ಕುಮಾರಸ್ವಾಮಿ ಹುಟ್ಟುಹಬ್ಬ ವಿಶಿಷ್ಟ ಆಚರಣೆ: ದಕ ಯುವ ಜೆಡಿಎಸ್ ವತಿಯಿಂದ ಬಡ ವ್ಯಕ್ತಿಯ ಮನೆ ಪೂರ್ಣಗೊಳಿಸಲು ನೆರವು
ಮಂಗಳೂರು: ಮಾಜಿ ಮುಖ್ಯಮಂತ್ರಿ ಜೆಡಿಎಸ್ ನಾಯಕರಾದ ಕುಮಾರಸ್ವಾಮಿಯವರ 58ನೇ ಹುಟ್ಟುಹಬ್ಬವನ್ನು ದಕ್ಷಿಣ ಕನ್ನಡ ಜಿಲ್ಲಾ ಯುವ ಜೆಡಿಎಸ್ ವತಿಯಿಂದ ವಿಶಿಷ್ಟವಾಗಿ ಆಚರಿಸಲಾಯಿತು.
ಮಂಗಳೂರು ತಾಲೂಕಿನ ದೇರಳಕಟ್ಟೆಯ ಕಡಂಬಿಲ ಗ್ರಾಮದಲ್ಲಿ ವಾಸ್ತವ್ಯ ಇರುವ ಕಡು ಬಡವರಾದ ಸಂತೋಷ್ ಅವರು ನಿರ್ಮಾಣ ಮಾಡುತ್ತಿದ್ದ ಮನೆ ಅರ್ಧದಲ್ಲೇ ನಿಂತಿದ್ದು, ಅದನ್ನು ಪೂರ್ಣಗೊಳಿಸಲು ಕಷ್ಟಪಡುವುದನ್ನು ಕಂಡು ಮರುಗಿದ ಯುವ ಜೆಡಿಎಸ್ ಅಧ್ಯಕ್ಷ ಅಕ್ಷಿತ್ ಸುವರ್ಣ ಅವರು ಸಂತೋಷ್ ಅವರ ಮನೆಯನ್ನು ಪೂರ್ಣಗೊಳಿಸುವ ನಿಟ್ಟಿನಲ್ಲಿ ಅವರಿಗೆ 25 ಚೀಲ ಸಿಮೆಂಟ್ ಒದಗಿಸಿದ್ದು, ಅಲ್ಲದೆ ಅವರಿಗೆ ಬೇಕಾದ ಹೊಯಿಗೆ ಕೂಡ ನೀಡುವ ಭರವಸೆಯನ್ನು ನೀಡಿದ್ದಾರೆ.
ಈ ಕುರಿತು ಮ್ಯಾಂಗಲೋರಿಯನ್ ಪ್ರತಿನಿಧಿಯೊಂದಿಗೆ ಮಾತನಾಡಿದ ಅಕ್ಷಿತ್ ಸುವರ್ಣ ಅವರು ನಮ್ಮ ನಾಯಕರಾದ ಕುಮಾರಸ್ವಾಮಿಯವರು ಬಡವರ ಕುರಿತು ವಿಶೇಷ ಕಾಳಜಿಯನ್ನು ಹೊಂದಿದವರಾಗಿದ್ದು ಅದನ್ನು ತಮ್ಮ 20 ತಿಂಗಳ ಅವಧಿಯ ಆಡಳಿತದಲ್ಲಿ ತೋರಿಸಿಕೊಟ್ಟಿದ್ದಾರೆ. ರಾಜ್ಯದಾದ್ಯಂತ ಅತೀ ಕಡು ಬಡವರ ಮನೆಯಲ್ಲಿ ವಾಸ್ತವ್ಯ ಮಾಡುವುದರೊಂದಿಗೆ ಗ್ರಾಮ ವಾಸ್ತವ್ಯ ಕಾರ್ಯಕ್ರಮಕ್ಕೆ ಹೊಸ ದಿಶೆಯನ್ನು ತೋರಿಸಿದ ನಮ್ಮ ನಾಯಕರ ಹುಟ್ಟುಹಬ್ಬವನ್ನು ಕೇವಲ ಸಿಹಿತಿಂಡಿ ವಿತರಿಸಿ ಆಚರಣೆ ಮಾಡುವುದರಲ್ಲಿ ಯಾವುದೇ ಅರ್ಥವಿಲ್ಲ ಬದಲಾಗಿ ಯಾವುದಾದರೊಂದು ನೆನಪಿನಲ್ಲಿ ಉಳಿಯುವ ಕೆಲಸ ಮಾಡಬೇಕು ಎನ್ನುವ ಉದ್ದೇಶ ಇತ್ತು ಅದಕ್ಕೆ ತಕ್ಕಂತೆ ನಮ್ಮ ಸಂಘಟನೆಗೆ ಮನವಿ ಬಂದ ಹಿನ್ನಲೆಯಲ್ಲಿ ಅದನ್ನು ಕೈಗೆತ್ತಿಕೊಳ್ಳುವ ನಿರ್ಧಾರ ಮಾಡಿದ್ದು ಅದರಂತೆ 25 ಚೀಲ ಸಿಮೆಂಟ್ ಇಂದು ನೀಡಲಾಗಿದೆ. ಸದ್ಯ ಅವರ ಮನೆಯ ಗಾರೆ ಕೆಲಸ ಬಾಕಿ ಇದ್ದು, ಅದಕ್ಕೆ ಬೇಕಾದ ಸಿಮೆಂಟ್ ನೀಡಲಾಗಿದೆ ಅಲ್ಲದೆ ಅದಕ್ಕೆ ಬೇಕಾದ ಹೊಯಿಗೆ ಕೂಡ ಜಿಲ್ಲಾ ಯುವ ಜೆಡಿಎಸ್ ವತಿಯಿಂದ ನೀಡಲು ತೀರ್ಮಾನಿಸಲಾಗಿದೆ. ನಮ್ಮ ಈ ಕೆಲಸ ಕೊನೆತನಕ ಕುಮಾರಸ್ವಾಮಿಯವರ ಹುಟ್ಟುಹಬ್ಬದ ನೆನಪಿಗೆ ಉಳಿಯುತ್ತದೆ ಎಂಬುದು ಧನ್ಯತಾ ಭಾವ ನಮಗೆ ಬರುತ್ತದೆ.
ಇದೇ ಅಲ್ಲದೆ ಈ ಮೊದಲು ಕೂಡ ರಾಜ್ಯದ ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಅವರ ಜನ್ಮದಿನಾಚರಣೆಯನ್ನು ಕೂಡ ವೈಟ್ ಡೌಸ್ ಅವರ ಆಶ್ರಮದಲ್ಲಿನ ವೃದ್ಧರಿಗೆ ಹಣ್ಣು ಹಂಪಲು ವಿತರಣೆ ಮಾಡುವುದರೊಂದಿಗೆ ಅಲ್ಲದೆ ಜಿಲ್ಲಾ ಯುವ ಜೆಡಿಎಸ್ ಅಧ್ಯಕ್ಷನಾದ ನನ್ನ ಹುಟ್ಟಿದ ದಿನವನ್ನು ಕೂಡ ಮಂಗಳೂರಿನ ಹೆಚ್ ಐ ವಿ ಪೀಡಿತರೊಂದಿಗೆ ಸೇರಿ ಸಿಹಿತಿಂಡಿ ವಿತರಿಸುವುದರ ಮೂಲಕ ಆಚರಣೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸಮಾಜಪರ ಕೆಲಸಗಳನ್ನು ಮಾಡಲು ಕೂಡ ಜಿಲ್ಲಾ ಯುವ ಜೆಡಿಎಸ್ ವತಿಯಿಂದ ಆಲೋಚಿಸಲಾಗಿದೆ ಎಂದರು.
ಸಂದರ್ಭದಲ್ಲಿ ಜೆಡಿಎಸ್ ರಾಜ್ಯ ಕಾರ್ಯದರ್ಶಿಯಾದ ಶ್ರೀನಾಥ್ ರೈ, ಜಿಲ್ಲಾ ಜೆಡಿಎಸ್ ಸಂಘಟನಾ ಕಾರ್ಯದರ್ಶಿ ಯಾದ ಕಿಶೋರ್ ಶೆಟ್ಟಿ , ಜಿಲ್ಲಾ ಜೆಡಿಎಸ್ ಕಾರ್ಯದರ್ಶಿಯಾದ ತೇಜಸ್ ಶೆಟ್ಟಿ ಅಲ್ಲದೆ ಖಲಂದರ್ ಮತ್ತು ಫೈಝಲ್ ಉಪಸ್ತಿತರಿದ್ದರು.