪದ್ಮನಾಭ ದೇವಸ್ಥಾನದ ಅನಂತ ಪದ್ಮನಾಭ ವೇದಿಕೆಯಲ್ಲಿ ಬ್ರಹ್ಮಕಲಶೋತ್ಸವ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಆಶೀರ್ವಚನ ನೀಡಿ ಮಾತನಾಡಿದರು.
ಕುಡುಪು ಶ್ರೀ ಅನಂತ ಪದ್ಮನಾಭ ದೇವಸ್ಥಾನ ಜನ ನಂಬಿಕೆಯ ಆರಾಧನಾ ಕೇಂದ್ರ. ಶ್ರದ್ಧಾ ಭಕ್ತಿಯ ಕ್ಷೇತ್ರದÀಲ್ಲಿ ಸಂಸ್ಕøತಿ ದೇವಸ್ಥಾನದ ಅವಿಭಾಜ್ಯ ಅಂಗವಾಗಿದೆ. ಕುಡುಪು ಅನಂತ ಪದ್ಮನಾಭ ದೇವಸ್ಥಾನದಲ್ಲಿ ಬಹ್ಮಕಲಶ ಕಾರ್ಯ ಉತ್ತಮವಾಗಿ ನಡೆಯಲಿ. ಎಲ್ಲರಿಗೂ ಇದರ ಸೌಭಾಗ್ಯ ದೊರಕಲಿ ಎಂದು ತಿಳಿಸಿದರು.
ಶಾಸಕ ಜೆ.ಆರ್.ಲೋಬೋ ಮಾತನಾಡಿ, ಕುಡುಪು ಅನಂತ ಪದ್ಮನಾಭ ದೇವಸ್ಥಾನದಲ್ಲಿ ನಡೆಯುವ ಪ್ರತಿಯೊಂದು ಕಾರ್ಯಗಳು ಉತ್ತಮವಾಗಿ ನಡೆಯುತ್ತವೆ. ಈ ದೇವಸ್ಥಾನ ತುಳುನಾಡಿನ ಅವಿಭಾಜ್ಯ ಅಂಗ. ತುಳುನಾಡಿನ ಆರಾಧನಾ ಕೇಂದ್ರ ಕೂಡಾ ಹೌದು. ಈ ದೇವಸ್ಥಾನದ ಮೇಲೆ ಎಲ್ಲರಿಗೂ ನಂಬಿಕೆ ವಿಶ್ವಾಸ ಇದೆ. ವಿಭಿನ್ನ ಸಂಸ್ಕøತಿ ಕೂಡಾ ಇಲ್ಲಿ ಕಾಣ ಸಿಗುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಮೊಯ್ದಿನ್ ಬಾವಾ ಮಾತನಾಡಿ, ದೇವಸ್ಥಾನ, ಚರ್ಚ್ ಯಾವುದೇ ಇರಲಿ, ಇದು ದೇವರ ಆರಾಧನಾ ಕೇಂದ್ರ, ಈ ದೇವಸ್ಥಾನದ ಮೇಲೆ ಅಪಾರ ನಂಬಿಕೆ ಇದೆ. ದೇವಸ್ಥಾನ ಅಭಿವೃದ್ಧಿಯಾಗಲು ಇಲ್ಲಿರುವ ವಿಭಿನ್ನ ಸಂಸ್ಕøತಿ, ಆರಾಧನೆ, ನಂಬಿಕೆ ಕಾರಣ. ನಂಬಿಕೆಯ ಮೇರೆಗೆ ಭಕ್ತಾದಿಗಳು ಈ ದೇವಸ್ಥಾನಕ್ಕೆ ಬರುತ್ತಾರೆ. ದೇವಸ್ಥಾನದಲ್ಲಿ ನಡೆಯುವ ಪೂಜೆ ಪುರಸ್ಕಾರಗಳಿಗೆ ಗೌರವ ಕೊಡುವ ಕೆಲಸ ನಮ್ಮದಾಗಿದೆ ಎಂದರು.
ಮಾಜಿ ಸಚಿವ ಕೃಷ್ಣ ಜೆ. ಪಾಲೇಮಾರ್, ಉಪಮೇಯರ್ ರಜನೀಶ್ ಮಾತನಾಡಿದರು. ರಾಜ್ಯ ಧಾರ್ಮಿಕ ಪರಿಷತ್ ಸದಸ್ಯ ಪದ್ಮನಾಭ ಕೋಟ್ಯಾನ್, ಮನಪಾ ಸದಸ್ಯೆ ಹೇಮಲತಾ ಸುಂದರಶೆಟ್ಟಿ, ಚಂದ್ರಹಾಸರೈ, ಮಂಜುನಾಥ ಭಂಡಾರಿ, ಸುದರ್ಶನ ಕುಡುಪು, ಮನೋಹರ ಭಟ್ ಭಾಸ್ಕರ ಕೆ. ಮೊದಲಾದವರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಕ್ಷೇತ್ರ ನಿರ್ಮಾಣದಲ್ಲಿ ಸೇವೆ ಸಲ್ಲಿಸಿದ ಮಹನೀಯರನ್ನು ಗೌರವಿಸಲಾಯಿತು. ಎಂ.ರಾವ್ ಪ್ರಾರ್ಥನೆ ಮಾಡಿದರು. ಕೆ. ಕೃಷ್ಣರಾಜ ತಂತ್ರಿ ಅತಿಥಿಗಳನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವಾಸುದೇವ ಕುಡುಪು ಕಾರ್ಯಕ್ರಮ ನಿರೂಪಣೆ ಮಾಡಿದರು.