ಕೃಷಿಯಲ್ಲಿ ಸೂಕ್ಷ್ಮ ಜೀವಿಗಳ ಬಳಕೆ ಕಾರ್ಯಾಗಾರ
ಮೂಡುಬಿದಿರೆ: ಭಾರತದಲ್ಲಿ 2.82 ಲಕ್ಷ ಕೃಷಿ-ಇನ್ಪುಟ್ ವಿತರಕರು ಕೆಲಸ ನಿರ್ವಹಿಸುತಿದ್ದಾರೆ. ಅವರು ರೈತರ ಕೃಷಿ ಮಾಹಿತಿಯ ಪ್ರಧಾನ ಮೂಲವಾಗಿದ್ದಾರೆ. ಕೃಷಿ ಕಾರ್ಯಾಚರಣೆಗಳಿಗೆ ಅಗತ್ಯವಾದ ವಸ್ತುಗಳನ್ನು ಖರೀದಿಸುವಾಗ, ರೈತ ಸ್ವಾಭಾವಿಕವಾಗಿ ಇನ್ಪುಟ್ ಮಾರಾಟಗಾರರನ್ನು ಅವಲಂಬಿಸುತ್ತಾನೆ. ಆದರೆ ಹೆಚ್ಚಿನ ಇನ್ಪುಟ್ ವಿತರಕರು ಈ ಹಿನ್ನಲೆಯಲ್ಲಿ ಔಪಚಾರಿಕ ಕೃಷಿ ಶಿಕ್ಷಣವನ್ನು ಹೊಂದಿಲ್ಲ. ಇನ್ಪುಟ್ ವಿತರಕರನ್ನು ಪ್ಯಾರಾ-ಎಕ್ಸ್ಟೆನ್ಶನ್ ವೃತ್ತಿಪರರನ್ನಾಗಿ ರೂಪಿಸಲು ಹಾಗೂ ವಿಸ್ತರಣಾ ಸೇವೆಗಳನ್ನು ವೃತ್ತಿಪರಗೊಳಿಸಲು ಕೇಂದ್ರ ಸರ್ಕಾರ ‘’ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಅಗ್ರಿಕಲ್ಚರ್ ಎಕ್ಸ್ಟೆನ್ಶನ್ ಮ್ಯಾನೇಜ್ಮೆಂಟ್’’ ಒಂದು ವರ್ಷದ ಡಿಪೆÇ್ಲಮಾ ಕೋರ್ಸ್ನ್ನು ‘ಡಿಪೆÇ್ಲಮಾ ಇನ್ ಅಗ್ರಿಕಲ್ಚರಲ್ ಎಕ್ಸ್ಟೆನ್ಶನ್ ಸರ್ವೀಸಸ್ ಫಾರ್ ಇನ್ಪುಟ್ ಡೀಲರ್ಸ್ (ದೇಸಿ)’ ಎಂಬ ಹೆಸರಿನಲ್ಲಿ ವಿನ್ಯಾಸಗೊಳಿಸಿದೆ ಎಂದು `ದೇಸಿ’ ಕೋರ್ಸನ ಫೆಸಿಲೀಟೇಟರ್ ರಂಜನ್ ಶೆಟ್ಟಿ ಹೇಳಿದರು.
ಆಳ್ವಾಸ್ ಕಾಲೇಜಿನ ಸ್ನಾತಕೋತ್ತರ ಜೈವಿಕ ತಂತ್ರಜ್ಞಾನ ವಿಭಾಗದ ವತಿಯಿಂದ ಆಯೋಜಿಸಿದ ಕೃಷಿ ಪರಿಕರ ಮಾರಾಟಗಾರರಿಗೆ ಕೃಷಿ ವಿಸ್ತರಣ ಸೇವೆಗಳ ಡಿಪ್ಲೊಮೋ ವಿದ್ಯಾರ್ಥಿಗಳಿಗೆ ‘’ಕೃಷಿಯಲ್ಲಿ ಸೂಕ್ಷ್ಮ ಜೀವಿಗಳ ಬಳಕೆ’’ ಕಾರ್ಯಾಗಾರದಲ್ಲಿ ಮಾತನಾಡಿದರು.
ಅವರು ಕೃಷಿಯಲ್ಲಿ ಮುಖ್ಯವಾಗಿ ರೈತರು ಎಂತಹ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು ಯಾರ್ಯಾರ ಸಲಹೆಗಳನ್ನು ಪಡೆದರೆ ಉತ್ತಮ ಎನ್ನುವುದರ ಕುರಿತು ಮಾತನಾಡಿದರು. ಈ ಕಾರ್ಯಗಾರದಲ್ಲಿ ದೇಸಿ ಕೋರ್ಸ್ನ ಕೊಲ್ಲೂರು, ಭಟ್ಕಳ, ಮಂಗಳೂರು ಮುಂತಾದ ಪ್ರದೇಶದಿಂದ ಆಗಮಿಸಿದ್ದ ಸುಮಾರು 40 ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಕಾಲೇಜಿನ ಪ್ರಾಂಶುಪಾಲ ಡಾ. ಕುರಿಯನ್ ಮಾತನಾಡಿ, `ಸೂಕ್ಷ್ಮಾಣುಗಳಿಗಿಂತ ಸೂಕ್ಷ್ಮ ಜೀವಿಗಳು ರೈತರು’. ತಮ್ಮ ಬೆಳೆಯ ಉತ್ತಮ ಇಳುವರಿಗಾಗಿ ಮಧ್ಯವರ್ತಿಗಳ ಮಾತನ್ನು ನಂಬಿ ಮಣ್ಣಿಗೆ ಅನೇಕ ಬಗೆಯ ಕೀಟನಾಶಕ, ರಾಸಯನಿಕ ಗೊಬ್ಬರಗಳನ್ನು ಬಳಸಿ ಮಣ್ಣಿನ ಫಲವತ್ತತೆಯನ್ನು ಕ್ಷೀಣಿಸಿಕೊಳ್ಳುತ್ತಾರೆ ಎಂದರು.
ಈ ಕಾರ್ಯಗಾರದಲ್ಲಿ `ದೇಸಿ’ ಡಿಪ್ಲೊಮೋದ ವಿದ್ಯಾರ್ಥಿಗಳು ‘’ಲ್ಯಾಂಡ್ ಟು ಲ್ಯಾಬ್’’ ಪರಿಕಲ್ಪನೆಯಡಿಯಲ್ಲಿ ಕೃಷಿಯಲ್ಲಿ ಸೂಕ್ಷ್ಮ ಜೀವಿಗಳ ಬಳಕೆ ಕುರಿತು ಮಾಹಿತಿ ಪಡೆದರು. ಸ್ನಾತಕೋತ್ತರ ಜೈವಿಕ ತಂತ್ರಜ್ಞಾನ ವಿಭಾಗದ ಸಹ-ಪ್ರಾಧ್ಯಪಕ ಡಾ. ರಾಘವೇಂದ್ರ ಸ್ವಾಗತಿಸಿದರು. ವಿಭಾಗದ ಮುಖ್ಯಸ್ಥ ಡಾ. ರಾಮ್ ಭಟ್ ವಂದಿಸಿದರು. ವಿದ್ಯಾರ್ಥಿ ನಳಿನ ನಿರೂಪಿಸಿದರು.