ಕುಮಾರಸ್ವಾಮಿ ಬಜೆಟ್ ವಿರುದ್ದ ಕರಾವಳಿ ಶಾಸಕರ ಪ್ರತಿಭಟನೆ ಕೇವಲ ಪ್ರಚಾರ ತಂತ್ರ; ಪ್ರಮೋದ್ ಮಧ್ವರಾಜ್
ಉಡುಪಿ: ಕುಮಾರಸ್ವಾಮಿಯವರು ಮಂಡಿಸಿದ ಬಜೆಟಿನಲ್ಲಿ ಕರಾವಳಿಗೆ ಅನ್ಯಾಯ ಮಾಡಿದ್ದಾರೆ ಎಂದು ಬಿಜೆಪಿ ಶಾಸಕರು ಪ್ರತಿಭಟಿಸುತ್ತಿರುವ ಕೇವಲ ಪ್ರಚಾರಕ್ಕಾಗಿ ಮಾತ್ರ ಬಿಟ್ಟರೆ ಅವರಿಗೆ ಕರಾವಳಿಯ ಬಗ್ಗೆ ಯಾವುದೇ ಕಾಳಜಿ ಇಲ್ಲ ಎಂದು ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಕಿಡಿಕಾರಿದ್ದಾರೆ.
ಅವರು ಶುಕ್ರವಾರ ಉಡುಪಿ ಪ್ರೆಸ್ ಕ್ಲಬ್ಬಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಬಜೆಟಿನಲ್ಲಿ ಕರಾವಳಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಕರಾವಳಿಯ ಶಾಸಕರು ಬಜೆಟ್ ಮಂಡನೆಯ ಎರಡು ದಿನದ ಮುಂಚೆ ಮುಖ್ಯಮಂತ್ರಿಯವರಲ್ಲಿ ಹೋಗಿ ಬೇಡಿಕೆ ಇಟ್ಟಿದ್ದು ಅದಾಗಲೇ ಬಜೆಟ್ ಪುಸ್ತಕ ಮುದ್ರಣಗೊಂಡಿರುತ್ತದೆ. ನಿಜವಾಗಿಯೂ ಇವರಿಗೆ ಕರಾವಳಿಯ ಅಭಿವೃದ್ಧಿಯ ಬಗ್ಗೆ ಕಾಳಜಿ ಇದ್ದರೆ ಮುಂಚಿತವಾಗಿಯೇ ಹೋಗಿ ಭೆಟಿ ಮಾಡಿ ಅಹವಾಲನ್ನು ನೀಡುತ್ತಿದ್ದರು ಎಂದರು.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಕೇವಲ ಹಿಂದುತ್ವದ ಅಜೆಂಡಾ ಇಟ್ಟುಕೊಂಡು ಚುನಾವಣೆ ಗೆದ್ದಿದ್ದು, ಅಭಿವೃದ್ಧಿಯನ್ನು ಸಂಪೂರ್ಣ ಮರೆತಿದೆ. ಕರಾವಳಿಗೆ ಅನ್ಯಾಯವಾಗಿದೆ ಎಂದು ಹೇಳುತ್ತಿರುವ ಶಾಸಕರು ಇವರದ್ದೇ ಆದ ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಕಳೆದ ನಾಲ್ಕು ವರ್ಷಗಳಲ್ಲಿ ಕರಾವಳಿ ಜಿಲ್ಲೆಗಳಿಗೆ ಏನು ನೀಡಿಲ್ಲ ಆದ್ದರಿಂದ ಅವರು ಪ್ರತಿಭಟನೆ ಮಾಡಬೇಕಾಗಿರುವುದು ಕುಮಾರಸ್ವಾಮಿಯ ವಿರುದ್ದ ಅಲ್ಲ ಬದಲಾಗಿ ಕೇಂದ್ರ ಸರಕಾರದ ವಿರುದ್ದ ಎಂದರು.
ಸದಾ ಹಿಂದುತ್ವ ಎಂದು ಹೇಳುವ ಬಿಜೆಪಿಗರು ಹಿಂದುಗಳಿಗೆ ಯಾವುದೇ ಉಪಯೋಗ ಮಾಡಿಲ್ಲ ಆದರೆ ಕುಮಾರಸ್ವಾಮಿ ಈ ಬಾರಿಯ ಬಜೆಟಿನಲ್ಲಿ ಹಿಂದು ಮಠಗಳಿಗೆ ಹೆಚ್ಚಿನ ಅನುದಾನ ನೀಡಿದೆ ಅಲ್ಲದೆ ಬ್ರಾಹ್ಮಣರಿಗೆ ಪ್ರತ್ಯೇಕ ನಿಗಮವನ್ನು ಕೂಡ ಮಾಡಿದ್ದು ಇದರಿಂದ ಕುಮಾರಸ್ವಾಮಿ ಹಿಂದುಗಳ ಕಾಳಜಿ ಯಾವ ರೀತಿಯಲ್ಲಿ ತೋರಿದ್ದಾರೆ ಎಂದು ಬಜೆಟಿನಲ್ಲಿ ತೋರಿಸಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ನಗರಸಭಾಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ಕಾಂಗ್ರೆಸ್ ನಾಯಕರಾದ ಸತೀಶ್ ಅಮೀನ್ ಪಡುಕೆರೆ, ದೀನೇಶ್ ಪುತ್ರನ್, ಭಾಸ್ಕರ್ ರಾವ್ ಕಿದಿಯೂರು, ನರಸಿಂಹಮೂರ್ತಿ ಉಪಸ್ಥಿತಿರಿದ್ದರು.