ಕುತ್ತಾರು ಯುವಕನ ಹಲ್ಲೆ ಪ್ರಕರಣ : ಆಸ್ಪತ್ರೆಗೆ ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಭೇಟಿ

Spread the love

ಕುತ್ತಾರು ಯುವಕನ ಹಲ್ಲೆ ಪ್ರಕರಣ : ಆಸ್ಪತ್ರೆಗೆ ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಭೇಟಿ

ಮಂಗಳೂರು: ಶನಿವಾರ ರಾತ್ರಿ ದುಷ್ಕರ್ಮಿಗಳಿಂದ ಶನಿವಾರ ಸಂಜೆ ಹಲ್ಲೆಗೊಳಗಾದ ಯುವಕ ಚಿರಂಜೀವಿಯ ಯೋಗಕ್ಷೇಮ ವಿಚಾರಿಸಲು ಡಿವೈಎಫ್ ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಕೆ.ಎಸ್ ಹೆಗ್ಡೆ ಆಸ್ಪತ್ರೆಗೆ ಭೇಟಿ ನೀಡಿದರು.

ಈ ವೇಳೆ ಮಾತನಾಡಿದ ಅವರು “ಕುತ್ತಾರು ಪ್ರದೇಶದಲ್ಲಿ ಇಂತಹ 2 ಪ್ರಕರಣ ಈ ಹಿಂದೆಯೂ ನಡೆದಿದೆ, ಆದರೆ ಪೊಲೀಸ್ ಇಲಾಖೆ ದುಷ್ಕರ್ಮಿಗಳನ್ನು ಪತ್ತೆಹಚ್ಚುವಲ್ಲಿ ವಿಫಲವಾಗಿದೆ. ನಿನ್ನೆ ಕೂಡ ಅದೇ ರೀತಿಯಲ್ಲಿ ಹಲ್ಲೆ ನಡೆದಿದ್ದು, ಇದರಿಂದ ಜನ ಸಂಜೆ ಹೊತ್ತಿನಲ್ಲಿ ನಡೆದಾಡಿಕೊಂಡು ಹೋಗಲು ಭಯಪಡುವಂತಾಗಿದೆ. ಜಿಲ್ಲೆಯಲ್ಲಿ ಅನೇಕ ದಿನಗಳಿಂದ ನಡೆಯುತ್ತಿರುವ ಗಲಭೆಗಳು ಜನರಲ್ಲಿ ಭಯವನ್ನು ಹುಟ್ಟು ಹಾಕಿದೆ. ಇದನ್ನು ಮಟ್ಟಹಾಕಲು ಪೊಲೀಸ್ ಇಲಾಖೆ ಇನ್ನಷ್ಟು ಕಟ್ಟುನಿಟ್ಟಿನ ಕ್ರಮವನ್ನು ಕೈಗೊಳ್ಳಬೇಕಿದೆ” ಎಂದರು.

ಉಳ್ಳಾಲ ವಲಯ ಕಾರ್ಯದರ್ಶಿ ಜೀವನ್ ರಾಜ್ ಕುತ್ತಾರ್, ಎಸ್ ಎಫ್ ಐ ಜಿಲ್ಲಾಧ್ಯಕ್ಷರಾದ ನಿತಿನ್ ಕುತ್ತಾರ್ ಮುಖಂಡರಾದ ಸುನೀಲ್ ತೇವುಲ, ಭರತ್ ಜೊತೆಗಿದ್ದರು


Spread the love