ಕುದ್ಕಾಡಿ ವಿಶ್ವನಾಥ ರೈಯವರು ನೃತ್ಯದ ಮೂಲಕ ತುಳು ಭಾಷೆಯ ಮಾನ್ಯತೆಗಾಗಿ ಹೋರಾಡಿದರು- ಪ್ರೊ. ವಿವೇಕ ರೈ
ಮಂಗಳೂರು: ನಮ್ಮನಗಲಿದ ಹಿರಿಯ ತುಳು ವಿದ್ವಾಂಸ ಕುದ್ಕಾಡಿ ವಿಶ್ವನಾಥ ರೈ ಅವರದು ಬಹುಮುಖ ಪ್ರತಿಭೆಯ ವ್ಯಕ್ತಿತ್ವ. ಮುಖ್ಯವಾಗಿ ನೃತ್ಯ ಪ್ರಕಾರದ ಮೂಲಕ ತುಳು ಭಾಷೆಯ ಮಾನ್ಯತೆಗಾಗಿ ಸಾಕಷ್ಟು ಕೊಡುಗೆ ನೀಡಿದ ಅಪರೂಪದ ತುಳು ಅಭಿಮಾನಿ ಎಂದು ಪ್ರೊ. ವಿವೇಕ ರೈಯವರು ಹೇಳಿದರು.
ಇತ್ತೀಚೆಗೆ ನಿಧನರಾದ ಹಿರಿಯ ವಿದ್ವಾಂಸ ಹಾಗೂ ನೃತ್ಯ ಗುರು ಕುದ್ಕಾಡಿ ವಿಶ್ವನಾಥ ರೈಯವರಿಗೆ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸಿರಿ ಚಾವಡಿಯಲ್ಲಿ ಆಯೋಜಿಸಲಾದ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕರ್ನಾಟಕ ತುಳು ಸಾಹತ್ಯ ಅಕಾಡೆಮಿಯ ಮೊದಲ ಸಾಲಿನ ಅದ್ಯಕ್ಷನಾಗಿದ್ದ ಅವದಿಯಲ್ಲಿ ಕುದ್ಕಾಡಿಯವರು ಕೂಡಾ ಅಕಾಡೆಮಿಯ ಸದಸ್ಯರಾಗಿದ್ದರು. ತುಳು ಭಾಷೆ ಹಾಗೂ ಸಂಸ್ಕøತಿಯ ಬೆಳವಣಿಗೆಗಾಗಿ ಅವರ ಜೊತೆಯಾಗಿ ಕೆಲಸ ಮಾಡುವ ಅವಕಾಶವು ನನಗೆ ಲಬಿಸಿತ್ತು. ಶಿಕ್ಷಕರಾಗಿ, ನೃತ್ಯಗುರುವಾಗಿ, ಕನ್ನಡ ತುಳು ಲೇಖಕರಾಗಿ, ಸಂಶೋಧಕರಾಗಿ ಅಪಾರವಾದ ಜ್ಞಾನ ಸಂಶೋಧನ ಪ್ರವೃತ್ತಿ ಹೊಂದಿದ ಅಪೂರ್ವ ವ್ಯಕ್ತಿಯಾಗಿದ್ದರು.
ನಾನು ಅವರು ಒಟ್ಟಾಗಿ ವಿದ್ಯಾಭ್ಯಾಸ ಮಾಡುತಿದ್ದವನು ಎಂದ ಡಾ. ವಾಮನ್ ನಂದಾವರರವರು ಅವರ ಯವ್ವನ ಪ್ರಾಯದ ನೆನಪನ್ನು ಮೆಲುಕು ಹಾಕಿದರು.
ಅದ್ಯಕ್ಷತೆ ವಹಿಸಿದ್ದ ಅಕಾಡೆಮಿಯ ಅದ್ಯಕ್ಷರಾದ ಎ.ಸಿ.ಭಂಡಾರಿಯವರು ಮಾತನಾಡಿ, ಕುದ್ಕಾಡಿಯವರು ತುಳುವಿನ ಯಾವುದೇ ಕಾರ್ಯಕ್ರಮವಿರಲಿ ಸಮ್ಮೇಳನವಿರಲಿ ಅಲ್ಲಿ ್ಲ ಕಾಣಿಸಿಕೊಡು ತನ್ನ ನಿಲುವನ್ನು ಎತ್ತಿ ತೋರಿಸುವ ವ್ಯಕ್ತಿತ್ವ ಅವರದೆಂದರು.
ಅಕಾಡೆಮಿ ರಿಜಿಸ್ಟಾರ್ ಚಂದ್ರಹಾಸ ರೈ ಬಿ. ಸದಸ್ಯರುಗಳಾದ ತಾರಾನಾಥ ಗಟ್ಟಿ ಕಾಪಿಕಾಡ್, ಬೆನೆಟ್ ಜಿ. ಅಮ್ಮನ್ನ, ಪ್ರಭಾಕರ ನೀರುಮಾರ್ಗ, ಪ್ರಭಾಕರ ಬಿ. ಹಾಗೂ ಅಭಿಮಾನಿಗಳು ಭಾಗವಹಿಸಿದ್ದರು.