Home Mangalorean News Kannada News ಕುದ್ರೋಳಿ ಕ್ಷೇತ್ರಕ್ಕೆ ಬೆಳ್ತಂಗಡಿ ಬಿಷಪ್ ಸೌಹಾರ್ದ ಭೇಟಿ

ಕುದ್ರೋಳಿ ಕ್ಷೇತ್ರಕ್ಕೆ ಬೆಳ್ತಂಗಡಿ ಬಿಷಪ್ ಸೌಹಾರ್ದ ಭೇಟಿ

Spread the love

ಕುದ್ರೋಳಿ ಕ್ಷೇತ್ರಕ್ಕೆ ಬೆಳ್ತಂಗಡಿ ಬಿಷಪ್ ಸೌಹಾರ್ದ ಭೇಟಿ
 

ಮಂಗಳೂರು: ‘ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಜಾತಿ ಮತ ಬೇಧವಿಲ್ಲದೆ ನಡೆಯುತ್ತಿರುವ ದಸರಾ ಉತ್ಸವ ನಾಡಿಗೇ ಮಾದರಿ’ ಎಂದು ಸಿರೋ-ಮಲಬಾರ್ ಬೆಳ್ತಂಗಡಿ ಧರ್ಮಪ್ರಾಂತ್ಯದ   ಬಿಷಪ್ ‌ಲಾರೆನ್ಸ್ ಮುಕುಝಿ ಹೇಳಿದರು.

ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರಕ್ಕೆ ಸೋಮವಾರ ಸೌಹಾರ್ದ ಭೇಟಿ ನೀಡಿ ದೇವರ ದರ್ಶನ ಪಡೆದ ಅವರು, ಕ್ಷೇತ್ರದಲ್ಲಿ ನಡೆಯುತ್ತಿರುವ ನವರಾತ್ರಿ ಉತ್ಸವ ಹಾಗೂ ದಸರಾ ಮಹೋತ್ಸವದಲ್ಲಿ ಪಾಲ್ಗೊಂಡರು.

‘ನಾವೆಲ್ಲರೂ ದೇವರ ಮಕ್ಕಳು.ಮಾನವರಿಗೆ ಒಂದೇ ಜಾತಿ ಒಂದೇ ಮತ ಒಂದೇ ದೇವರು ಎಂದು ಜಗತ್ತಿಗೆ ಸಾರಿದ ಬ್ರಹ್ಮಶ್ರೀ ನಾರಾಯಣಗುರುಗಳಂತಹ ಮಹಾಪುರುಷರ ಸಿದ್ಧಾಂತ ಇಂದಿನ ಸಮಾಜಕ್ಕೆ ಅಗತ್ಯ’ ಎಂದರು.

ಕುದ್ರೋಳಿ ಕ್ಷೇತ್ರದ ಅಧ್ಯಕ್ಷ ಎಚ್.ಎಸ್.ಸಾಯಿರಾಂ, ಪ್ರಧಾನ ಕಾರ್ಯದರ್ಶಿ ಮಾಧವ ಸುವರ್ಣ, ಖಜಾಂಚಿ ಪದ್ಮರಾಜ್ ಆರ್. , ಕ್ಷೇತ್ರದ ಅಭಿವೃದ್ಧಿ ಸಮಿತಿ ಅಧ್ಯಕ್ಷ ದೇವೇಂದ್ರ ಪೂಜಾರಿ, ಸದಸ್ಯರಾದ ರಾಧಾಕೃಷ್ಣ, ಮುಂಬೈ ಭಾರತ್ ಕೋ ಆಪರೇಟಿವ್ ಬ್ಯಾಂಕಿನ ಅಧ್ಯಕ್ಷ ಸೂರ್ಯಕಾಂತ್ ಜೆ. ಸುವರ್ಣ ಅವರು ‌ಲಾರೆನ್ಸ್ ಮುಕುಝಿ ಅವರನ್ನು ಆತ್ಮೀಯವಾಗಿ ಕ್ಷೇತ್ರಕ್ಕೆ ಬರಮಾಡಿಕೊಂಡರು.

ಕಂಕನಾಡಿ ಆಲ್ಫೋನ್ಸ್ ಚರ್ಚ್ ಧರ್ಮಗುರು ಫಾ.ಮಾಣಿ, ಬೆಳ್ತಂಗಡಿ ಧರ್ಮಪ್ರಾಂತ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಸೆಬಾಸ್ಟಿಯನ್ ಕೆ.ವಿ ಇದ್ದರು


Spread the love

Exit mobile version