ಕುವೆಂಪು ಆಶಿಸಿದಂತೆ ನಾವು ವಿಶ್ವಮಾನವರಾಗೋಣ; ರತ್ನಾಕರ್ ರಾವ್ 

Spread the love

ಕುವೆಂಪು ಆಶಿಸಿದಂತೆ ನಾವು ವಿಶ್ವಮಾನವರಾಗೋಣ; ರತ್ನಾಕರ್ ರಾವ್ 

ಮಂಗಳೂರು : ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಮಂಜುನಾಥ ಎಜುಕೇಷನ್ ಟ್ರಸ್ಟ್ ಹಾಗು ಹೃದಯ ವಾಹಿನಿ ಕರ್ನಾಟಕ  ಮಂಗಳೂರು ಆಶ್ರಯದಲ್ಲಿ ಕನ್ನಡ ಚಿಂತನ ಮತ್ತು ಸಾಂಸ್ಕೃತಿಕ ಸೌರಭ ಕಾರ್ಯಕ್ರಮವು ನಗರದ ಉರ್ವ ಸ್ಟೋರ್ ಯುವವಾಹಿನಿ ಸಭಾಂಗಣದಲ್ಲಿ ನಡೆಯಿತು.

ಹಿರಿಯ ಪತ್ರಕರ್ತ ರತ್ನಾಕರ್ ರಾವ್ ಕಾವೂರ್ ಸಭಾರಂಭವನ್ನು ಉದ್ಘಾಟಿಸಿದರು. ತಮ್ಮ ಭಾಷಣದಲ್ಲಿ ಅವರು ಇಂತಹ ಕಾರ್ಯಕ್ರಮಗಳು ನಮಗೆ ಕನ್ನಡದ ಬಗ್ಗೆ ಸ್ಫೂರ್ತಿಯನ್ನುಂಟು ಮಾಡುತ್ತವೆ.ನಾವು ಕನ್ನಡದ್ದಲ್ಲೇ ಹೆಚ್ಚಾಗಿ ವ್ಯವಹರಿಸಬೇಕು.ಕನ್ನಡ ಕಾರ್ಯಕ್ರಮಗಳಿಗೆ ಪ್ರೋತ್ಸಾಹ ನೀಡಬೇಕು ಎಂದರು.ನಮ್ಮ ಜನರು ಇವತ್ತು ಯಾವುದಕ್ಕೂ ಪುರುಸೊತ್ತು ಇಲ್ಲದ ಒತ್ತಡದ ಜೀವನ ನಡೆಸುತ್ತಿದ್ದಾರೆ. ಹೊರಗಿನ ಯಾವುದೇ ವಿಷಯದ ಬಗ್ಗೆ, ಭಾಷೆ, ಸಾಹಿತ್ಯ, ಕಲೆಗಳ ಬಗ್ಗೆ ತಲೆ ಕೆಡಿಸಿಕೊಳ್ಳುವ ಗೋಜಿಗೆ ಹೋಗದೆ ಕೇವಲ ತಮ್ಮ ದೈನಂದಿನ ಕೆಲಸದ ಬಗ್ಗೆ ಮಾತ್ರ ಯೋಚಿಸುತ್ತಾರೆ.ಈ ಪ್ರವೃತ್ತಿ ಬದಲಾಗಬೇಕು.ಒಳ್ಳೆಯ ಕೆಲಸ ಮಾಡಲು ಯೋಗ ಬೇಕು. ಒಳ್ಳೆಯ ಕೆಲಸ ಪ್ರೋತ್ಸಾಹಿಸಲೂ ಯೋಗ ಬೇಕು ಎಂದರು. ಕರುನಾಡಿಗರು ಸೌಹಾರ್ದತೆಯಲ್ಲಿ ನಂಬಿಕೆ ಇಟ್ಟವರು, ನಮದು ಕೆರಳಿಸುವ ಸಂಸ್ಕೃತಿ ಅಲ್ಲ. ಅರಳಿಸುವ ಸಂಸ್ಕೃತಿ, ಕನ್ನಡದ ಸಂಸ್ಕೃತಿ ಎಂದರು.

ಇಂಗ್ಲೆಂಡ್ ನ ಬ್ರಿಸ್ಟಾಲ್ ನಲ್ಲಿ ನೆಲೆಸಿರುವ ಲೇಖಕ ಯೋಗೀಂದ್ರ ಮರವಂತೆ ಕನ್ನಡ ಚಿಂತನ ಉಪನ್ಯಾಸ ನೀಡಿದರು.ನಮಗೆ ಇಂಗ್ಲಿಷ್ ಅಲ್ಲದೆ ಇತರ ಅನೇಕ ಭಾಷೆ ಗೊತ್ತು ಅಂತ ತಿಳಿದಾಗ ಇಂಗ್ಲೆಂಡ್ ನವರಿಗೆ ಆಶ್ಚರ್ಯ ವಾಗುತ್ತದೆ. ನಾವು ಇಂಗ್ಲೆಂಡ್ ನಲ್ಲಿ ಕನ್ನಡ ಸಂಘ ಸಂಸ್ಥೆ ಕಟ್ಟಿದ್ದೇವೆ.ಕನ್ನಡ ಚಲನಚಿತ್ರ ಪ್ರದರ್ಶನ ಮಾಡಿದ್ಲೇವೆ.ನಮ್ಮ ಮಕ್ಕಳಿಗೆ ಕನ್ನಡ ಮಾತನಾಡುವಂತೆ ಪ್ರೇರೇಪಿಸುತ್ತಿದ್ದೇವೆ.ಕನ್ನಡದ ಅಸ್ಮಿತೆ ಯನ್ನು ಕಾಪಾಡಿಕೊಂಡು ಬಂದಿದ್ದೇವೆ ಎಂದರು.ಹುಟ್ಟುವಾಗ ನಾವೆಲ್ಲ ವಿಶ್ವಮಾನವರು.ಬೆಳೆಯುತ್ತ ಅಲ್ಪ ಮಾನವರಾಗುವುದು ದುರಂತ. ವಿಶ್ವಕವಿ ಕುವೆಂಪು ಆಶಿಸಿದಂತೆ ನಾವು ವಿಶ್ವಮಾನವರಾಗೋಣ ಎಂದರು.ಕೀನ್ಯ ಕನ್ನಡ ಸಾಂಸ್ಕೃತಿಕ ಸಂಘದ ಪೂರ್ವಾಧ್ಯಕ್ಷ ರಾಮ.ಕೆ.ಶಿರೂರ್ ಮಾತನಾಡಿ ಕೀನ್ಯ ದಲ್ಲಿ ಎರಡು ದಿನಗಳ ಕಾಲ ವಿಶ್ವ ಕನ್ನಡ ಸಾಂಸ್ಕೃತಿಕ ಸಮ್ಮೇಳನವನ್ನು ಅದ್ದೂರಿಯಾಗಿ ನಡೆಸಲು ಸಹಕರಿಸಿದವರು ಹೃದಯ ವಾಹಿನಿ – ಕರ್ನಾಟಕ ಬಳಗ.ಆ ಸಮ್ಮೇಳನದಲ್ಲಿ ಕರ್ನಾಟಕದ ಜಾನಪದ ನೃತ್ಯ, ಡೊಳ್ಳು ಕುಣಿತ, ಯಕ್ಷಗಾನ ಇತ್ಯಾದಿಗಳನ್ನು ಪ್ರಪ್ರಥಮವಾಗಿ ಆಫ್ರಿಕಾದಲ್ಲಿ ಪ್ರದರ್ಶಿಸಿದ ಹಗ್ಗಳಿಕೆ ಹೃದಯ ವಾಹಿನಿ – ಕರ್ಣಾಟಕ ಕ್ಕಿ ಸಲ್ಲುತ್ತದೆ .ಕನ್ನಡ ಮಾತನಾಡುವುದೆಂದರೆ ನಮಗೆ ಹೆಮ್ಮೆಯ, ಅಭಿಮಾನದ ವಿಷಯ.ಕನ್ನಡ ರಾಜ್ಯೋತ್ಸವ ವನ್ನು ವಿಜೃಂಭಣೆಯಿಂದ ನಾವು ಅಲ್ಲಿ ಆಚರಿಸುತ್ತಿದ್ದೇವೆ.ಕೀನ್ಯ ದಲ್ಲಿ ಈಗ ಕನ್ನಡ ಲಿಪಿ ಕಲಿಸುವ ಅಭಿಯಾನ ಆರಂಭಿಸಿದ್ದೇವೆ ಎಂದರು.
ಬೆಹರೇನ್ ಕಾಂಚನ ಪ್ರತಿಷ್ಠಾನ ಸಂಚಾಲಕ ಲೀಲಾಧರ ಬೈಕಂಪಾಡಿ ಮಾತನಾಡುತ್ತ ಕರ್ನಾಟಕದಿಂದ ಬಹುದೂರ ಇರುವ ನಮಗೆ ತಾಯ್ನಾಡು,ತಾಯ್ನುಡಿ ಬಗ್ಗೆ ಬಹಳ ಅಭಿಮಾನವಿದೆ.ಕವಿವಾಣಿಯಂತೆ ಎಲ್ಲೇ ಇರಲಿ,ಹೇಗೇ ಇರಲಿ ನಾವು ಎಂದೆಂದಿಗೂ ಕನ್ನಡಿಗರಾಗಿ ಬಾಳುತ್ತಿದ್ದೇವೆ ಎಂದರು.ಹೃದಯವಾಹಿನಿ ಸಂಘಟನೆ ಒಳ್ಳೆಯ ಕೆಲಸ ಮಾಡುತ್ತಿದೆ.ಭಾವನೆ, ಸಂಬಂಧ ಗಳಿಲ್ಲದೆ ಹೋದರೆ ಬದುಕು ಬರಡಾಗುತ್ತದೆ.ಕನ್ನಡ ಭಾಷಾಭಿಮಾನ, ಕನ್ನಡ ಸಂಸ್ಕೃತಿ ನಮ್ಮ ಜೀವನವನ್ನು ಅರ್ಥ ಪೂರ್ಣ ಗೊಳಿಸುತ್ತದೆ ಎಂದರು.
ರಾಷ್ಟ್ರ ಪ್ರಶಸ್ತಿ ವಿಜೇತ ರಿಜರ್ ವೇಶನ್ ಚಲನಚಿತ್ರ ನಿರ್ಮಾಪಕ ಯಾಕೂಬ್ ಖಾದರ್ ಗುಲ್ವಾಡಿ ತಾವು ಮಂಜುನಾಥ ಸಾಗರ್ ರವರ ಒಡನಾಟದಿಂದ ಹೇಗೆ ಬೆಳೆಸಿದೆ ಎಂದು ಹೇಳಿದರು.ಗುಜರಿ ವ್ಯಾಪಾರಿ ಯಾದ ತನ್ನನ್ನು ಭಾಷಣಕಾರನಾಗಿ ಬೆಳೆಸಿದ್ದು ಮಂಜುನಾಥ್ ಸಾಗರ್ ಹಾಗೂ ಅವರ ಕನ್ನಡ ಕಾರ್ಯಕ್ರಮಗಳು ಎಂದರು.ಅವರಿಂದ ಕನ್ನಡ ಕಟ್ಟುವ ಕೆಲಸ ಹೀಗೆ ನಿರಂತರವಾಗಿ ಸಾಗಲಿ ಎಂದರು.ನಿವೃತ್ತ ಬ್ಯಾಂಕ್ ಅಧಿಕಾರಿ ಮುಂಬಯಿಯ ಎನ್.ಪಿ.ಸುವರ್ಣ ಮಾತನಾಡಿ ಇಂತಹ ಕಾರ್ಯಕ್ರಮಗಳಿಂದ ಕನ್ನಡ ಉಳೀತದೆ,ಬೆಳೀತದೆ.ಇಂತಹ ಕಾರ್ಯಕ್ರಮ ಅಲ್ಲಲ್ಲಿ ನಡೆಯಲಿ ಎಂದು ಹಾರೈಸಿದರು.
ಸಮಾರಂಭದ ಅಂಗವಾಗಿ ಸಾಂಪ್ರದಾಯಿಕ ಕಲೆಗಳನ್ನು ಉಳಿಸಿ,ಬೆಳೆಸುವ ಉದ್ದೇಶದಿಂದ ಮಹಿಳೆಯರಿಗಾಗಿ ರಂಗೋಲಿ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.

ಹೃದಯವಾಹಿನಿ ಕರ್ನಾಟಕ ಮಂಗಳೂರು ಅಧ್ಯಕ್ಷ ಇಂ. ಕೆ.ಪಿ.ಮಂಜುನಾಥ ಸಾಗರ್ ಅಧ್ಯಕ್ಷತೆ ವಹಿಸಿದ್ದರು. ತಮ್ಮ ಭಾಷಣದಲ್ಲಿ ಅವರು ಪ್ರತೀ ತಿಂಗಳು ಇಂತಹ ಕಾರ್ಯಕ್ರಮವನ್ನು ಕನ್ನಡ ಉಳಿಸಲು,ಬೆಳೆಸಲು ರಾಜ್ಯದ ಮೂಲೆ ಮೂಲೆ ಗಳಲ್ಲಿ, ಹೊರ ರಾಜ್ಯ ಗಳಲ್ಲಿ ಹಾಗೂ ವಿದೇಶಗಳಲ್ಲಿ ಕೂಡ ನಡೆಸಿಕೊಂಡು ಬರುತ್ತಿದ್ದೇವೆ ಎಂದರು.ಕನ್ನಡಿಗರ ಸಹಕಾರ ನಿರಂತರವಾಗಿ ದೂೆರಕುತ್ತಿರುವುದಕ್ಕೆ ಕೃತಜ್ಞತೆ ತಿಳಿಸಿದರು.
ರವಿ.ಎಂ.ಕುಲಶೇಖರ ನಿರೂಪಣೆ ಯೊಂದಿಗೆ ಸ್ವಾಗತಿಸಿದರು. ಸಾಹಿತಿ ಕಾಸರಗೋಡು ಅಶೋಕ್ ಕುಮಾರ್ ವಂದಿಸಿದರು


Spread the love